ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಅವುಗಳ ಅನುಷ್ಠಾನ ಕಾರ್ಯ ಆರಂಭಗೊಂಡಿದೆ.
ಯಲಹಂಕದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಲಾಗಿದೆ. ಅವುಗಳ ಕಾರ್ಯಾರಂಭ ಮಾಡಲಾಗಿದೆ. ರಾಜ್ಯದಲ್ಲಿ ಅಧಿಕ ಮಳೆಯಿಂದಾಗಿ ಸರ್ಕಾರಿ ಶಾಲಾ ಕಟ್ಟಡಗಳು ಹಾನಿಗೊಳಗಾಗಿದ್ದು, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ನಬಾರ್ಡ್ ಸಹಯೋಗದೊಂದಿಗೆ 29 ಜಿಲ್ಲೆಗಳಲ್ಲಿನ 3243 ಸರ್ಕಾರಿ ಶಾಲೆಗಳ 6143 ಕೊಠಡಿಗಳ ಮರು ನಿರ್ಮಾಣ ಕಾಮಗಾರಿಗಳಿಗೆ 71 8.67 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ನೂತನ ವಿಭಾಗ ಕಚೇರಿ ಆರಂಭ, 423.15 ಕೋಟಿ ಮೊತ್ತದ ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ, 4762 ಕೋಟಿ ಮೊತ್ತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮೂಲಸೌಕರ್ಯ ಇಲಾಖೆಯ ಸಹಯೋಗದಲ್ಲಿ 17 ಕೋಟಿ ವೆಚ್ಚದಲ್ಲಿ ಬೀದರ್ ವಿಮಾನ ನಿಲ್ದಾಣ ಕಾರ್ಯಾರಂಭ ಹಾಗೂ 220 ಕೋಟಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಯೋಜನೆ ಪ್ರಗತಿಯಲ್ಲಿದೆ.
ನೆರೆ ಹಾವಳಿಯಿಂದ ಹಾನಿಗೊಳಗಾಗಿ ಪುನರ್ ನಿರ್ಮಾಣಗೊಂಡ ಹಾಗೂ ದುರಸ್ಥಿಯಾದ ಮನೆಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ 1190.11 ಕೋಟಿ ರೂ.ಗಳನ್ನು ಸಂತ್ರಸ್ತರ ಖಾತೆಗೆ ನೇರವಾಗಿ ಬಿಡುಗಡೆ ಮಾಡಲಾಗಿದೆ. ಕೆರೆ ತುಂಬಿಸುವ ಯೋಜನೆಗಳು ನಾಲಾ ಆಧುನೀಕರಣ ಕಾಮಗಾರಿಗಳು ಹಾಗೂ ಏತ ನೀರಾವರಿ ಕಾಮಗಾರಿಗಳು 7379.92 ಕೋಟಿ ಮೊತ್ತದ 27 ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ರಾಜ್ಯದ ಎಲ್ಲಾ ಗ್ರಾಮಗಳ ಜನರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಜಲಧಾರೆ ಕಾರ್ಯಕ್ರಮಕ್ಕೆ 53 ಸಾವಿರ ಕೋಟಿ ರೂಗಳ ಅಂದಾಜು ಮೊತ್ತವನ್ನು ಪರಿಗಣಿಸಲಾಗಿದೆ. ಭಾರಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ ಮತ್ತು ಸೇತುವೆಗಳ ಪುನಾರಚನೆ, ನವೀಕರಣ ಮತ್ತು ಪುನರ್ ನಿರ್ಮಾಣ ಕಾರ್ಯಕ್ಕಾಗಿ 1067 ಕೋಟಿ ಬಿಡುಗಡೆ.
ಮುಖ್ಯಮಂತ್ರಿಗಳ ನವನಗರ ಉತ್ತಾನ ಯೋಜನೆಯಲ್ಲಿ 843 4 ಕೋಟಿ ಬೆಂಗಳೂರು ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಅನುಮೋದನೆ. ಧಾರವಾಡ ಬೆಳಗಾವಿ ನೂತನ ರೈಲು ಮಾರ್ಗ ಯೋಜನೆಗೆ ತಾತ್ವಿಕ ಅನುಮೋದನೆ ನೀಡಿದ್ದು, ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ಹೊಸ ರೈಲು ಮಾರ್ಗ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಚಾಲನೆಯಲ್ಲಿದೆ. ಕರ್ನಾಟಕ ಐಟಿ, ಐಟಿಇಎಸ್, ಇನ್ನೋವೇಶನ್ ಇನ್ಸೆಂಟಿವ್ಸ್ ನೀತಿ ಘೋಷಣೆ ಮಾಡಿದ್ದು, ನೂತನ ಕೈಗಾರಿಕಾ ನೀತಿ ಪ್ರಕಟಿಸಲಾಗಿದೆ.
ಕರ ಸಮಾಧಾನ ಯೋಜನೆ ಅಡಿ ವರ್ತಕರು ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ 420 ಕೋಟಿ ದಂಡ ಸಾವಿರದ 168 ಕೋಟಿ ಬಡ್ಡಿಯನ್ನು ಕರಸಮಾಧಾನ ಯೋಜನೆಯ ಅಡಿಯಲ್ಲಿ ಮನ್ನಾ ಮಾಡಲಾಗಿದೆ.