ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ 2020-21ನೇ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಆನ್-ಲೈನ್ ಮೂಲಕ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸುತ್ತಿದೆ. ಸ್ನಾತಕೋತ್ತರ ಕೋರ್ಸಿನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿರುವ ಕಾರಣ ಸೀಟುಗಳ ಹಂಚಿಕೆ ಹಾಗೂ ಶುಲ್ಕಪಾವತಿ ಸೇರಿದಂತೆ ಎಲ್ಲ ಪ್ರಕ್ರಿಯೆ ಆನ್-ಲೈನ್ ಮೂಲಕವೇ ನಡೆಸಲಿದೆ.
ವಿಶ್ವವಿದ್ಯಾಲಯಕ್ಕೆ ಸ್ನಾತಕೋತ್ತರ ಕೋರ್ಸಿನ ಪ್ರವೇಶಾತಿಗಾಗಿ ಒಟ್ಟು 15,539 ಅರ್ಜಿಗಳು ಸ್ವೀಕೃತಗೊಂಡಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.20ರಷ್ಟು ಹೆಚ್ಚಿಗೆ ಅರ್ಜಿಗಳು ಸ್ವೀಕೃತಗೊಂಡಿವೆ. ಒಟ್ಟು 58 ಸ್ನಾತಕೋತ್ತರ ವಿಭಾಗಗಳು ಮತ್ತು 14 ಸ್ನಾತಕೋತ್ತರ ಸರ್ಟಿಫಿಕೇಟ್/ಡಿಪ್ಲೊಮಾ ಕೋರ್ಸುಗಳು ಇವೆ.
ವಿಶ್ವವಿದ್ಯಾಲಯವು ಪ್ರಕಟಿಸಿದ್ದ ಮೆರಿಟ್ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಯಾವಕಾಶವನ್ನು ನೀಡಲಾಗಿದೆ. ಎಲ್ಲಾ ಆಕ್ಷೇಪಣೆಗಳನ್ನು ಸರಿಪಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ವಿಶ್ವವಿದ್ಯಾಲಯದ ವೆಬ್ ಸೈಟ್ https://bangaloreuniversity.ac.in/ನಲ್ಲಿ ಪ್ರಕಟಿಸಲಾಗಿದೆ. ಆನ್-ಲೈನ್ ಮೂಲಕ ಪ್ರವೇಶ ಪ್ರಕ್ರಿಯೆ ಕುರಿತು 3000ಕ್ಕೂ ಹೆಚ್ಚಿನ ಅಭ್ಯರ್ಥಿಗಳೊಂದಿಗೆ ಕುಲಪತಿ ಆನ್-ಲೈನ್ ಮೂಲಕ ಸಂವಾದ ನಡೆಸಿದರು.
ಆನ್-ಲೈನ್ ಪ್ರವೇಶ ಪ್ರಕ್ರಿಯೆಯ ದಿನಾಂಕಗಳು ಕೆಳಕಂಡಂತಿವೆ:
• 18-01-2021 (ಮಧ್ಯಾಹ್ನ 12.00ಗಂಟೆಗೆ): ಮೊದಲ ಸುತ್ತಿನ ಸೀಟು ಹಂಚಿಕೆ ಮತ್ತು ಸೂಪರ್ ನ್ಯೂಮರರಿ ಸೀಟುಗಳು
• 20-01-2021 (ಮಧ್ಯರಾತ್ರಿಯವರೆಗೂ): ಮೊದಲ ಸುತ್ತಿನ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ
• 22-01-2021 (ಮಧ್ಯಾಹ್ನ 12.00ಗಂಟೆಗೆ): ಎರಡನೇ ಸುತ್ತಿನ ಸೀಟು ಹಂಚಿಕೆ ಮತ್ತು ಸೂಪರ್ ನ್ಯೂಮರರಿ ಸೀಟುಗಳು
• 25-01-2021 (ಮಧ್ಯರಾತ್ರಿಯವರೆಗೂ): ಎರಡನೇ ಸುತ್ತಿನ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ
• 27-01-2021 (ಮಧ್ಯಾಹ್ನ 12.00ಗಂಟೆಗೆ): ಮೂರನೇ ಸುತ್ತಿನ ಸೀಟು ಹಂಚಿಕೆ ಮತ್ತು ಸೂಪರ್ ನ್ಯೂಮರರಿ ಸೀಟುಗಳು
• 29-01-2021 (ಮಧ್ಯರಾತ್ರಿಯವರೆಗೂ): ಮೂರನೇ ಸುತ್ತಿನ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ
• 01-02-2021 (ಮಧ್ಯಾಹ್ನ 12.00ಗಂಟೆಗೆ): ಅಂತಿಮ ಸುತ್ತಿನ ಸೀಟು ಹಂಚಿಕೆ ಮತ್ತು ಸೂಪರ್ ನ್ಯೂಮರರಿ ಸೀಟುಗಳು
• 03-02-2021 (ಮಧ್ಯರಾತ್ರಿಯವರೆಗೂ): ಅಂತಿಮ ಸುತ್ತಿನ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ