ETV Bharat / city

ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಭಿಕ್ಷೆ ಬೇಡೋದ್ರಲ್ಲಿ ತಪ್ಪೇನಿದೆ: ಎಸ್.ಟಿ.ಸೋಮಶೇಖರ್ - Karnataka Political News

ಕ್ಷೇತ್ರದ ಅಭಿವೃದ್ಧಿಗಾಗಿ ಭಿಕ್ಷೆ ಬೇಡುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಅನರ್ಹ ಶಾಸಕ ಎಸ್​.ಟಿ. ಸೋಮಶೇಖರ್ ಹೇಳಿದರು.

ಅನರ್ಹ ಶಾಸಕ ಎಸ್​.ಟಿ. ಸೋಮಶೇಖರ್
author img

By

Published : Sep 20, 2019, 5:09 PM IST

Updated : Sep 20, 2019, 8:23 PM IST

ಬೆಂಗಳೂರು: ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನದ ಭಿಕ್ಷೆ ಬೇಡೋದ್ರಲ್ಲಿ ತಪ್ಪೇನಿದೆ? ಎಂದು ಅನರ್ಹ ಶಾಸಕ‌ ಎಸ್.ಟಿ.ಸೋಮಶೇಖರ್ ಹೇಳಿದ್ರು.

ಎಸ್.ಟಿ.ಸೋಮಶೇಖರ್

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಮ್ಮ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಹುಲಿಗಳ ಹಾಗೆ ಇದ್ದವರು, ಈಗ ಕ್ಷೇತ್ರದ ಅಭಿವೃದ್ಧಿಗಾಗಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಹೇಳಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್, ನಾವು ಯಾವತ್ತಿದ್ದರೂ ಹುಲಿಗಳೇ. ಕ್ಷೇತ್ರದ ಅಭಿವೃದ್ದಿಗೋಸ್ಕರ ಸರ್ಕಾರದ ಬಳಿ ಅನುದಾನ ಭಿಕ್ಷೆ ಬೇಡೋದರಲ್ಲಿ ತಪ್ಪೇನಿದೆ. ನಾವು ಕಾಂಗ್ರೆಸ್ ಬಿಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಬಿಜೆಪಿ ಸೇರುತ್ತೇವೆ ಅಂತಾನೂ ಹೇಳಿಲ್ಲ. ಸುಪ್ರೀಂಕೋರ್ಟ್​ನಲ್ಲಿ ಸೆ.23 ರಂದು ಈ ಕುರಿತ ವಿಚಾರಣೆ ಇದೆ. ಆಮೇಲೆ ನೋಡೋಣ ಎಂದು ಸೂಚ್ಯವಾಗಿ ತಿಳಿಸಿದ್ರು.

'ಪರಮೇಶ್ವರ್ ಮೂಲೆಗುಂಪು ಮಾಡೋಕೆ ಸಾಧ್ಯವಿಲ್ಲ'

ಡಾ. ಜಿ. ಪರಮೇಶ್ವರ್, ಸಿದ್ದರಾಮಯ್ಯ ಹಾವು ಮುಂಗುಸಿ ಹಾಗೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​ನಲ್ಲಿ ಪರಮೇಶ್ವರ್ ಅವರನ್ನು ಯಾರಿಂದಲೂ ಅವರನ್ನು ಮೂಲೆಗುಂಪು ಮಾಡೋಕೆ ಸಾಧ್ಯವಿಲ್ಲ. ಪರಮೇಶ್ವರ್ ಬಿಟ್ಟು ಪಕ್ಷ ಕಟ್ಟುತ್ತೇವೆ ಅನ್ನೋದು ಭ್ರಮೆ. ಜಾತಿ, ಶಿಕ್ಷಣ, ಹಣ ಹೀಗೆ ಎಲ್ಲದರಲ್ಲೂ ಅವರು ಬಲಿಷ್ಠವಾಗಿದ್ದಾರೆ. ಡಿಸಿಎಂ ಆಗುವ ವೇಳೆಯೂ ಅವರಿಗೆ ಕಿರಿಕಿರಿ ಮಾಡಿದರು ಎಂದು ವಿವರಿಸಿದರು.

'ತೀರ್ಪು ನಮ್ಮ ಪರವಾಗಿಯೇ ಬರುತ್ತೆ'

ನಾವು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇವೆ. ನಮ್ಮನ್ನು ಉಚ್ಛಾಟನೆ ಮಾಡೋರು ಯಾರು? ನಾವಿನ್ನೂ ಮೂರು ವರ್ಷ ಶಾಸಕರಾಗಿಯೇ ಇರುತ್ತೇವೆ. ಅದಕ್ಕಾಗಿ ಸುಪ್ರೀಂಕೋರ್ಟ್‌ಗೆ ಹೋಗಿದ್ದೇವೆ. ನಮ್ಮ ಪರವಾಗಿ ತೀರ್ಪು ಬರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

ಮಧ್ಯಂತರ ಚುನಾವಣೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಜೆಡಿಎಸ್‌ನವರಿಗೆ ಏನು ಕೆಲಸ ಇಲ್ಲ. ಅನರ್ಹ ಶಾಸಕರದ್ದೇ ಜಪ. ಮಧ್ಯಂತರ ಚುನಾವಣೆ ಬಗ್ಗೆ ಸಿದ್ದರಾಮಯ್ಯಗೆ ಗೊತ್ತಾ? ಆ ಬಗ್ಗೆ ಚುನಾವಣಾ ಆಯೋಗ ನಿರ್ಧಾರ ಮಾಡಬೇಕು ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ರು.

Intro:Body:KN_BNG_04_STSOMASHEKAR_BYTE_SCRIPT_7201951

ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನದ ಭಿಕ್ಷೆ ಬೇಡೋದ್ರಲ್ಲಿ ತಪ್ಪೇನಿದೆ: ಎಸ್.ಟಿ.ಸೋಮಶೇಖರ್

ಬೆಂಗಳೂರು: ಹುಲಿ ಎಲಿದ್ದರೂ ಹುಲಿಯೇ. ನಾವು ಈಗಲೂ ಹುಲಿಗಳೇ. ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನದ ಭಿಕ್ಷೆ ಬೇಡೋದ್ರಲ್ಲಿ ತಪ್ಪೇನಿದೆ ಎಂದು ಅನರ್ಹ ಶಾಸಕ‌ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದರು.

ದಿನೇಶ್ ಗುಂಡೂರಾವ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಭಿಕ್ಷೆ ಬೇಡೋದರಲ್ಲಿ ತಪ್ಪೇನಿದೆ. ನಾವು ಕಾಂಗ್ರೆಸ್ ಬಿಡುತ್ತೇವೆ ಅಂತಾ ಎಲ್ಲೂ ಹೇಳಿಲ್ಲ. ಬಿಜೆಪಿ ಸೇರುತ್ತೇವೆ ಅಂತಾನೂ ಹೇಳಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಸೆ.23 ರಂದು ವಿಚಾರಣೆ ಇದೆ.ಅಮೇಲೆ ನೋಡೋಣ,ಎಲ್ಲಿಗೆ ಏನು ಅನ್ನೋದನ್ನಾ ಎಂದು ಮಾರ್ಮಿಕವಾಗಿ ತಿಳಿಸಿದರು.

ಪರಮೇಶ್ವರ್ ಸಿದ್ದರಾಮಯ್ಯ ಹಾವು ಮುಂಗುಸಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಪರಮೇಶ್ವರ್ ಮೂಲೆಗುಂಪು ಮಾಡೋಕೆ ಸಾಧ್ಯವಿಲ್ಲ. ಯಾರಿಂದಲೂ ಅವರನ್ನ ಮೂಲೆಗುಂಪು ಮಾಡೋಕೆ ಸಾಧ್ಯವಿಲ್ಲ. ಪರಮೇಶ್ವರ್ ಬಿಟ್ಟು ಪಕ್ಷ ಕಟ್ಟುತ್ತೇವೆ ಅನ್ನೋದು ಭ್ರಮೆ. ಎಲ್ಲದರಲ್ಲೂ ಅವರು ಸಮರ್ಥರಿದ್ದಾರೆ. ಜಾತಿ, ಶಿಕ್ಷಣ, ಹಣ ಎಲ್ಲದರಲ್ಲೂ ಬಲಿಷ್ಠವಾಗಿದ್ದಾರೆ. ಡಿಸಿಎಂ ಆಗುವ ವೇಳೆಯೂ ಅವರಿಗೆ ಕಿರಿಕಿರಿ ಮಾಡಿದರು ಎಂದು ವಿವರಿಸಿದರು.

ಅವರು ಎಲ್ಲಿಯೂ ನೋವನ್ನ ತೋಡಿಕೊಳ್ಳಲಿಲ್ಲ. ಹಾಗಂತ ಅವರು ವೀಕ್ ಅಂತ ತಿಳಿದುಕೊಳ್ಳಬೇಡಿ. ಸಿದ್ದರಾಮಯ್ಯ ಕಿರಿಕಿರಿ ಕೊಟ್ರು ಅಂತ ಹೇಳಲ್ಲ. ಸಿದ್ದರಾಮಯ್ಯ, ಪರಮೇಶ್ವರ್ ಇಬ್ಬರೂ ಸ್ನೇಹಿತರು. ನೀವುಗಳಷ್ಟೇ ಹಾವು,ಮುಂಗುಸಿ ತರ ತೋರಿಸುತ್ತೀರ.ಸಮಯ ಬಂದಾಗ ಯಾರು ಕಿರಿಕಿರಿ ಕೊಟ್ರು ಅಂತ ಹೇಳುತ್ತೇನೆ. ಪರಮೇಶ್ವರ್ ಗೆ ಕಿರಿಕಿರಿ ಕೊಟ್ಟವರ ಬಗ್ಗೆ ಹೇಳುತ್ತೇನೆ ಎಂದು ತಿಳಿಸಿದರು.

ನಾವು ಕಾಂಗ್ರೆಸ್ ಪಕ್ಷವನ್ನ ಕಟ್ಟಿದ್ದೇವೆ. ನಮ್ಮನ್ನ ಉಚ್ಛಾಟನೆ ಮಾಡೋರು ಯಾರು?. ನಾವಿನ್ನೂ ಮೂರು ವರ್ಷ ಶಾಸಕರಾಗಿ ಇರುತ್ತೇವೆ. ಅದಕ್ಕಾಗಿ ಸುಪ್ರೀಂಕೋರ್ಟ್‌ಗೆ ಹೋಗಿದ್ದೇವೆ. ನಮ್ಮ ಪರವಾಗಿ ತೀರ್ಪು ಬರುತ್ತೆ ಅನ್ನೋ ವಿಶ್ವಾಸ ಇದೆ ಎಂದು ಸ್ಪಷ್ಟಪಡಿಸಿದರು.

ಮಧ್ಯಂತರ ಚುನಾವಣೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಜೆಡಿಎಸ್‌ ನವರಿಗೆ ಏನು ಕೆಲಸ ಇಲ್ಲ. ಅನರ್ಹ ಶಾಸಕರದ್ದೇ ಜಪ. ಮಧ್ಯಂತರ ಚುನಾವಣೆ ಬಗ್ಗೆ ಸಿದ್ದರಾಮಯ್ಯಗೆ ಗೊತ್ತಾ?. ಆ ಬಗ್ಗೆ ಚುನಾವಣಾ ಆಯೋಗ ನಿರ್ಧಾರ ಮಾಡಬೇಕು ಎಂದು ತಿಳಿಸಿದರು‌‌.Conclusion:
Last Updated : Sep 20, 2019, 8:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.