ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕಿನಿಂದಾಗಿ 2020-21ನೇ ಸಾಲಿನಲ್ಲಿ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಮಾದರಿಯನ್ನು ಬದಲಾಯಿಸಲಾಗಿತ್ತು. ಆರು ದಿನಗಳ ಕಾಲ ನಡೆಯುತ್ತಿದ್ದ ಪರೀಕ್ಷೆಯನನ್ನು ಎರಡು ದಿನಗಳಿಗೆ ಬಹು ಆಯ್ಕೆ ಮಾದರಿ ಪ್ರಶ್ನೆಗಳೊಂದಿಗೆ ಪರೀಕ್ಷೆ ನಡೆದಿತ್ತು. ಆದರೆ, ಈ ಬಾರಿ ಕಳೆದ ವರ್ಷದಂತೆ ಎರಡು ದಿನಗಳ ಟಿಕ್ಕಿಂಗ್ ಪ್ಯಾಟ್ರನ್ಗೆ ಎಸ್ಎಸ್ಎಲ್ಸಿ ಬೋರ್ಡ್ ಬ್ರೇಕ್ ಹಾಕಿದೆ.
ಈ ಮೊದಲೇ ತಿಳಿಸಿದಂತೆ ಅನಿವಾರ್ಯ ಕಾರಣಕ್ಕೆ ಒಂದು ಬಾರಿ ಮಾತ್ರ ವಿಶೇಷ ಪರೀಕ್ಷೆ ನಡೆಸಲಾಗಿತ್ತು. ಆದರೆ, 2021-22ರಲ್ಲಿ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆ ಮಾದರಿಯನ್ನು ಹಳೇ ಪದ್ಧತಿಯಂತೆ ನಡೆಸಲು ತಯಾರಿ ಶುರುವಾಗಿದೆ. ಎಲ್ಲ ವಿಷಯಗಳ ಬಾಹ್ಯ ( writing) ಪರೀಕ್ಷೆಗೆ ಒಟ್ಟು 500 ಅಂಕಗಳು ಹಾಗೂ ಆಂತರಿಕ(Internal) ಮೌಲ್ಯಮಾಪನಕ್ಕೆ 125 ಅಂಕಗಳನ್ನ ನಿಗದಿ ಪಡಿಸಿದೆ. ವಿದ್ಯಾರ್ಥಿಗಳ ಹಾಜರಾತಿಯಲ್ಲಿ ವಿನಾಯಿತಿ ನೀಡಲಾಗಿತ್ತು. ಆದರೆ, ಈ ಬಾರಿ ಆನ್‌ಲೈನ್ ಅಥವಾ ಆಫ್‌ಲೈನ್ ಹಾಜರಾತಿ ಶೇ.75ರಷ್ಟು ಇರಬೇಕು. ಇಲ್ಲದೇ ಇದ್ದರೆ ಪರೀಕ್ಷೆಗೆ ಕೂರಲು ಅವಕಾಶ ಕಲ್ಪಿಸದಿರಲು ಬೋರ್ಡ್ ನಿರ್ಧರಿಸಿದೆ.
ತಡವಾಗಿ ಬಂದರೂ ಪರೀಕ್ಷೆ ಬರೆಯಲು ಅವಕಾಶ
ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳು 15 ನಿಮಿಷ ತಡವಾಗಿ ಬಂದರೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಪರೀಕ್ಷೆಯು ಬೆಳಗ್ಗೆ 9.30ಕ್ಕೆ ಶುರುವಾಗಲಿದೆ. 9.45ರವರೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಅನುಮತಿ ನೀಡಿದೆ.
ನಾಳೆಯಿಂದ ವಿದ್ಯಾರ್ಥಿಗಳ ಮಾಹಿತಿ ಅಪ್ಲೋಡ್ಗೆ ಅವಕಾಶ
ವಿದ್ಯಾರ್ಥಿಗಳ ವಿವರಗಳನ್ನು ಆನ್‌ಲೈನ್ ಮುಖಾಂತರ ಅಪ್ಲೋಡ್ ಮಾಡಲು ಮತ್ತು ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ ನಿಗದಿ ಮಾಡಲಾಗಿದೆ. ನಾಳೆಯಿಂದಲೇ(ಡಿ. 13) ಮಂಡಳಿಯ ವೆಬ್‌ಸೈಟ್‌ನಲ್ಲಿ ಶಾಲಾ ಲಾಗಿನ್ ಮೂಲಕ ಹೊಸ ಹಾಗೂ ಪುನರಾವರ್ತಿತ ಸೇರಿದಂತೆ ಖಾಸಗಿ ವಿದ್ಯಾರ್ಥಿಗಳ ಮಾಹಿತಿಯನ್ನು ಅಪಲೋಡ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಡಿಸೆಂಬರ್ 27 ಕಡೆಯ ದಿನಾಂಕವಾಗಿದೆ.
ಇದನ್ನೂ ಓದಿ: ಶಾಲೆಗಳ ಮಾನ್ಯತೆ ನವೀಕರಣಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ