ಬೆಂಗಳೂರು : ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಸಮೂಹದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಪೈಲಟ್ ಯೋಜನೆಗೆ ಸಕಲ ಸಿದ್ಧತೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‍ನ ಸಿಒಒ, ಕಾರ್ತಿಕ್ ರಾಜಗೋಪಾಲ್, ಮಣಿಪಾಲ್ ಆಸ್ಪತ್ರೆಯ ಸಮೂಹವು ಸ್ಪುಟ್ನಿಕ್ ವಿ ಲಸಿಕೆಯ ಪೈಲಟ್‌ನ ಹೊರತರಲು ಉತ್ತಮವಾಗಿ ಸಿದ್ಧವಾಗಿದೆ ಎಂದರು.
ಓದಿ: COVID update: ರಾಜ್ಯದಲ್ಲಿಂದು 12,209 ಮಂದಿಗೆ ಕೊರೊನಾ ದೃಢ.. 320 ಸೋಂಕಿತರು ಬಲಿ
ಸ್ಪುಟ್ನಿಕ್ ವಿ ಲಸಿಕೆಯು ಯಶಸ್ವಿಯಾಗಲು ಅತ್ಯಾಧುನಿಕ ಮೂಲಸೌಕರ್ಯಗಳನ್ನು ರಚಿಸಲು ಮಣಿಪಾಲ್ ಆಸ್ಪತ್ರೆಯ ಸಮೂಹವು ಡಾ. ರೆಡ್ಡಿಯವರೊಂದಿಗೆ ನಿಕಟವಾಗಿ ಕೆಲಸ ಮಾಡಿದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಜೊತೆಗೆ ದೇಶಾದ್ಯಂತ ವ್ಯಾಕ್ಸಿನೇಷನ್ ಡ್ರೈವ್‍ಗಳನ್ನು ಯಶಸ್ವಿಯಾಗಿ ನಡೆಸಿದೆ.
ಸ್ಪುಟ್ನಿಕ್ ವಿ ಲಸಿಕೆಯ ಸೇರ್ಪಡೆಯೊಂದಿಗೆ ಹೊಸ ಪ್ರಯತ್ನಗಳನ್ನು ಮುಂದುವರಿಸಲಿದೆ. ತಿಂಗಳ ಕೊನೆಯಲ್ಲಿ ಈ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂಬ ನಿರೀಕ್ಷೆ ಇದೆ ಎಂದರು. ರಷ್ಯಾದಿಂದ ನೇರವಾಗಿ ರವಾನೆಯಾದ ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಬ್ಯಾಚ್‍ನೊಂದಿಗೆ ಸಮಯದ ಅಗತ್ಯವನ್ನು ತಿಳಿಸಿದ ಮಣಿಪಾಲ್ ಆಸ್ಪತ್ರೆಯ ಸಮೂಹ, ಲಸಿಕೆಯನ್ನು ಮೈನಸ್ 18 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ ಸಂಗ್ರಹಿಸ ಬೇಕಾಗಿರುವುದರಿಂದ, ಅದಕ್ಕೆ ಸರಿ ಹೊಂದುವ ಕೋಲ್ಡ್ ಚೈನ್ ಶೇಖರಣಾ ಮೂಲಸೌಕರ್ಯವನ್ನು ರಚಿಸಲು ಹೊಡಿಕೆ ಮಾಡಿದೆ.
ಲಸಿಕೆಗಾಗಿ ಅಗತ್ಯವಾದ ಮಾರ್ಗಸೂಚಿಗಳ ಪ್ರಕಾರ ಕಟ್ಟುನಿಟ್ಟಾದ ಕೋಲ್ಡ್‌ಚೈನ್ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮಣಿಪಾಲ್ ಆಸ್ಪತ್ರೆಯ ಸಮೂಹವು ಮತ್ತು ಡಾ. ರೆಡ್ಡಿ ಅವರು ವ್ಯಾಪಕ ಪ್ರಯತ್ನಗಳನ್ನು ಕೈಗೊಂಡರು. ಕೋಲ್ಡ್ ಚೈನ್ ಶೇಖರಣೆಯು ನೈಜ ಸಮಯದ ಲಾಗರ್ ಸಹ ಹೊಂದಿದೆ. ಅದು ಪ್ರತಿ ಸೆಕೆಂಡಿಗೆ ತಾಪಮಾನವನ್ನು ದಾಖಲಿಸುತ್ತದೆ.