ಬೆಂಗಳೂರು: ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆ ಮತ್ತು ಸಂಬಂಧಿತ ಉದ್ಯಮಗಳಿಗೆ ವಿಶೇಷ ಪ್ರೋತ್ಸಾಹ ನೀಡುವ ಯೋಜನೆಗೆ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಕೋವಿಡ್‌ನಿಂದಾಗಿ ರಾಜ್ಯವು ಆಮ್ಲಜನಕ ಕೊರತೆ ಎದುರಿಸಿದೆ. ರಾಜ್ಯದಲ್ಲಿ ಸದ್ಯ 9 ಆಮ್ಲಜನಕ ಉತ್ಪಾದನಾ ಘಟಕಗಳು/ಕಾರ್ಖಾನೆಗಳು ಮತ್ತು 6 ಆಮ್ಲಜನಕ ಪೂರೈಕೆದಾರರಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲೀಗ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ 815 ಮೆಟ್ರಿಕ್ ಟನ್ ಮತ್ತು 5,780 ಮೆಟ್ರಿಕ್ ಟನ್ ಶೇಖರಣಾ ಸಾಮರ್ಥ್ಯವಿದೆ. ಈ ಸಾಮರ್ಥ್ಯವನ್ನು ಹೆಚ್ಚಿಸಲು ಯಾರೇ ಉದ್ಯಮಿಗಳು ಮುಂದೆ ಬಂದರೆ ಅವರಿಗೆ ಸೂಕ್ತ ಪ್ರೋತ್ಸಾಹ ನೀಡುತ್ತೇವೆ ಎಂದು ಬೊಮ್ಮಾಯಿ ವಿವರಿಸಿದರು.
ಸರ್ಕಾರದ ಪ್ರೋತ್ಸಾಹ ಹೀಗಿದೆ..
1. ಕನಿಷ್ಟ 10 ಕೋಟಿ ರೂಪಾಯಿಳ ಹೂಡಿಕೆ ಮಾಡುವವರಿಗೆ ಸ್ಥಿರ ಸ್ವತ್ತುಗಳ ಮೌಲ್ಯದ ಶೇಕಡಾ 25ರಷ್ಟು ಬಂಡವಾದ ಮೇಲಿನ ರಿಯಾಯಿತಿ.
2. ವಾಣಿಜ್ಯ ಉತ್ಪಾದನೆ ಪ್ರಾರಂಭವಾದ 3 ವರ್ಷಗಳವರೆಗೆ ವಿದ್ಯುತ್ ಸುಂಕದಲ್ಲಿ ಶೇ 100ರಷ್ಟು ವಿನಾಯಿತಿ. ಹೆಚ್ಚುವರಿ ವಿದ್ಯುತ್ ಸುಂಕದ ಮೇಲೂ ಸಬ್ಸಿಡಿ.
ಇದನ್ನೂ ಓದಿ: ಡಿಸೆಂಬರ್‌ವರೆಗೆ ಜಿ.ಪಂ, ತಾ.ಪಂ ಚುನಾವಣೆ ನಡೆಸದಿರಲು ಸರ್ಕಾರ ತೀರ್ಮಾನ
3. ಮೆಟ್ರಿಕ್ ಟನ್ ಆಮ್ಲಜನಕವನ್ನು 1,000 ರೂ.ನಂತೆ ಸರ್ಕಾರಕ್ಕೆ ಪೂರೈಕೆ ಮಾಡಿದರೆ ಶೇ 100ರಷ್ಟು ಸ್ಟಾಂಪ್ ಡ್ಯೂಟಿ ವಿನಾಯಿತಿ ಮತ್ತು ಸಾಲ, ನೋಂದಣಿ ಶುಲ್ಕಗಳಲ್ಲೂ ರಿಯಾಯಿತಿ.
4. ಭೂ ಪರಿವರ್ತನೆ ಶುಲ್ಕವನ್ನು ಶೇ 100 ರಷ್ಟು ಮರುಪಾವತಿ.