ETV Bharat / city

ಕಿರುಚಿತ್ರ ನಿರ್ಮಾಪಕ ಗಣೇಶ್ ವೇಮುಲ್ಕರ್ ಅಂಗಾಂಗ ದಾನದಿಂದ 8 ಜನರಿಗೆ ಹೊಸ ಜೀವನ..‌ - Short filmmaker Ganesh Vemulkar death

ಕಿರುಚಿತ್ರ ನಿರ್ಮಾಪಕ ಗಣೇಶ್ ವೇಮುಲ್ಕರ್(42) ಸಾವನ್ನಪ್ಪಿದ್ದು, ತಮ್ಮ 6 ಅಂಗಾಂಗಗಳನ್ನು ದಾನ ಮಾಡುವ ಮೂಲಕ 8 ಜನರಿಗೆ ಹೊಸ ಜೀವನ ನೀಡಿದ್ದಾರೆ..

Short filmmaker Ganesh Vemulkar organ donation
ಕಿರುಚಿತ್ರ ನಿರ್ಮಾಪಕ ಗಣೇಶ್ ವೇಮುಲ್ಕರ್ ಅಂಗಾಂಗ ದಾನ
author img

By

Published : Apr 15, 2022, 1:28 PM IST

Updated : Apr 15, 2022, 2:14 PM IST

ಬೆಂಗಳೂರು : ಸಾವಿನ ನಂತರವೂ ಮತ್ತೊಬ್ಬರ ಬಾಳಲ್ಲಿ ಬೆಳಕಾಗುವುದೇ ಜೀವನದ ಸಾರ್ಥಕತೆ. ಮಣ್ಣಲ್ಲಿ ಮಣ್ಣಾಗುವ ಈ ದೇಹದೊಳಗಿನ ಅಂಗಾಂಗಗಳ ದಾನದಿಂದ ಮತ್ತೊಬ್ಬರಿಗೆ ಹೊಸ ಬದುಕನ್ನೇ ನೀಡಿದಂತಾಗುತ್ತದೆ. ಕಿರುಚಿತ್ರ ನಿರ್ಮಾಪಕ ಗಣೇಶ್ ವೇಮುಲ್ಕರ್(42) ಎಂಬುವರು ಸಾವನ್ನಪ್ಪಿದ್ದು, ತಮ್ಮ 6 ಅಂಗಾಂಗಗಳನ್ನು ದಾನ ಮಾಡುವ ಮೂಲಕ 8 ಜನರಿಗೆ ಹೊಸ ಜೀವನ ನೀಡಿದ್ದಾರೆ.

ಗಣೇಶ್ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. ಅವರ ಕುಟುಂಬ ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಂಡಿದ್ದರು. ಆದರೆ, ನಿರಂತರ ತಲೆನೋವು, ವಾಂತಿಯಿಂದಾಗಿ ಏಪ್ರಿಲ್ 6ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಾದರು.

ಗಣೇಶ್ ವೇಮುಲ್ಕರ್ ಅಂಗಾಂಗ ದಾನ

ಆದರೆ, ಅವರು ಸೆರೆಬ್ರಲ್ ವೆನಸ್ ಥ್ರಂಬೋಸಿಸ್​ಗೆ ತುತ್ತಾಗಿರುವುದು ಎಂಆರ್‌ಐ ಪರೀಕ್ಷೆಯಿಂದ ದೃಢಪಟ್ಟಿತು. ತಕ್ಷಣ ಅವರನ್ನು ಐಸಿಯುಗೆ ಸ್ಥಳಾಂತರಿಸಿ ವೆಂಟಿಲೇಟರ್​ಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ತಡ ಮಾಡದೇ ಮೆದುಳನ್ನು ಡಿಕಂಪ್ರೆಸ್ ಮಾಡಲು ರೋಗಿಯನ್ನು ತುರ್ತು ಶಸ್ತ್ರಚಿಕಿತ್ಸೆಗೆ ಕರೆದೊಯ್ಯಲಾಯಿತು. ರೋಗಿಯು ಚಿಕಿತ್ಸೆಗೆ ಪ್ರತಿಕ್ರಿಯಿಸಲಿಲ್ಲ. ಏಪ್ರಿಲ್ 13ರಂದು ಸಂಜೆ 5 ಗಂಟೆಗೆ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದರು.

ನಂತರ ಅವರ 2 ಮೂತ್ರಪಿಂಡಗಳು, ಯಕೃತ್ತು (2 ಜನರಿಗೆ ದಾನ), ಹೃದಯ, ಶ್ವಾಸಕೋಶಗಳು ಮತ್ತು ಕಾರ್ನಿಯಾಗಳು ಸೇರಿದಂತೆ ಅವರ ಅಂಗಗಳನ್ನು ದಾನ ಮಾಡಲು ಕುಟುಂಬಸ್ಥರು ಒಪ್ಪಿಕೊಂಡರು. ಇದರಿಂದಾಗಿ ನಗರದ 8 ರೋಗಿಗಳಿಗೆ ಪ್ರಯೋಜನವಾಯ್ತು. ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಡಾ. ಪಿ ಸಿ ಮೋಹನ್ ಮತ್ತು ಡಾ. ಕ್ರಾಂತಿ ಮೋಹನ್ ಒಳಗೊಂಡ ನರವಿಜ್ಞಾನ ತಂಡದವರು ಗಣೇಶ್ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದರು.

ಅದರಲ್ಲಿ ಒಂದು ಮೂತ್ರಪಿಂಡವನ್ನು ಅದೇ ದಿನ ಕಸಿಗಾಗಿ ಕಾಯುತ್ತಿರುವ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗೆ ಚಿಕಿತ್ಸೆ ನೀಡಲು ಬಳಸಲಾಯಿತು. ರೋಗಿಯು ದೀರ್ಘಕಾಲದಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ಡಯಾಲಿಸಿಸ್​ಗೆ ಒಳಗಾಗಿದ್ದರು ಮತ್ತು ಕೆಲವು ತಿಂಗಳ ಹಿಂದೆ ಕಸಿ ಮಾಡಲು ತನ್ನ ಹೆಸರನ್ನು ಪಟ್ಟಿಗೆ ಸೇರಿಸಿ ಮೂತ್ರಪಿಂಡದ ನಿರೀಕ್ಷೆಯಲ್ಲಿದ್ದರು.

ಇನ್ನು ಗಣೇಶ್ ಅವರ ಚಿಕ್ಕಪ್ಪ ಶ್ರೀಕಾಂತ್ ವೇಮುಲ್ಕರ್‌ ಪ್ರತಿಕ್ರಿಯಿಸಿ, ಸೆರೆಬ್ರಲ್ ವೆನಸ್ ಥ್ರಂಬೋಸಿಸ್ ಆರಂಭಿಕ ಲಕ್ಷಣಗಳನ್ನು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಆಗಾಗ್ಗೆ ತಲೆನೋವು, ತಲೆ ತಿರುಗುವಿಕೆ, ಮಾತನಾಡಲು ತೊಂದರೆ, ದೌರ್ಬಲ್ಯ ಅಥವಾ ದೇಹದಲ್ಲಿ ಮರಗಟ್ಟುವಿಕೆ ಸೇರಿದಂತೆ ಕೆಲವು ಪ್ರಮುಖ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ರೋಗ ಲಕ್ಷಣಗಳು ಅನುಭವವಾದ ತಕ್ಷಣ ವ್ಯಾಧಿಗೆ ತುತ್ತಾಗಿರುವವರು ವಿಳಂಬ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ, ರೋಗಲಕ್ಷಣಗಳು ಪ್ರಾರಂಭವಾದ 3 ಗಂಟೆಗಳ ನಂತರ ಚಿಕಿತ್ಸೆಯನ್ನು ನೀಡಿದರೆ ಅದು ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ ಎಂದರು.

ಇದನ್ನೂ ಓದಿ: ಸಚಿವ ಈಶ್ವರಪ್ಪ ರಾಜೀನಾಮೆಗೂ ಮುನ್ನವೇ ತಮ್ಮ ಇಲಾಖೆಯ 29 PDOಗಳ ವರ್ಗಾವಣೆ!

ಗ್ಲೆನೆಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ನ ಕ್ಲಸ್ಟರ್ ಸಿಒಒ‌ ಆಗಿರುವ ಬಿಜು ನಾಯರ್ ಮಾತಾನಾಡಿ, ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವ ನೋವು ಖಂಡಿತವಾಗಿಯೂ ಅಪಾರ. ಆದಾಗ್ಯೂ, ಮಾನವೀಯತೆ ಮೇಲುಗೈ ಸಾಧಿಸುವುದನ್ನು ನೋಡುವುದು ಒಳ್ಳೆಯದು ಮತ್ತು ರೋಗಿಯ ಕುಟುಂಬದ ನಿರ್ಧಾರದಿಂದಾಗಿ ಇನ್ನೂ 8 ರೋಗಿಗಳು ಸಾಮಾನ್ಯ ಜೀವನವನ್ನು ನಡೆಸುವ ಭರವಸೆಯನ್ನು ಪಡೆದಿದ್ದಾರೆ. ಇದು ತಮ್ಮ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ಅವರ ಅಂಗಾಂಗಗಳನ್ನು ದಾನ ಮಾಡಲು ಧ್ವನಿಯಾಗಿದೆ ಮತ್ತು ಕೊನೆಯ ಹಂತದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಭರವಸೆಯ ಕಿರಣವನ್ನು ಹರಡಿದೆ ಎಂದರು.

Last Updated : Apr 15, 2022, 2:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.