ETV Bharat / city

ಬೆಂಗಳೂರಲ್ಲಿ ಕದಿಯಲು ಬಂದ ಕಳ್ಳನ ಹೊಡೆದು ಕೊಂದ ಅಂಗಡಿ ಮಾಲೀಕ - ಈಟಿವಿ ಭಾರತ್ ಕನ್ನಡ

ಅಂಗಡಿ ಮಾಲೀಕನೋರ್ವ ಕಳ್ಳನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Etv Bharat
Etv Bharat
author img

By

Published : Aug 7, 2022, 11:43 AM IST

ಬೆಂಗಳೂರು: ಬಾಗಲೂರಿನ ದ್ವಾರಕಾ ನಗರದಲ್ಲಿ ಮಾಲೀಕನಿಂದ ಕಳ್ಳನ ಕೊಲೆ ನಡೆದಿದೆ. ಕದಿಯಲು ಬಂದ ಅಮರನಾಥ ಮಹಾತೋ ಎಂಬಾತನನ್ನು ಮಂಜುನಾಥ ಇಂಜಿನಿಯರ್ ವರ್ಕ್ಸ್​ ಮಾಲೀಕ ಕರುಣಾಕರನ್ ಮತ್ತು ತಂಡ ಹೊಡೆದು ಹತ್ಯೆ ಮಾಡಿದೆ.

ಅಂಗಡಿಯಲ್ಲಿ ಆಗಾಗ ವಸ್ತುಗಳು ಕಳ್ಳತನವಾಗುತ್ತಿದ್ದವು. ಇದರಿಂದ ಕಳ್ಳನನ್ನು ಹಿಡಿಯಬೇಕೆಂದು ಮಾಲೀಕನೇ ರಾತ್ರಿಯಿಡೀ ಕಾಯುತ್ತ ಕುಳಿತಿದ್ದರು. ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅಂಗಡಿ ಬಳಿ ಬಂದಿದ್ದ ಅಮರನಾಥ್​ನನ್ನು ಕಂಡು ಕರುಣಾಕರ್ ಮತ್ತು ಇನ್ನಿತರರು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆ ಬಳಿಕ ಯಾರೋ ಹೊಡೆದು ಬಿಸಾಡಿದ್ದಾರೆಂದು ಸ್ಥಳೀಯರಿಗೆ ತಿಳಿಸಿ ಯಲಹಂಕ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಪೊಲೀಸರು ವಿಷಯ ತಿಳಿದು ವಿಚಾರಣೆ ನಡೆಸಿದಾಗ ಕರುಣಾಕರ ಹಾಗು ಆತನ ಗ್ಯಾಂಗೇ ಕೃತ್ಯ ಎಸಗಿರೋದು ಬೆಳಕಿಗೆ ಬಂದಿದೆ. ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ರಾಮನಗರದಲ್ಲಿ ಭಾರಿ ಮಳೆ: ದನದ ಕೊಟ್ಟಿಗೆ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.