ETV Bharat / city

ಆರ್​.ಆರ್.​ನಗರ, ಶಿರಾ ಕ್ಷೇತ್ರಗಳ ಉಪಕದನ: ಇಂದು ಮತದಾನ - shira and RR Nagara bye election news

ಆರ್​. ಆರ್.​ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಹೀಗಾಗಿ ಎರಡು ಕ್ಷೇತ್ರಗಳಲ್ಲಿಯೂ ಪೊಲೀಸ್​ ಇಲಾಖೆ ಅಗತ್ಯ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಂಡಿದೆ.

shira-and-rr-nagara-bye-election-news
ಆರ್​. ಆರ್.​ ನಗರ, ಶಿರಾ ಕ್ಷೇತ್ರಗಳಲ್ಲಿ ಪೊಲೀಸ್​ ಕಣ್ಗಾವಲು
author img

By

Published : Nov 2, 2020, 6:18 PM IST

Updated : Nov 3, 2020, 4:55 AM IST

ಬೆಂಗಳೂರು/ತುಮಕೂರು: ರಾಜರಾಜೇಶ್ವರಿನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ಎರಡು ಕ್ಷೇತ್ರದಲ್ಲಿ ಒಟ್ಟು 1008 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಉಪಚುನಾವಣೆಯಲ್ಲಿ ಮತದಾರರಿಗೆ ಎಡಗೈನ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುತ್ತದೆ. ಮತದಾನದ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಬೇಕೆಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.ಎರಡು ಕ್ಷೇತ್ರದಲ್ಲಿ ತಲಾ ಮೂರು ಶಸ್ತ್ರಾಸ್ತ್ರ ಮೀಸಲು ಪಡೆ ಸಿಬ್ಬಂದಿ ನಿಯೋಜಿಸಲಾಗಿದೆ.

ಮತಗಟ್ಟೆ ಎಷ್ಟು ? : ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 678 ಮತಗಟ್ಟೆ ಹಾಗೂ ಶಿರಾ ಕ್ಷೇತ್ರದಲ್ಲಿ 330 ಮತಗಟ್ಟೆ ಸೇರಿ ಒಟ್ಟು 1008 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ಕಣದಲ್ಲಿ 31 ಮಂದಿ : ಚುನಾವಣಾ ಕಣದಲ್ಲಿ ಒಟ್ಟು 31 ಅಭ್ಯರ್ಥಿಗಳು ಇದ್ದು, ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ, ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕೃಷ್ಣಮೂರ್ತಿ, ಪಕ್ಷೇತರರು ಸೇರಿದಂತೆ 16 ಮಂದಿ ಅಖಾಡದಲ್ಲಿದ್ದಾರೆ.

ಆರ್​. ಆರ್.​ ನಗರ, ಶಿರಾ ಕ್ಷೇತ್ರಗಳಲ್ಲಿ ಪೊಲೀಸ್​ ಕಣ್ಗಾವಲು

ಆರ್, ಆರ್. ನಗರದಲ್ಲಿ ಮತದಾರರೆಷ್ಟು?: ಆರ್.ಆರ್.ನಗರ ಕ್ಷೇತ್ರದಲ್ಲಿ ಒಟ್ಟು 4,62,201 ಮತದಾರರಿದ್ದಾರೆ. ಅದರಲ್ಲಿ 2,41,049 ಪುರುಷರು, 2,21,073 ಮಹಿಳೆಯರು ಹಾಗೂ 79 ಇತರೆ ಮತದಾರರಿದ್ದಾರೆ. 18 ರಿಂದ 19 ವರ್ಷದ 6581 ಮತದಾರರಿದ್ದಾರೆ. ಇನ್ನು ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ, ಪಕ್ಷೇತರರು ಸೇರಿದಂತೆ 15 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಶಿರಾದಲ್ಲಿರುವ ಮತದಾರರೆಷ್ಟು?: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,15,725 ಮತದಾರರಿದ್ದು, ಇದರಲ್ಲಿ 1,10,281 ಪುರುಷರು, 1,05,034 ಮಹಿಳೆಯರು ಮತ್ತು 10 ಇತರೆ ಮತದಾರರಿದ್ದಾರೆ. 5768 ಮತದಾರರು 18 ರಿಂದ 19 ವರ್ಷದವರು ಹೊಸ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಮತ ಚಲಾವಣೆಗೆ ಪರ್ಯಾಯ ದಾಖಲೆಗಳು : ಆರ್.ಆರ್. ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಲು ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ ಹಾಜರು ಪಡಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯ ದಾಖಲೆ ಸಲ್ಲಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಮತ ಚಲಾಯಿಸಲು ಪರ್ಯಾಯ ದಾಖಲಾತಿಯಾದ ಆಧಾರ್ ಕಾರ್ಡ್, ನರೇಗಾ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ, ಪಾನ್‌ಕಾರ್ಡ್, ಪಾಸ್‌ಪೋರ್ಟ್, ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಾದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸ ಮಾಡುವ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ. ಸಂಸದರು, ಶಾಸಕರು ನೀಡಿದ ಅಧಿಕೃತ ಗುರುತಿನ ಚೀಟಿ, ಪದವಿಪ್ರಮಾಣ ಪತ್ರ, ವಿಕಲಚೇತನ ಪ್ರಮಾಣ ಪತ್ರವನ್ನು ಸಹ ಹಾಜರುಪಡಿಸಿ ಮತದಾನ ಚಲಾಯಿಸಬಹುದಾಗಿದೆ.

ವಿಕಲಚೇತನರಿಗೆ ವಾಹನಗಳ ವ್ಯವಸ್ಥೆ : ಆರ್.ಆರ್.ನಗರ ಕ್ಷೇತ್ರದಲ್ಲಿ 293 ವಿಕಲಚೇತನ ಮತದಾರರಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 3900 ವಿಕಲಚೇತನ ಮತದಾರರಿದ್ದು, ಅವರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ.ಆರ್.ಆರ್.ನಗರದಲ್ಲಿ 200 ವೀಲ್ ಚೇರ್‌ಗಳ ವ್ಯವಸ್ಥೆ ಮಾಡಲಾಗಿದೆ. 144 ವಾಹನಗಳು ಸಿದ್ದವಿದೆ.ಶಿರಾ ಕ್ಷೇತ್ರದಲ್ಲಿ 224 ವೀಲ್ ಚೇರ್, 66 ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಇವಿಎಂ-ವಿವಿಪ್ಯಾಟ್ : ಆರ್.ಆರ್.ನಗರ ಕ್ಷೇತ್ರದಲ್ಲಿ ಈಗಾಗಲೇ 3020 ಬ್ಯಾಲೆಟ್ ಯೂನಿಟ್, 1458 ಕಂಟ್ರೋಲ್ ಯೂನಿಟ್ ಮತ್ತು 1450 ವಿವಿಪ್ಯಾಟ್‌ಗಳಿವೆ. ಹೆಚ್ಚುವರಿಯಾಗಿ 1888 ಬ್ಯಾಲೆಟ್ ಯೂನಿಟ್, 1424 ಕಂಟ್ರೋಲ್ ಯೂನಿಟ್ ಮತ್ತು 1431 ವಿವಿಪ್ಯಾಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 801 ಬ್ಯಾಲೆಟ್ ಯೂನಿಟ್, 801 ಕಂಟ್ರೋಲ್ ಯೂನಿಟ್ ಮತ್ತು 801 ವಿವಿ ಪ್ಯಾಟ್‌ಗಳಿವೆ. ಹೆಚ್ಚುವರಿಯಾಗಿ 798 ಬ್ಯಾಲೆಟ್ ಯೂನಿಟ್, 770 ಕಂಟ್ರೋಲ್ ಯೂನಿಟ್, 762 ವಿವಿಪ್ಯಾಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಸಿಬ್ಬಂದಿ, ಪೊಲೀಸರ ನಿಯೋಜನೆ : ಮತದಾನದ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣಾ ಆಯೋಗವು ಮುನ್ನಚ್ಚರಿಕೆ ಕ್ರಮ ಕೈಗೊಂಡಿದೆ. ಆರ್.ಆರ್.ನಗರ ಕ್ಷೇತ್ರದಲ್ಲಿ 4203 ಮತದಾನ ಸಿಬ್ಬಂದಿ, 156 ಎನ್ಫೋರ್ಸ್‌ಮೆಂಟ್ ಸಿಬ್ಬಂದಿ, 115 ಮೈಕ್ರೋ ಸಿಬ್ಬಂದಿ, 2623 ರಾಜ್ಯ ಪೊಲೀಸರು, 300 ಶಸ್ತ್ರಾಸ್ತ್ರ ಮೀಸಲು ಪಡೆ ಸಿಬ್ಬಂದಿ, 381 ಬೂತ್ ಮಟ್ಟದ ಅಧಿಕಾರಿಗಳು, 146 ಚಾಲಕರು, ನೆರವಿಗಾಗಿ 5 ಸಿಬ್ಬಂದಿ, 1586 ಇತರೆ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.

ಶಿರಾ ಕ್ಷೇತ್ರದಲ್ಲಿ ಒಟ್ಟು 3857 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 1588 ಮತದಾನ ಸಿಬ್ಬಂದಿ, 128 ಎನ್ಫೋರ್ಸ್‌ಮೆಂಟ್ ಸಿಬ್ಬಂದಿ, 33 ಮೈಕ್ರೋ ವೀಕ್ಷಕರು, 866 ರಾಜ್ಯ ಪೊಲೀಸರು, 270 ಶಸ್ತ್ರಾಸ್ತ್ರ ಮೀಸಲು ಪಡೆ, 267 ಬೂತ್‌ಮಟ್ಟದ ಅಧಿಕಾರಿಗಳು, 139 ಚಾಲಕರು, ನೆರವಿಗಾಗಿ 9 ಸಿಬ್ಬಂದಿ, ಇತರರು 557 ಮಂದಿಯನ್ನು ನಿಯೋಜಿಸಲಾಗಿದೆ.

Last Updated : Nov 3, 2020, 4:55 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.