ETV Bharat / city

ಎಲ್ಲ ಸದಸ್ಯರ ಕೈಗೆ ಸಿಗದ ಉತ್ತರದ ಪ್ರತಿ, ಸರ್ಕಾರದ ನಡೆಗೆ ಪ್ರತಿಪಕ್ಷ ಕಿಡಿ

ಪ್ರಶ್ನೆಯೊಂದಕ್ಕೆ ಬೃಹತ್ ಗಾತ್ರದ ಕಡತದ ಮೂಲಕ ಉತ್ತರವನ್ನು ಒದಗಿಸಿ, ಕೇವಲ ಪ್ರಶ್ನೆ ಕೇಳಿದ್ದ ಸದಸ್ಯರಿಗೆ ಮಾತ್ರ ಅರಣ್ಯ ಸಚಿವ ಆನಂದ್​ ಸಿಂಗ್​ ಅವರು ಉತ್ತರದ ಸಿ.ಡಿ ಕಳುಹಿಸಿಕೊಟ್ಟಿದ್ದು ಪ್ರತಿಪಕ್ಷ ಸದಸ್ಯರನ್ನು ಕೆರಳುವಂತೆ ಮಾಡಿದೆ.

Session of karnataka legislative council
ವಿಧಾನ ಪರಿಷತ್
author img

By

Published : Mar 23, 2020, 3:26 PM IST

ಬೆಂಗಳೂರು: ಅರಣ್ಯ ಸಚಿವ ಆನಂದ್​ ಸಿಂಗ್ ಅವರು ಮುದ್ರಿತ ಪ್ರತಿ ಬದಲಾಗಿ ಪ್ರಶ್ನೆ ಕೇಳಿದವರಿಗೆ ಮಾತ್ರ ಸಿಡಿ ನೀಡಿದ ಕಾರಣ ವಿಪಕ್ಷ ನಾಯಕರು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದ ಘಟನೆ ವಿಧಾನ ಪರಿಷತ್​ ಕಲಾಪದಲ್ಲಿ ನಡೆಯಿತು.

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್​ನ ಪಿ.ಆರ್ ರಮೇಶ್, ಬೆಂಗಳೂರಿನಲ್ಲಿ ಪರಿಸರ ಹಾನಿ ಉಂಟುಮಾಡುತ್ತಿರುವ ಕಾರ್ಖಾನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಸಚಿವ ಆನಂದ್ ಸಿಂಗ್, ಉತ್ತರವನ್ನು 500ಕ್ಕೂ ಹೆಚ್ಚು ಪುಟದ ದಾಖಲೆಗಳನ್ನು ಒಳಗೊಂಡ ಕಡತದ ಮೂಲಕ ಸದನಕ್ಕೆ ಸಲ್ಲಿಕೆ ಮಾಡಿದರು. ಸದಸ್ಯರಿಗೆ ಮುದ್ರಿತ ಪ್ರತಿ ನೀಡದೆ ಕೇವಲ ಪ್ರಶ್ನೆ ಕೇಳಿದ್ದ ರಮೇಶ್ ಅವರಿಗೆ ಮಾತ್ರ ಸಿ.ಡಿ ಮೂಲಕ ಉತ್ತರವನ್ನು ನೀಡಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಸದಸ್ಯರಿಗಷ್ಟೇ ಅನುಬಂಧ ಒದಗಿಸಿ, ಉತ್ತರ ಒದಗಿಸಿ, ಇತರ ಸದಸ್ಯರಿಗೆ ನೀಡದೆ ಇದ್ದದ್ದು ಇತಿಹಾಸದಲ್ಲಿ ಆಗಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅಸಮಧಾನ ವ್ಯಕ್ತಪಡಿಸಿದರು. ಇದು ಒಳ್ಳೆಯ ಸಂಪ್ರದಾಯ ಅಲ್ಲ ಎಂದು‌ ಕಿಡಿಕಾರಿದರು.

ನಂತರ ‌ಕೋಟಾ ಶ್ರೀನಿವಾಸ ಪೂಜಾರಿ, ಎಲ್ಲಾ ಸದಸ್ಯರಿಗೂ ಉತ್ತರ ಒದಗಿಸಲಾಗುತ್ತದೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಸಿ.ಡಿ ಎಲ್ಲರಿಗೂ ಕೊಡಿ. ಯಾರಿಗೆ ಅಗತ್ಯವಿದೆಯೋ ಅವರಿಗೆ ಮುದ್ರಿತ ಪ್ರತಿ ಕೊಡಿ ಎಂದು ಸಲಹೆ ನೀಡಿದರು.

ಇದಕ್ಕೆ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಅಸಮಧಾನ ವ್ಯಕ್ತಪಡಿಸಿದರು. ಸಿ.ಡಿ ಒಂದು ದಿನ ಮೊದಲೇ ಕೊಡಬೇಕು. ಅದು ಬಿಟ್ಟು ಈಗ ಕೊಟ್ಟರೆ ಎಲ್ಲಿ ಹಾಕಿಕೊಂಡು ನೋಡೋಣ? ಹೇಗೆ ಉಪ ಪ್ರಶ್ನೆ ಕೇಳೋಣ ಎಂದರು.

ಇದಕ್ಕೆ‌ ದನಿಗೂಡಿಸಿದ ಸಚಿವ ಸುರೇಶ್ ಕುಮಾರ್, ಇಬ್ರಾಹಿಂ ಅಭಿಪ್ರಾಯ ಸರಿ ಇದೆ. ಕೌನ್ಸಿಲ್, ಪೇಪರ್ ಲೆಸ್ ಕೌನ್ಸಿಲ್ ಆಗಬೇಕು. ಆಗ ಯಾವ ಸಮಸ್ಯೆಯೂ ಇರಲ್ಲ. ಹಿಮಾಚಲ ಪ್ರದೇಶ, ರಾಜಸ್ಥಾನ ಅಸೆಂಬ್ಲಿ ಪೇಪರ್ ಲೆಸ್ ಆಗಿದೆ. ನಮ್ಮದೂ ಆಗಬೇಕು. ಐದಾರು ವರ್ಷದ ಹಿಂದೆ ನಮ್ಮಲ್ಲೂ‌ ಚಿಂತನೆ ನಡೆದಿತ್ತು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.