ಬೆಂಗಳೂರು : ನಾಗರಹಾವು ಹಾಗೂ ಶುಭಮಂಗಳ ಸಿನಿಮಾ ಖ್ಯಾತಿಯ ಹಿರಿಯ ನಟ ಶಿವರಾಮ್ ಆರೋಗ್ಯ ದಿನೇದಿನೆ ಕ್ಷೀಣಿಸುತ್ತಿದೆ. ಕಳೆದ ಮೂರು ದಿನಗಳಿಂದ ವಿದ್ಯಾಪೀಠ ವೃತ್ತದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಶಿವರಾಮ್ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ.
ಶಿವರಾಮ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಎಸ್ ಎನ್ ಮೋಹನ್ ಮಾತನಾಡಿ, ಪವಾಡ ಆಗುತ್ತೆ ಅಂತಾ ನಾವು ಕಾಯುತ್ತಿದ್ದೇವೆ. ಆದರೆ, ಅಂತಹ ಯಾವುದೇ ಪವಾಡ ಆಗುತ್ತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈಗ ನಿಮ್ಮ ಮುಂದೆ ನಿಂತು ಮಾತಾಡೋಕು ಕಷ್ಟ ಆಗುತ್ತಿದೆ.
ಶಿವರಾಮ್ ಅವರ ಕಿಡ್ನಿ, ಲಿವರ್ ವರ್ಕ್ ಆಗ್ತಿದೆ. ಆದರೆ, ಹಾರ್ಟ್ ವರ್ಕ್ ಆಗುತ್ತಿಲ್ಲ. ಅವರು ತುಂಬಾ ಹೊತ್ತು ನಮ್ಮ ಜೊತೆ ಇರಲ್ಲ ಅನ್ನೋದನ್ನು ಹೇಳಲು ಕಷ್ಟ ಆಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.
ಅವರು ಚೇತರಿಕೆ ಆಗ್ತಾರೆ ಅನ್ನೋದು ಕಷ್ಟದ ಕೆಲಸ, ಕೊನೆಗಳಿಗೆಯವರಿಗೆ ಫೈಟ್ ಮಾಡಿ ಅಂತಾ ಅವರ ಕುಟುಂಬಸ್ಥರು ಹೇಳಿದ್ದಾರೆ. ಅವರಿಗೆ ಎಂಆರ್‌ಐ ಸ್ಕ್ಯಾನ್ ಮಾಡೋಕು ಕಷ್ಟವಾಗಿದೆ. ಕೃತಕವಾದ ಆಕ್ಸಿಜನ್ ಪೂರೈಕೆಯಿಂದಾಗಿ ಅವರು ಉಸಿರಾಡುತ್ತಿದ್ದಾರೆ. ಯಾವ ಸಮಯದಲ್ಲಿ ಏನ್ ಬೇಕದ್ರೂ ಆಗಬಹುದು. ಬ್ರೈನ್ ಮಾತ್ರವಲ್ಲ, ಈಗ ಹಾರ್ಟ್ ಕೂಡ ಕಂಪ್ರೆಸ್ ಆಗ್ತಿದೆ ಎಂದಿದ್ದಾರೆ.
ಶಿವರಾಮ್ ಅವರ ಹಾರ್ಟ್ ಬೀಟ್ ಹಾಗೂ ಬಿಪಿ ಕಮ್ಮಿ ಆಗ್ತಿದೆ. ಇವರ ಆರೋಗ್ಯದಲ್ಲಿ ಚೇತರಿಕೆ ಆಗುತ್ತೆ ಅನ್ನೋದು ಕಷ್ಟ. ಸದ್ಯದ ಪರಿಸ್ಥಿತಿಯಲ್ಲಿ ಹಾರ್ಟ್ ಯಾವಾಗ ಬೇಕಾದ್ರೂ ಕೆಲಸ ನಿಲ್ಲಿಸಬಹುದು. ನಮ್ಮ ಪ್ರಯತ್ನ ನಾವು ಮಾಡ್ತಿದ್ದೇವೆ, ಸದ್ಯದ ಪರಿಸ್ಥಿತಿಯಲ್ಲಿ ಅವರ ಆರೋಗ್ಯ ಕೈಮೀರಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ