ETV Bharat / city

ಚಾಕುವಿನಿಂದ ಇರಿದು ಅಪಾರ್ಟ್​ಮೆಂಟ್​ ನಿವಾಸಿಯನ್ನೇ ಹತ್ಯೆಗೈದ ಸೆಕ್ಯೂರಿಟಿ ಗಾರ್ಡ್

ಪಾನಮತ್ತನಾಗಿ ಕೆಲಸ ಮಾಡುತ್ತಿರುವುದನ್ನು ವಿರೋಧಿಸಿದ ಅಪಾರ್ಟ್​ಮೆಂಟ್ ನಿವಾಸಿಯನ್ನು ಸೆಕ್ಯೂರಿಟಿ ಗಾರ್ಡ್ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೆಚ್​​ಎಎಲ್ (HAL Layout) ಲೇಔಟ್​​ನಲ್ಲಿ ನಡೆದಿದೆ.

author img

By

Published : Nov 10, 2021, 7:26 PM IST

Updated : Nov 10, 2021, 8:28 PM IST

ಭಾಸ್ಕರ್ ರೆಡ್ಡಿ ಹಾಗು ಬಸಂತ್
ಭಾಸ್ಕರ್ ರೆಡ್ಡಿ ಹಾಗು ಬಸಂತ್

ಬೆಂಗಳೂರು: ಸೆಕ್ಯೂರಿಟಿ ಸಿಬ್ಬಂದಿಯೇ ಅಪಾರ್ಟ್​ಮೆಂಟ್​ ನಿವಾಸಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಹೆಚ್​​ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು (ಬುಧವಾರ) ಬೆಳಗ್ಗೆ ನಡೆದಿದೆ‌.

ಭಾಸ್ಕರ್ ರೆಡ್ಡಿ (65) ಕೊಲೆಯಾದ ವ್ಯಕ್ತಿ. ಬಸಂತ್ ಕೊಲೆ ಮಾಡಿದ ಸೆಕ್ಯೂರಿಟಿ ಗಾರ್ಡ್. ನೇಪಾಳ ಮೂಲದ ಬಸಂತ್ ಮೂರು ತಿಂಗಳಿಂದ ಎಚ್​​ಎಎಲ್ ಬಳಿಯ ಎಇಸಿಎಸ್ ಲೇಔಟ್ ಅಪಾರ್ಟ್​ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತನ ತಂದೆ ಸಹ ಪಕ್ಕದ ಅಪಾರ್ಟ್​ಮೆಂಟ್​​ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಊರಿಗೆ ಹೋಗಿದ್ದ ತಂದೆ ತಾನು ಕೆಲಸ ಮಾಡುತ್ತಿದ್ದ ಅಪಾರ್ಟ್​ಮೆಂಟ್ ನೋಡಿಕೊಳ್ಳುವಂತೆ ಮಗನಿಗೆ ಜವಾಬ್ದಾರಿ ವಹಿಸಿದ್ದರು.

ಐದು ಅಂತಸ್ತಿನ ಈ ಅಪಾರ್ಟ್​ಮೆಂಟ್​​ನ ಮೊದಲ‌ ಮಹಡಿಯಲ್ಲಿ ಭಾಸ್ಕರ್ ರೆಡ್ಡಿ ವಾಸವಿದ್ದ. ಅಪಾರ್ಟ್​ಮೆಂಟ್​ನ ಶೇರ್ ಹೋಲ್ಡರ್ ಆಗಿದ್ದ ಭಾಸ್ಕರ್ ರೆಡ್ಡಿ, ಅತಿಯಾಗಿ ಮದ್ಯಪಾನ ಮಾಡುತ್ತಿದ್ದ ಬಸಂತ್​ಗೆ ಕುಡಿಯಬೇಡ ಎಂದು ಬೈದಿದ್ದರಂತೆ. ಅಲ್ಲದೇ ಕೆಲ ದಿನಗಳ ಹಿಂದೆ ಪಾನಮತ್ತನಾಗಿ ಕೆಲಸ ಮಾಡುತ್ತಿರುವುದನ್ನು ವಿರೋಧಿಸಿ ಸೆಕ್ಯೂರಿಟಿ ಗಾರ್ಡ್ ವಿರುದ್ಧ ಅಪಾರ್ಟ್​ಮೆಂಟ್​​ ಅಸೋಸಿಯೇಷನ್​​ಗೆ ಭಾಸ್ಕರ್ ದೂರು ಕೊಟ್ಟಿದ್ದರಂತೆ.

ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ತನ್ನ ವಿರುದ್ಧ ದೂರು ಕೊಡುವುದನ್ನು ಮುಂದುವರೆಸಿದ್ದ ಭಾಸ್ಕರ್​ಗೆ ಗತಿ ಕಾಣಿಸಬೇಕೆಂದು ಬಸಂತ್ ಸಂಚು ರೂಪಿಸಿದ್ದ. ಇದರಂತೆ ಪೂರ್ವ ನಿಯೋಜಿತವಾಗಿ ಚಾಕು ಖರೀದಿಸಿ ಇಟ್ಟುಕೊಂಡಿದ್ದ. ಇಂದು ಬೆಳಗ್ಗೆ ಎಂದಿನಂತೆ ಪಾರ್ಕಿಂಗ್ ಲಾಟ್ ಬಳಿ ಭಾಸ್ಕರ್ ಬರುವುದನ್ನು ಕಂಡು ಅಕ್ರೋಶಗೊಂಡ ಬಸಂತ್ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಬಳಿಕ ಚಾಕುವಿನಿಂದ ಕುತ್ತಿಗೆ ಸೀಳಿದ್ದಾನೆ. ರಕ್ತಸ್ರಾವವಾಗಿ ಭಾಸ್ಕರ್ ಕುಸಿದು ಬಿದ್ದಿದ್ದಾನೆ.‌ ನೆರೆಹೊರೆ ಮನೆಯವರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಾರ್ಗಮಧ್ಯೆ ಭಾಸ್ಕರ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆ ರವಾನಿಸಲಾಗಿದೆ. ಇತ್ತ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಸೆಕ್ಯೂರಿಟಿ ಗಾರ್ಡ್​ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Last Updated : Nov 10, 2021, 8:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.