ETV Bharat / city

ವಿದ್ಯಾರ್ಥಿಗಳ ಗಮನಕ್ಕೆ.. ದ್ವಿತೀಯ ಪಿಯು ಪ್ರವೇಶ ದಾಖಲಾತಿ ದಿನಾಂಕ ವಿಸ್ತರಣೆ - ಪಿಯು ಬೋರ್ಡ್ ಸುತ್ತೋಲೆ

ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ-2022-23ನೇ ಸಾಲಿನ ದ್ವಿತೀಯ ಪಿಯುಸಿ ಪ್ರವೇಶ ದಾಖಲಾತಿಗೆ ದಿನಾಂಕ ವಿಸ್ತರಣೆ- ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಾಹಿತಿ

Students
Students
author img

By

Published : Jul 9, 2022, 6:43 AM IST

ಬೆಂಗಳೂರು: ದ್ವಿತೀಯ ಪಿಯುಸಿ ತರಗತಿಗೆ ಪ್ರವೇಶ ಪಡೆಯುವ ದಾಖಲಾತಿ ದಿನಾಂಕವನ್ನು ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ವಿಶೇಷ ದಂಡ ಶುಲ್ಕದೊಂದಿಗೆ ಸೆಕೆಂಡ್​ ಪಿಯುಸಿ ತರಗತಿಗತಿಗೆ ಪ್ರವೇಶ ಪಡೆಯುವ ದಾಖಲಾತಿ ದಿನಾಂಕವನ್ನು ಜುಲೈ 22ವರೆಗೆ ವಿಸ್ತರಿಸಿದೆ.

2022-23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿಗೆ ಸಂಬಂಧಿಸಿದಂತೆ ದಾಖಲಾತಿ ದಿನಾಂಕವನ್ನು ವಿಶೇಷ ದಂಡ ಶುಲ್ಕದೊಂದಿಗೆ ಜುಲೈ 8 ರವರೆಗೆ ನಿಗದಿಪಡಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಅನಾನುಕೂಲತೆಯನ್ನು ಮನಗಂಡ ಪದವಿ ಪೂರ್ವ ಶಿಕ್ಷಣ ಇಲಾಖೆಯು ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತೆ ಜುಲೈ 22ರವರೆಗೆ ವಿಶೇಷ ದಂಡಶುಲ್ಕದೊಂದಿಗೆ ವಿಸ್ತರಿಸಿ ಸುತ್ತೋಲೆಯನ್ನು ಹೊರಡಿಸಿದೆ.

ವಾರ್ಷಿಕವಾಗಿ ಕನಿಷ್ಠ 75 % ಹಾಜರಾತಿಯ ಅವಶ್ಯಕತೆ ಇರುವುದರಿಂದ ಈ ದಿನಾಂಕವನ್ನು ಮುಂದೆ ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ. ಇದು ಕೊನೆಯ ಅವಕಾಶವಾಗಿದೆ ಎಂದು ಪಿಯು ಬೋರ್ಡ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ದ್ವಿತೀಯ ಪಿಯು ಪರೀಕ್ಷೆ: ಹಪ್ಪಳ ಮಾರಾಟಗಾರನ ಪುತ್ರಿ ರಾಜ್ಯಕ್ಕೆ ದ್ವಿತೀಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.