ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಆತಂಕದ ನಡುವೆಯೂ ಯಶಸ್ವಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿದ ಬಳಿಕ, ಇದೀಗ ಪೂರಕ ಪರೀಕ್ಷೆಯ ಪರಿಷ್ಕೃತ ದಿನಾಂಕ ನಿಗದಿಯಾಗಿದೆ.
ಸೆಪ್ಟೆಂಬರ್ 7ರಿಂದ 18ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಪದವಿ ಪೂರ್ವ ಪರೀಕ್ಷಾ ಮಂಡಳಿ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.
ಬೆಳಗ್ಗೆ 10:15ರಿಂದ 1:30ರ ವರೆಗೆ ಹಾಗೂ ಮಧ್ಯಾಹ್ನ 2:15ರಿಂದ 5:30ರ ವರೆಗೆ ಪರೀಕ್ಷೆಗಳು ನಡೆಯಲಿದ್ದು, ವೇಳಾಪಟ್ಟಿ ಹೀಗಿದೆ.
- ಸೆ.7 ರಂದು ಬೆಳಗ್ಗೆ ಉರ್ದು, ಸಂಸ್ಕೃತ. ಮಧ್ಯಾಹ್ನ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್ನೆಸ್, ಹೋಂ ಸೈನ್ಸ್
- ಸೆ.8 ಬೆಳಗ್ಗೆ ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ,
- ಸೆ.9ರಂದು ಬೆಳಗ್ಗೆ ಹಿಂದಿ. ಮದ್ಯಾಹ್ನ ತಮಿಳು, ತೆಲುಗು, ಮಳಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
- ಸೆ.10ರಂದು ಬೆಳಗ್ಗೆ ಇಂಗ್ಲೀಷ್
- ಸೆ.11ರಂದು ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್. ಮದ್ಯಾಹ್ನ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಭೂಗರ್ಭ ಶಾಸ್ತ್ರ,
- ಸೆ.12ರಂದು ಬೆಳಗ್ಗೆ ಅರ್ಥಶಾಸ್ತ್ರ, ಭೌತಶಾಸ್ತ್ರ
- ಸೆ.14ರಂದು ಬೆಳಗ್ಗೆ ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ
- ಸೆ.15ರಂದು ಬೆಳಗ್ಗೆ ಕನ್ನಡ
- ಸೆ.16ರಂದು ಬೆಳಗ್ಗೆ ರಾಜ್ಯ ಶಾಸ್ತ್ರ, ಬೇಸಿಕ್ ಮಾಥ್ಸ್
- ಸೆ.18 ರಂದು ಬೆಳಗ್ಗೆ ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ, ಗಣಿತ
- ಸೆ. 19 ರಂದು ಬೆಳಗ್ಗೆ ಭೂಗೋಳ ಶಾಸ್ತ್ರ, ಮನ:ಶಾಸ್ತ್ರ