ETV Bharat / city

ನಿಗದಿಯಂತೆ ಶಾಲೆಗಳನ್ನ ಆರಂಭಿಸಿ, ಯಾವುದೇ ಕಾರಣಕ್ಕೂ ಮುಂದೂಡಬೇಡಿ: ಖಾಸಗಿ ಶಾಲೆಗಳಿಂದ ಸಿಎಂಗೆ ಪತ್ರ - ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್

ಮೇ 16ಕ್ಕೆ ಶೈಕ್ಷಣಿಕ ವರ್ಷ ಪುನಾರಂಭಕ್ಕೆ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಆದರೆ, ಕೆಲವರು ವೈಯಕ್ತಿಕ ಕಾರಣಕ್ಕೆ ಶಾಲೆಗಳ ಪುನಾರಂಭವನ್ನು ಮುಂದೂಡಬೇಕೆಂದು ಒತ್ತಾಯಿಸುತ್ತಿದ್ದು, ಯಾವುದೇ ಕಾರಣಕ್ಕೂ ಶಾಲೆಗಳ ಆರಂಭವನ್ನು ಮುಂದೂಡಬಾರದು ಎಂದು ಸಿಎಂಗೆ ಖಾಸಗಿ ಶಾಲೆಗಳು ಪತ್ರ ಬರೆದಿವೆ

school-reopen-in-karnataka
ನಿಗದಿಯಂತೆ ಶಾಲೆಗಳನ್ನ ಆರಂಭಿಸಿ, ಯಾವುದೇ ಕಾರಣಕ್ಕೂ ಮುಂದೂಡಬೇಡಿ: ಖಾಸಗಿ ಶಾಲೆಗಳಿಂದ ಸಿಎಂಗೆ ಪತ್ರ
author img

By

Published : May 6, 2022, 5:40 PM IST

ಬೆಂಗಳೂರು: ಶಿಕ್ಷಣ ಇಲಾಖೆಯು 2022-23ನೇ ಶೈಕ್ಷಣಿಕ ವರ್ಷ ಪುನಾರಂಭಕ್ಕೆ ಇದೇ ಮೇ 16ಕ್ಕೆ ದಿನಾಂಕ ನಿಗದಿ ಮಾಡಿದೆ. ಆದರೆ, ಇದಕ್ಕೆ ಪೋಷಕರ ವರ್ಗ ವಿರೋಧ ವ್ಯಕ್ತಪಡಿಸಿದೆ. ಕಾರಣ ಕೋವಿಡ್ ನಾಲ್ಕನೇ ಅಲೆ ಭೀತಿ ಇರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದ್ದು, ಪ್ರವೇಶ ಶುಲ್ಕ, ಸಮವಸ್ತ್ರ ಖರೀದಿಸಿದ ಮೇಲೆ ಲಾಕ್​​ಡೌನ್ ಘೋಷಣೆ ಮಾಡಿ ಬಳಿಕ ಆನ್​​ಲೈನ್ ಶಿಕ್ಷಣ ಆರಂಭಿಸಲಾಗುತ್ತದೆ. ಹೀಗಾಗಿ ತಡವಾಗಿ ಶೈಕ್ಷಣಿಕ ವರ್ಷ ಆರಂಭಿಸುವಂತೆ ಪೋಷಕರು ಸರ್ಕಾರಕ್ಕೆ ಒತ್ತಾಯ ಮಾಡ್ತಿದ್ದಾರೆ. ಕೋವಿಡ್ ಸ್ಥಿತಿ - ಗತಿ ನೋಡಿಕೊಂಡು ಶಾಲಾ ಪುನಾರಂಭದ ದಿನಾಂಕ ಘೋಷಿಸುವಂತೆ ಹೇಳುತ್ತಿದ್ದಾರೆ.

ಆದರೆ, ಖಾಸಗಿ ಶಾಲೆಗಳು ಈಗ ನಿಗದಿಯಾಗಿರುವ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಬಾರದು. ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಒತ್ತು ನೀಡುವಂತೆ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮುಖ್ಯಮಂತ್ರಿಗೆ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ‌ 2019-20ರಿಂದ ಪ್ರಸುತ್ತ ಸಾಲಿನ ತನಕ ಪೂರ್ವ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಶೈಕ್ಷಣಿಕ ಚಟುವಟಿಕೆಗಳು ಅತ್ಯಂತ ಕನಿಷ್ಠ ಕಲಿಕೆ ಆಗಿವೆ. ಇದರಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಶೈಕ್ಷಣಿಕವಾಗಿ ಅನ್ಯಾಯ ಎಸಗಿದಂತೆ ಆಗುತ್ತದೆ ಎಂದಿದ್ದಾರೆ.

ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಜವಾಬ್ದಾರಿಯಿಂದ ಇದನ್ನ ಅರಿತು ಮೇ 16ಕ್ಕೆ ಶಾಲೆ ಪುನರ್ ಆರಂಭಿಸಿ, ಶೈಕ್ಷಣಿಕ ಸುಧಾರಣೆಗೆ ರೂಪು ರೇಷೆಗಳನ್ನ ಹಮ್ಮಿಕೊಂಡಿತ್ತು. ಆದರೆ, ಕೆಲವರು ವೈಯಕ್ತಿಕ ಅಭಿಪ್ರಾಯಗಳ ಮೂಲಕ ಬೇಸಿಗೆ ನೆಪವೊಡ್ಡಿ ಶಾಲೆ ಪ್ರಾರಂಭ ಮುಂದೂಡಲು ಕೆಲವರು ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಸರ್ಕಾರಕ್ಕೆ ಶಾಲೆ ಆರಂಭ ಮುಂದೂಡಲು ಶಿಫಾರಸು ಮಾಡಿದ್ದಾರೆ.‌ ಆದರೆ, ಯಾವುದೇ ಒತ್ತಡಕ್ಕೆ ಮಣಿಯಾದೇ ಯಾವುದೇ ಕಾರಣಕ್ಕೂ ಶಾಲೆ ಆರಂಭ ಮುಂದೂಡಬಾರದು ಅಂತ ಕೆಲವರು ಒತ್ತಾಯ ಮಾಡಿದ್ದಾರೆ.‌ ಮಕ್ಕಳ ನಿರಂತರ ಕಲಿಕೆಗೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸರ್ಕಾರ ಬಿದ್ದರೂ ಪರ್ವಾಗಿಲ್ಲ ಕಿಂಗ್ ಪಿನ್ ಹೆಸರು ಹೇಳಿ: ಮಾಜಿ ಮುಖ್ಯಮಂತ್ರಿ HDKಗೆ ಆರಗ ಸವಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.