ಬೆಂಗಳೂರು: ಕೊರೊನಾತಂಕದ ನಡುವೆಯೂ ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ಮಕರ ಸಂಕ್ರಾಂತಿ ಹಬ್ಬಾಚರಣೆ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧಿಕೃತ ನಿವಾಸ ಕಾವೇರಿಯಲ್ಲೂ ಹಬ್ಬದ ಸಂಭ್ರಮವಿತ್ತು.
![sankranti-festival-celebration-in-cm-yadiyurappa-home](https://etvbharatimages.akamaized.net/etvbharat/prod-images/kn-bng-04-cm-sankranthi-script-7208080_14012021150852_1401f_1610617132_871.jpg)
ಕಾವೇರಿ ನಿವಾಸದ ಆವರಣದಲ್ಲಿ ಕೊಟ್ಟಿಗೆ ನಿರ್ಮಿಸಿ ಸಾಕಿರುವ ಗಿರ್ ತಳಿ ಗೋವುಗಳಿಗೆ ಪೂಜೆ ಸಲ್ಲಿಸಿ ಸಾಂಪ್ರದಾಯಿಕ ರೀತಿಯಲ್ಲಿ ಸಿಎಂ ಸಂಕ್ರಾಂತಿ ಆಚರಿಸಿದರು.
ಗೋಹತ್ಯೆ ನಿಷೇಧ ಕಾಯ್ದೆಗೆ ವಿಧಾನಸಭೆಯಲ್ಲಿ ಅಂಕಿತ ಸಿಕ್ಕ ನಂತರ ರಾಜ್ಯಾದ್ಯಂತ ಬಿಜೆಪಿ ಆಯೋಜಿಸಿದ್ದ ಗೋಪೂಜಾ ಕಾರ್ಯಕ್ರಮದಲ್ಲಿಯೂ ಸಿಎಂ ಭಾಗವಹಿಸಿ ತಮ್ಮ ನಿವಾಸದಲ್ಲಿನ ಹಸುಗಳಿಗೆ ಪೂಜೆ ಸಲ್ಲಿಸಿದ್ದರು. ಇದೀಗ ಸಂಕ್ರಾಂತಿಯ ಕಾರಣಕ್ಕೆ ಗೋಪೂಜೆ ನೆರವೇರಿಸಿದ್ದಾರೆ.