ಬೆಂಗಳೂರು: ನಟ ಸಂಚಾರಿ ವಿಜಯ್ ಅವರು ಎರಡು ಕಣ್ಣುಗಳ ದಾನದಿಂದ ಇಬ್ಬರು ರೋಗಿಗಳ ಬಾಳಿಗೆ ಬೆಳಕಾಗಿದ್ದಾರೆ. ವಿಜಯ್ ವಯಸ್ಸಿನ ಒಬ್ಬರಿಗೆ ಹಾಗೂ ಮತ್ತೊಬ್ಬ ಯುವಕನಿಗೆ ಕಣ್ಣು ಜೋಡಣೆ ಯಶಸ್ವಿಯಾಗಿದೆ ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಸುಜಾತಾ ರಾಥೋಡ್ ತಿಳಿಸಿದರು.
ಸಂಚಾರಿ ವಿಜಯ್ ಕುಟುಂಬಕ್ಕೆ ಕೃತಜ್ಞತೆ ತಿಳಿಸಿದ ಅವರು, ಈ ಎರಡು ಕಣ್ಣುಗಳಿಂದ ಎರಡು ಜೀವಗಳ ಬಾಳಿಗೆ ಬೆಳಕಾಗಿದ್ದಾರೆ. ನಮ್ಮಲ್ಲಿ ಇಬ್ಬರಿಗೆ ಕಣ್ಣನ್ನು ನೀಡಲಾಗಿದೆ. ಅಗತ್ಯವಾಗಿ ಬೇಕಾದ ರೋಗಿಗಳಿಗೆ ಕಣ್ಣು ಜೋಡಣೆ ಮಾಡಲಾಗಿದೆ. ಬ್ರೈನ್ ಡೆಡ್ ಆದಾಗ ಕಣ್ಣುಗಳು ಉತ್ತಮ ಗುಣಮಟ್ಟದಲ್ಲೇ ಇರುತ್ತವೆ ಎಂದು ತಿಳಿಸಿದರು.
ನಮ್ಮ ಆಸ್ಪತ್ರೆಗೆ ವಿಜಯ್ ದಾಖಲಾದಾಗ ಅವರು ಕಣ್ಣುಗಳು ಉತ್ತಮವಾಗಿ ಇದ್ದವು. ಇಬ್ಬರು ರೋಗಿಗಳು ವಿಜಯ್ ಅವರ ಕಣ್ಣಿನಿಂದ ಜಗತ್ತನ್ನು ನೋಡುವಂತಾಗಿದೆ. ಸದ್ಯ ಆಪರೇಷನ್ ಆಗಿದ್ದು 6 ರಿಂದ 8 ಗಂಟೆ ಬಳಿಕ ದೃಷ್ಟಿ ಬರಲಿದೆ. 24 ಗಂಟೆಯೊಳಗೆ ಅವರ ದೃಷ್ಟಿ ಯಾವ ಪ್ರಮಾಣದಲ್ಲಿದೆ ಎಂಬುದು ತಿಳಿಯಲಿದೆ ಎಂದು ಹೇಳಿದರು.
ಓದಿ..'ಹರಿವಿ'ನ ಪಯಣ ಮುಗಿಸಿ ಹೋದ ‘ಸಂಚಾರಿ’: ಮಣ್ಣಲ್ಲಿ ಮಣ್ಣಾದ ವಿಜಯ್
ಸ್ನೇಹಿತನ ತೋಟದಲ್ಲಿ ವಿಜಯ್ ಅಂತ್ಯಸಂಸ್ಕಾರ: ಮುಗಿಲು ಮುಟ್ಟಿದ ಆಕ್ರಂದನ