ಬೆಂಗಳೂರು: ಮುಷ್ಕರದಲ್ಲಿ ಪಾಲ್ಗೊಂಡ ಸಾರಿಗೆ ನೌಕರರ ಮಾರ್ಚ್ ತಿಂಗಳ ವೇತನಕ್ಕೆ ತಡೆಹಿಡಿದಿರುವ ನಿಗಮಗಳು, ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಸಂಬಳ ಪಾವತಿಸಿವೆ.
ಮುಷ್ಕರದ ನಡುವೆ ಕೆಲಸಕ್ಕೆ ಹಾಜರಾದ ನಾಲ್ಕು ನಿಗಮಗಳ ನೌಕರರಿಗೆ ಇಂದು ವೇತನ ಭಾಗ್ಯ ಕರುಣಿಸಿದೆ. ನಾಲ್ಕು ನಿಗಮಗಳ ಚಾಲಕ-ನಿರ್ವಾಹಕರಿಗೆ ವೇತನ ಪಾವತಿಸಲಾಗಿದೆ.
ಕೆಎಸ್ಆರ್ಟಿಸಿ 4,256 ನೌಕರರಿಗೆ, ಬಿಎಂಟಿಸಿ 960, ಎನ್ಡಬ್ಲೂಕೆಎಸ್ಆರ್ಟಿಸಿ -1,837, ಎನ್ಇಕೆಎಸ್ಆರ್ಟಿಸಿ-3,377 ನೌಕರರಿಗೆ ಮಾತ್ರ ವೇತನ ಬಿಡುಗಡೆ ಮಾಡಿದೆ.
ಉಳಿದ ಸಿಬ್ಬಂದಿ ಈವರೆಗೆ ತಮ್ಮ ಪಟ್ಟು ಸಡಿಲಿಸದೇ ಸತತ 6ನೇ ದಿನವೂ ಮುಷ್ಕರ ಮುಂದುವರಿಸಿದ್ದಾರೆ. ಇಂದು ತಮ್ಮ ತಮ್ಮ ಕುಟುಂಬಗಳೊಂದಿಗೆ ತಟ್ಟೆ, ಲೋಟ ಹಿಡಿದು ಬೀದಿಗಿಳಿದಿದ್ದಾರೆ.