ETV Bharat / city

ಯಶಸ್ವಿನಿ ಯೋಜನೆ ಮರು ಜಾರಿಗೆ ಎಸ್ಎಂ ಕೃಷ್ಣ ಸಂತಸ..!

author img

By

Published : Mar 5, 2022, 9:38 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿವೃಧ್ಧಿ ಪರ ಬಜೆಟ್ ಮಂಡಿಸಿದ್ದು, ಈ ಕುರಿತು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಹಿಂದೆ ಎಸ್ ಎಂ ಕೃಷ್ಣ ಆಡಳಿತಾವಧಿಯಲ್ಲಿ ರೈತರು, ರೈತ ಮಹಿಳೆಯರ ಆರೋಗ್ಯ ರಕ್ಷಣೆ ಮತ್ತು ಅವರಿಗೆ ಉತ್ಕೃಷ್ಟ ದರ್ಜೆಯ ಚಿಕಿತ್ಸೆ ಲಭಿಸಲು ಪೂರಕವಾಗುವ ಯಶಸ್ವಿ ಆರೋಗ್ಯ ಯೋಜನೆ ಮರುಜಾರಿ ಮಾಡುವ ಘೋಷಣೆ ಮಾಡಿ, ಯೋಜನೆ ಜಾರಿಗೆ 300 ಕೋಟಿ ಮೀಸಲಿಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

s-m-krishna-expressed-his-happiness-for-re-implemention-of-yashashvini-project
ಯಶಸ್ವಿನಿ ಯೋಜನೆ ಮರು ಜಾರಿಗೆ ಎಸ್ಎಂ ಕೃಷ್ಣ ಸಂತಸ..!

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಪರ ಬಜೆಟ್ ಮಂಡಿಸಿದ್ದು, ಯಶಸ್ವಿನಿ ಆರೋಗ್ಯ ಯೋಜನೆ ಮರು ಜಾರಿ ಮಾಡುವ ಘೋಷಣೆ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಾಡಿನ ಅಭಿವೃದ್ಧಿಗೆ ಪೂರಕವಾಗಿ ಕರ್ನಾಟಕ ರಾಜ್ಯದ 2022-23ರ ಸಾಲಿನ ಆಯವ್ಯಯ ಮಂಡಿಸಿದ್ದು, ಇದು ಜನಪರ ಹಾಗೂ ಅಭಿವೃದ್ಧಿ ಪರ ಬಜೆಟ್ ಆಗಿದೆ.

ವಲಯವಾರು ವಿಂಗಡನೆ ಮಾಡಿ ವಿಶೇಷವಾಗಿ ಮಹಿಳೆಯರಿಗೆ ಮತ್ತು ಮಕ್ಕಳ ಅಭಿವೃದ್ಧಿಗೆ ಒತ್ತು ಕೊಟ್ಟಿರುವುದು ಹಾಗೂ ಎಲ್ಲ ವಲಯಗಳಿಗೆ ಪೂರಕವಾದ ಬಜೆಟ್ ಮಂಡಿಸಿರುವ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆಗಳು ಎಂದು ಎಸ್ಎಂ ಕೃಷ್ಣ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಸಹಕಾರ ಇಲಾಖೆಯ ಮೂಲಕ ರೈತರು, ರೈತ ಮಹಿಳೆಯರ ಆರೋಗ್ಯ ರಕ್ಷಣೆ ಮತ್ತು ಅವರಿಗೆ ಉತ್ಕೃಷ್ಟ ದರ್ಜೆಯ ಚಿಕಿತ್ಸೆ ಲಭಿಸಲು ಅನುಕೂಲ ಕಲ್ಪಿಸುವ “ಯಶಸ್ವಿನಿ ಆರೋಗ್ಯ ಯೋಜನೆ ಜಾರಿಗೊಳಿಸಿದ್ದೆ. ಕಾಲಾನಂತರ ಕೆಲವು ವರ್ಷಗಳ ಹಿಂದೆ ಸದರಿ ಯೋಜನೆ ಸ್ಥಗಿತಗೊಂಡಿತ್ತು. ಇದು ರೈತಾಪಿ ವರ್ಗಕ್ಕೆ ಅದರಲ್ಲೂ ರೈತ ಮಹಿಳೆಯರಿಗೆ ಅನಾನುಕೂಲವಾಗಿತ್ತು. ಇಂದು ತಾವು ಮತ್ತೆ "ಯಶಸ್ವಿನಿ ಆರೋಗ್ಯ" ಯೋಜನೆ ಮರುಜಾರಿಗೆ ನಿರ್ಧರಿಸಿರುವುದು ಅತ್ಯಂತ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ಇಪ್ಪತ್ತು ವರ್ಷಗಳ ನಂತರವು ನಮ್ಮ ಸರ್ಕಾರ ನಾಡಿನ ಜನರ ಆರೋಗ್ಯ ರಕ್ಷಣೆಗೆ ತೆಗೆದುಕೊಂಡ ಮಹತ್ವದ ಯೋಜನೆಯಾಗಿದ್ದು, ಬಹಳ ಪ್ರಸ್ತುತವಾಗಿದೆ. ಸದರಿ ಯೋಜನೆ ಜನರಿಗೆ ಅವಶ್ಯವಾಗಿದ್ದು, ಯೋಜನೆಯ ಮರುಜಾರಿಗೆ 300 ಕೋಟಿ ಹಣ ಮೀಸಲಿಸಿರುವುದು ಸಂತಸ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಹೇಳಿದ್ದಾರೆ.

ಓದಿ : ಯುದ್ಧ: ಸಂಭವನೀಯ ನೈಸರ್ಗಿಕ ಅಪಾಯ, ನೀರಿನ ಕೊರತೆ ಬಗ್ಗೆ ಎಚ್ಚರಿಸಿದ ತಜ್ಞರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.