ಬೆಂಗಳೂರು : ಗಣೇಶ ಚತುರ್ಥಿಗೆ ಬಿಬಿಎಂಪಿ ಹಲವು ನಿಯಮಗಳನ್ನು ಜಾರಿಗೆ ಮಾಡುವ ಚಿಂತನೆಯಲ್ಲಿದೆ. ಕಳೆದ ಬಾರಿಯ ನಿಯಮಗಳನ್ನೇ ಈ ಬಾರಿಯೂ ವಿಧಿಸಲಾಗುತ್ತದೆ. ಕಳೆದ ಬಾರಿ ವಾರ್ಡಿಗೆ ಒಂದು ಗಣಪ ಎನ್ನುವ ನಿಯಮವಿತ್ತು. ಅದನ್ನೇ ಮುಂದುವರೆಸುವ ಬಗ್ಗೆ ಸಭೆ ನಡೆಸಿ ಪರಿಶೀಲಿಸಿದ ಬಳಿಕ ನಿರ್ಣಯಿಸಲಾಗುವುದು ಎಂದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಈ ಕುರಿತು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತುಷಾರ್ ಗಿರಿನಾಥ್ ಪಿಒಪಿ ಗಣಪತಿಗಳನ್ನ ತಯಾರು ಮಾಡಬಾರದು ಎನ್ನುವ ನಿಯಮವಿದೆ. ಯಾರೂ ಸಹ ಪಿಒಪಿ ವಿಗ್ರಹಗಳನ್ನ ತಯಾರು ಮಾಡಿ ಮಾರಾಟ ಮಾಡಬಾರದು. ಹಾಗೆ ಮಾಡಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನಿಯಮದಲ್ಲಿ ಅಂತಹ ಉಲ್ಲಂಘನೆ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಸೇರಿ ರೇಡ್ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಿರಿನಾಥ್ ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ : ಹರ್ ಘರ್ ತಿರಂಗ: ಸ್ವ- ಸಹಾಯ ಗುಂಪುಗಳ ಮಹಿಳೆಯರಿಂದಲೂ ಸಾಥ್