ETV Bharat / city

ದೊಡ್ಡಬಳ್ಳಾಪುರದಲ್ಲಿ ಮುಂಜಾನೆ 3 ಗಂಟೆಗೆ ಪ್ರದರ್ಶನಗೊಂಡ RRR, ಕುಣಿದು ಕುಪ್ಪಳಿಸಿದ ಫ್ಯಾನ್ಸ್​ - ಸ್ ಎಸ್ ರಾಜಮೌಳಿ

ಇಂದು ಮುಂಜಾನೆ 3 ಗಂಟೆಗೆ ದೊಡ್ಡಬಳ್ಳಾಪುರ ನಗರದ ಸೌಂದರ್ಯ ಮಹಲ್​ನಲ್ಲಿ RRR ಚಿತ್ರ ಪ್ರದರ್ಶನಗೊಂಡಿತು. ಆರ್​ಆರ್​ಆರ್​ ಸಿನಿಮಾ ಪ್ರಾರಂಭವಾಗುತ್ತಿದ್ದಂತೆ ಫ್ಯಾನ್ಸ್​ ಹೂವಿನ ಸುರಿಮಳೆಯನ್ನೇ ಹರಿಸಿದರು. ನಂತರ ಸಿಹಿ ಹಂಚಿ, ಚಿತ್ರಮಂದಿರದ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

RRR
RRR
author img

By

Published : Mar 25, 2022, 8:52 AM IST

ದೊಡ್ಡಬಳ್ಳಾಪುರ : ದೇಶದ್ಯಾಂತ ಇಂದು RRR ಸಿನಿಮಾ ತೆರೆಕಂಡಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ಮುಂಜಾನೆ 3 ಗಂಟೆಗೆ ದೊಡ್ಡಬಳ್ಳಾಪುರ ನಗರದ ಸೌಂದರ್ಯ ಮಹಲ್​ನಲ್ಲಿ ಚಿತ್ರ ಪ್ರದರ್ಶನಗೊಂಡಿತು. ಅಭಿಮಾನಿಗಳಿಗಾಗಿ ಮುಂಜಾನೆಯೇ ಸಿನಿಮಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಥಿಯೇಟರ್ ತುಂಬಾ ಜಮಾಯಿಸಿದ ಅಭಿಮಾನಿಗಳು ಪರದೆ ಮುಂದೆ ಕುಣಿದು ಕುಪ್ಪಳಿಸಿದರು.

ಆರ್​ಆರ್​ಆರ್​ ಸಿನಿಮಾ ಪ್ರಾರಂಭವಾಗುತ್ತಿದ್ದಂತೆ ಫ್ಯಾನ್ಸ್​ ಹೂವಿನ ಸುರಿಮಳೆಗೈದರು. ನಂತರ ಸಿಹಿ ಹಂಚಿ, ಚಿತ್ರಮಂದಿರದ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.'ಆರ್​ಆರ್​ಆರ್​' ಸಿನಿಮಾವನ್ನ ಬಾಹುಬಲಿ, ಮಗಧೀರ ಮುಂತಾದ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ಭಾರತೀಯ ಚಿತ್ರರಂಗದ ಖ್ಯಾತ ಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಟಾಲಿವುಡ್​ ಚಿತ್ರರಂಗದ ಸೂಪರ್ ಸ್ಟಾರ್​ಗಳಾದ ಜೂನಿಯರ್ ಎನ್​ಟಿಆರ್ ಮತ್ತು ರಾಮಚರಣ್ ನಾಯಕರಾಗಿ ಮಿಂಚಿದ್ದು, ನಟಿ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅದ್ಧೂರಿಯಾಗಿ ಪ್ರದರ್ಶನಗೊಳ್ಳುತ್ತಿರುವ ಆರ್​ಆರ್​ಆರ್​

ಇದನ್ನೂ ಓದಿ: 'ಹೌಸ್​ ಪಾರ್ಟಿ'ಯಲ್ಲಿ ರ್‍ಯಾಪರ್ ALL OK ಜೊತೆಗೆ ಸೊಂಟ ಬಳುಕಿಸಿದ ಅದ್ವಿಕಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.