ಬೆಂಗಳೂರು: ಕೊಲೆ, ಕೊಲೆ ಯತ್ನ ಹಾಗೂ ದರೋಡೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಹಲವು ವರ್ಷಗಳಿಂದ ಭೂಗತನಾಗಿದ್ದ ಕುಖ್ಯಾತ ರೌಡಿಶೀಟರ್ ಬಾಂಬೆ ರವಿ ಕೊರೊನಾಗೆ ಬಲಿಯಾಗಿದ್ದಾನೆ.
ಹಲವು ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ತಲೆಮರೆಸಿಕೊಂಡಿದ್ದ ಬಾಂಬೆ ರವಿಗೆ ಕೋವಿಡ್ ಸೋಂಕು ತಗುಲಿ ಸ್ಥಳೀಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ರೌಡಿಶೀಟರ್ ಹಲವು ವರ್ಷಗಳಿಂದ ಬೆಂಗಳೂರು ಪೊಲೀಸರಿಗೆ ತಲೆನೋವಾಗಿದ್ದ. ಭೂಗತನಾಗಿದ್ದುಕೊಂಡೇ ನಗರದಲ್ಲಿ ರೌಡಿ ಚಟುವಟಿಕೆಯಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ.
ಕಳೆದ ವರ್ಷ ನಿರ್ಮಾಪಕ ಉಮಾಪತಿ ಹಾಗೂ ಸಹೋದರ ದೀಪಕ್‌ಗೆ ಕರೆ ಮಾಡಿ ರವಿ ಧಮ್ಕಿ ಹಾಕಿದ್ದ. ಅಲ್ಲದೆ ಸುಪಾರಿ ನೀಡಿ ತಮ್ಮ ಸಹಚರರ ಮೂಲಕ ಕೊಲೆಗೂ ಸಂಚು ರೂಪಿಸಿದ್ದ. ಈ ಸಂಬಂಧ ಮಾಹಿತಿ ಆಧರಿಸಿ ಸುಪಾರಿ ಹುಡುಗರನ್ನು ರೆಡ್ ಹ್ಯಾಂಡ್ ಆಗಿ ಜಯನಗರ ಪೊಲೀಸರು ಬಂಧಿಸಿದ್ದರು.
ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವಾಗ ಬಾಂಬೆ ರವಿ ನಿರ್ಮಾಪಕ ಉಮಾಪತಿ ಸೋದರ ದೀಪಕ್ ಕೊಲೆ ಯತ್ನ ವಿಚಾರಕ್ಕೆ ಕ್ಷಮೆ ಕೇಳಿದ್ದಾನೆ. ನನ್ನಿಂದ ತಪ್ಪಾಗಿದೆ, ಬೇರೆಯವರ ಮಾತು ಕೇಳಿ ಈ ಕೆಲಸಕ್ಕೆ ಕೈ ಹಾಕಿದೆ. ಇದರಲ್ಲಿ ನನ್ನನ್ನು ಕೆಲವರು ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾನೆ ಎನ್ನಲಾಗ್ತಿದೆ.