ETV Bharat / city

ಪರಿಷತ್​ನಿಂದ ಪ್ರಮುಖರ ನಿವೃತ್ತಿ: ಹಿರಿತನದ ಕೊರತೆ ಎದುರಿಸಲಿದೆಯಾ ಮೇಲ್ಮನೆ?

2016ರಲ್ಲಿ ಆಯ್ಕೆಯಾಗಿದ್ದ ಹಲವು ಘಟಾನುಘಟಿ ಸದಸ್ಯರ ಅವಧಿ 2022ರ ಜನವರಿ 5ಕ್ಕೆ ಮುಕ್ತಾಯವಾಗಲಿದೆ. 21 ಮಂದಿ ಈ ಸದಸ್ಯರ ಜತೆ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದಿಂದ ಅದೇ ವರ್ಷ ಆಯ್ಕೆಯಾಗಿ ಬಂದಿದ್ದ ನಾಲ್ವರು ಸದಸ್ಯರ ಅವಧಿಯೂ ಕೊನೆಯಾಗುತ್ತಿದೆ.

Retirement of 25 members from the council
ಪರಿಷತ್​ನಿಂದ ಪ್ರಮುಖರ ನಿವೃತ್ತಿ-ಹಿರಿತನದ ಕೊರತೆ ಎದುರಿಸಲಿದೆಯಾ ಮೇಲ್ಮನೆ?
author img

By

Published : Nov 10, 2021, 2:58 PM IST

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ, ಉಪಸಭಾಪತಿ, ಸಭಾನಾಯಕ, ಪ್ರತಿಪಕ್ಷ ನಾಯಕ, ಮಾಜಿ ಸಭಾಪತಿ, ಮೂರು ಪಕ್ಷದ ಸಚೇತಕರು ಹಾಗೂ ಹಿರಿಯ ಸದಸ್ಯರ ನಿವೃತ್ತಿ ಸದ್ಯದಲ್ಲೇ ಆಗಲಿದ್ದು, ಯಾರ್ಯಾರು ಗೆದ್ದು ಮರುಪ್ರವೇಶ ಮಾಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

ದೇಶದ ಕೇವಲ 6 ರಾಜ್ಯಗಳಲ್ಲಿ ಮಾತ್ರ ಇರುವ ಮೇಲ್ಮನೆಗೆ ಅತ್ಯಂತ ಹಿರಿಯ ಹಾಗೂ ಗಂಭೀರ ಪಾತ್ರ ನಿರ್ವಹಣೆಯ ಹಿರಿಮೆ ಇದೆ. ವಿವಿಧ ಕ್ಷೇತ್ರದ ನುರಿತ ವ್ಯಕ್ತಿಗಳನ್ನು ಆಯ್ಕೆ ಮಾಡಿ ಇಲ್ಲಿಗೆ ಕಳುಹಿಸಲಾಗುತ್ತದೆ. ನಿರಂತರವಾಗಿ ಸಾಮಾಜಿಕ, ಶೈಕ್ಷಣಿಕ, ಮನರಂಜನೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ದುಡಿದು ಅನುಭವ ಇರುವ ಸದಸ್ಯರೇ ಇಲ್ಲಿದ್ದು, ರಾಜ್ಯದ ವಿವಿಧ ಮಹತ್ವದ ವಿಚಾರಗಳ ಮೇಲೆ ಚರ್ಚೆ ನಡೆಸುವ ಪ್ರತಿಭಾವಂತ ಸದಸ್ಯರನ್ನು ಒಳಗೊಂಡ ಸದನ ಇದಾಗಿದೆ.

ಘಟಾನುಗಟಿ ಸದಸ್ಯರ ಅವಧಿ ಮುಕ್ತಾಯ:

ಸ್ಥಳೀಯ ಸಂಸ್ಥೆಗಳ ಸದಸ್ಯರ ಮೂಲಕ 2016ರಲ್ಲಿ ಆಯ್ಕೆಯಾಗಿದ್ದ ಹಲವು ಘಟಾನುಘಟಿ ಸದಸ್ಯರ ಅವಧಿ 2022ರ ಜನವರಿ 5ಕ್ಕೆ ಮುಕ್ತಾಯವಾಗಲಿದೆ. 21 ಮಂದಿ ಈ ಸದಸ್ಯರ ಜತೆ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದಿಂದ ಅದೇ ವರ್ಷ ಆಯ್ಕೆಯಾಗಿ ಬಂದಿದ್ದ ನಾಲ್ವರು ಸದಸ್ಯರ ಅವಧಿಯೂ ಕೊನೆಯಾಗುತ್ತಿದೆ. ಎಲ್ಲ ಸ್ಥಾನಗಳಿಗೆ ಬರುವ ಡಿ.10 ರಂದು ಚುನಾವಣೆ ನಡೆಯಲಿದ್ದು, 14ರಂದು ಫಲಿತಾಂಶ ಪ್ರಕಟವಾಗಲಿದೆ.

ಹಿರಿಯ ನಾಯಕರ ನಿವೃತ್ತಿ:

ಒಟ್ಟು ತೆರವಾಗಲಿರುವ ಸದಸ್ಯರಲ್ಲಿ ಬಿಜೆಪಿಯ-6 ಮತ್ತು ಓರ್ವ ಬೆಂಬಲಿತ ಪಕ್ಷೇತರ ಸದಸ್ಯ ಸೇರಿ 7 ಸ್ಥಾನ. ಕಾಂಗ್ರೆಸ್​​- 13 ಹಾಗೂ ಜೆಡಿಎಸ್​​ನ 5– ಸದಸ್ಯರ ಸ್ಥಾನ ತೆರವಾಗಲಿದೆ. ವಿಧಾನ ಪರಿಷತ್​​ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ, ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಕಾಂಗ್ರೆಸ್ ಪಕ್ಷದ ಸಚೇತಕ ಎಂ. ನಾರಾಯಣಸ್ವಾಮಿ, ಜೆಡಿಎಸ್ ಸಚೇತಕ ಅಪ್ಪಾಜಿ ಗೌಡ, ಹಿರಿಯ ಸದಸ್ಯರಾದ ಆರ್ ಧರ್ಮಸೇನ, ಕೆ.ಸಿ. ಕೊಂಡಯ್ಯ, ಬಸವರಾಜ್ ಪಾಟೀಲ್ ಇಟಗಿ, ಆರ್. ಪ್ರಸನ್ನ ಕುಮಾರ್, ಸಂದೇಶ್ ನಾಗರಾಜ್, ಸಿ.ಆರ್. ಮನೋಹರ್ ಮತ್ತಿತರರು ಸಹ ನಿವೃತ್ತಿಯಾಗುತ್ತಿದ್ದಾರೆ.

ಸಭಾಪತಿ ಸ್ಥಾನದ ಮೇಲೆ ಕಣ್ಣು:

75 ಸದಸ್ಯರ ಬಲ ಹೊಂದಿರುವ ವಿಧಾನ ಪರಿಷತ್​ನಲ್ಲಿ ಸದ್ಯ ಯಾವುದೇ ಸ್ಥಾನ ತೆರವಾಗಿಲ್ಲ. 75ರ ಪೈಕಿ ಬಿಜೆಪಿ ಒಬ್ಬ ಪಕ್ಷೇತರ (ಅಭಯ್ ಪಾಟೀಲ್) ಬೆಂಬಲದೊಂದಿಗೆ ಒಟ್ಟು 33 ಸದಸ್ಯರ ಬಲ ಹೊಂದಿದೆ. ಉಳಿದಂತೆ ಕಾಂಗ್ರೆಸ್​-29 ಹಾಗೂ ಜೆಡಿಎಸ್​ನ 13 ಸದಸ್ಯರಿದ್ದಾರೆ. ಒಟ್ಟು 25 ಸ್ಥಾನಗಳು ತೆರವಾಗುತ್ತಿವೆ. ಇದನ್ನು ತುಂಬಿಕೊಳ್ಳಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹರಸಾಹಸ ನಡೆಸುತ್ತಿವೆ.

ಆಡಳಿತ ಪಕ್ಷವಾಗಿರುವ ಬಿಜೆಪಿ ಪೂರ್ಣ ಬಹುಮತ ಪಡೆಯಲು ಒಟ್ಟು 38 ಸದಸ್ಯರ ಬಲ ಹೊಂದಬೇಕಾಗಿದೆ. ಅಷ್ಟು ಸದಸ್ಯಬಲ ಇಲ್ಲದ ಹಿನ್ನೆಲೆ ಜೆಡಿಎಸ್​ನ 13 ಸದಸ್ಯರ ಬೆಂಬಲ ಪಡೆದಿತ್ತು. ಇದಕ್ಕಾಗಿ ಸಭಾಪತಿ ಸ್ಥಾನವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿತ್ತು. ಆದರೆ ಈ ಚುನಾವಣೆಯಲ್ಲಿ ತಮ್ಮ ಎಲ್ಲ 7 ಸ್ಥಾನ ಗೆದ್ದುಕೊಳ್ಳುವ ಜೊತೆಗೆ ಹೆಚ್ಚುವರಿಯಾಗಿ ಇನ್ನೂ5-6 ಸ್ಥಾನ ಗೆದ್ದುಕೊಳ್ಳುವ ಸಿದ್ಧತೆ ನಡೆದಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಇರುವ ಕ್ಷೇತ್ರಗಳತ್ತಲೂ ದೃಷ್ಟಿ ಹರಿಸಿದೆ. ಕೆಲ ಗೆಲ್ಲುವ ಸಾಮರ್ಥ್ಯ ಇರುವ ಸದಸ್ಯರನ್ನು ಸೆಳೆಯುವ ಇಲ್ಲವೇ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಪರಿಷತ್​​ನ 25 ಸ್ಥಾನಗಳಿಗೆ ಚುನಾವಣೆ: ಯಾರ್ಯಾರ ಅವಧಿ ಮುಗಿಯುತ್ತಿದೆ ಗೊತ್ತಾ?

ಶತಾಯಗತಾಯ ಈ ಚುನಾವಣೆಯಲ್ಲಿ 38ಕ್ಕಿಂತ ಹೆಚ್ಚಿನ ಸದಸ್ಯರನ್ನು ಹೊಂದಿ, ಅಧಿಕೃತ ಆಡಳಿತ ಪಕ್ಷವಾಗಿ ಕೂರುವ ಸಿದ್ಧತೆ ನಡೆಸಿದೆ. ಗ್ರಾಮ ಪಂಚಾಯತ್​ ಸದಸ್ಯರ ಮೂಲಕ ಆಯ್ಕೆ ನಡೆಯುವ ಈ ಬಾರಿಯ ಚುನಾವಣೆ ಬಿಜೆಪಿಯ ಕನಸಿಗೆ ಎಷ್ಟು ಪೋಷಣೆ ನೀಡಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಸದಸ್ಯರ ಹಿಂದೇಟು:

ಗೆಲ್ಲುವ ಭರವಸೆ ಇದ್ದರೂ ವಯಸ್ಸಿನ ಕಾರಣ ನೀಡಿ, ಪಕ್ಷ ತಮಗೆ ಎಲ್ಲ ವಿಧದ ಸ್ಥಾನ-ಮಾನ ಗೌರವ ನೀಡಿದೆ, ಹೊಸಬರಿಗೆ ಅವಕಾಶ ನೀಡೋಣ ಎಂಬ ನಿರ್ಧಾರಕ್ಕೆ ಕಾಂಗ್ರೆಸ್​ನ ಕೆಲ ಹಿರಿಯ ಸದಸ್ಯರು ಬಂದಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಕೆಲ ಹಿರಿಯ ಸದಸ್ಯರ ಬದಲು ಹೊಸಬರಿಗೆ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ಒಂದೊಮ್ಮೆ ಇವರು ಆಯ್ಕೆಯಾಗಿ ಪರಿಷತ್ ಪ್ರವೇಶ ಮಾಡಿದರೂ, ಪಕ್ಷದಿಂದ ಹಿಂದಿನ ಜವಾಬ್ದಾರಿಯೇ ಸಿಗುತ್ತದೆ ಎನ್ನುವ ವಿಶ್ವಾಸ ಹಲವರಿಗೆ ಇಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಪಕ್ಷ ನಾಯಕ, ಸಚೇತಕ ಸ್ಥಾನಗಳಿಗೆ ಇರುವ ಸದಸ್ಯರ ಕಣ್ಣು ನೆಟ್ಟಿದೆ. ಇದರಿಂದ ಮರು ಆಯ್ಕೆಯಾದರೂ ಈಗಿರುವ ಪ್ರತಿಪಕ್ಷ ನಾಯಕರು, ಸಚೇತಕರಿಗೆ ಮರಳಿ ಅಧಿಕಾರ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ: ಗೆಲುವಿಗಿಂತಲೂ ಅಭ್ಯರ್ಥಿಗಳ ಹುಡುಕಾಟದ್ದೇ ಜೆಡಿಎಸ್​ಗೆ ದೊಡ್ಡ ಸವಾಲು: ಸಮರ್ಥರ ಹುಡುಕಾಟದಲ್ಲಿ ದಳಪತಿಗಳು!

ಇದೇ ಸ್ಥಿತಿ ಬಿಜೆಪಿ, ಜೆಡಿಎಸ್​​ನಲ್ಲೂ ಇದೆ. ಹೊಸ ಮುಖಗಳಿಗೆ ಅಧಿಕಾರ, ಅವಕಾಶ ನೀಡುವ ನಿರೀಕ್ಷೆ ಹೊಂದಲಾಗಿದೆ. ಇನ್ನೊಂದು ವಾರದಲ್ಲಿ ಪರಿಷತ್ ತೆರವಾಗುವ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಯಾರು ಸ್ಪರ್ಧಿಸುತ್ತಾರೆ, ಯಾರು ಹಿಂದೆ ಸರಿಯುತ್ತಾರೆ ಎನ್ನುವ ವಿವರ ಸಿಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.