ETV Bharat / city

ಮಾಜಿ ಭೂಗತ ದೊರೆ ದಿ.ಮುತ್ತಪ್ಪ ರೈ ಪುತ್ರನ ವಿರುದ್ಧ ದೂರು ನೀಡಿದ ರಿಯಲ್ ಎಸ್ಟೇಟ್ ಉದ್ಯಮಿ

ದೂರುದಾರ ಶ್ರೀನಿವಾಸ್ ನಾಯ್ಡು ಹಾಗೂ ರಿಕ್ಕಿ ರೈ ಹಲವು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದು, ಮಾರತ್ ಹಳ್ಳಿ ಬಳಿಯಿರುವ ಜಾಗದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತಂತೆ. ರಿಕ್ಕಿ ರೈಗೆ ಸೇರಿದ ಜಾಗವನ್ನ ಶ್ರೀನಿವಾಸ್ ನಾಯ್ಡು ಡೆವಲಪ್ ಮಾಡುತ್ತಿದ್ದರಂತೆ. ಇದಕ್ಕಾಗಿ 1.50 ಕೋಟಿ ರೂಪಾಯಿ ಹಣ ಕೇಳಿದ್ದರಂತೆ.‌ ಈ ಹಿನ್ನೆಲೆ ಇಬ್ಬರ ನಡುವೆ ಕಿರಿಕ್ ನಡೆದಿತ್ತೆಂದು ಹೇಳಲಾಗಿದೆ..

ಮುತ್ತಪ್ಪ ರೈ ಪುತ್ರನ ವಿರುದ್ಧ ದೂರು ನೀಡಿದ ರಿಯಲ್ ಎಸ್ಟೇಟ್ ಉದ್ಯಮಿ

author img

By

Published : Nov 1, 2021, 3:45 PM IST

ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ನುಗ್ಗಿ ಕೋಟ್ಯಂತರ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ದೂರು ನೀಡಿದ ಶ್ರೀನಿವಾಸ್ ನಾಯ್ಡು ಎಂಬುವರು ದಿ.ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ವಂಚನೆ ಆರೋಪಿ ಮಾಡಿ, ದೂರು ನೀಡಿದ್ದಾರೆ.

ಶ್ರೀನಿವಾಸ್ ನಾಯ್ಡು ನೀಡಿದ ದೂರಿನ ಮೇರೆಗೆ ಗಂಭೀರ ಸ್ವರೂಪವಲ್ಲದ ದೂರು (ಎನ್​ಸಿಆರ್) ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳೆದ ಅ.19ರ ರಾತ್ರಿ ಮನೆಯ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ರೇಂಜ್ ರೋವರ್ ಕಾರಿನ ಮುಂಭಾಗಕ್ಕೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದರು.

ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಈ ಘಟನೆ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಘಟನೆಯ ಹಿಂದೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕೈವಾಡವಿದೆ ಎನ್ನಲಾಗುತ್ತಿದೆ.

ದೂರುದಾರ ಶ್ರೀನಿವಾಸ್ ನಾಯ್ಡು ಹಾಗೂ ರಿಕ್ಕಿ ರೈ ಹಲವು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದು, ಮಾರತ್ ಹಳ್ಳಿ ಬಳಿಯಿರುವ ಜಾಗದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತಂತೆ. ರಿಕ್ಕಿ ರೈಗೆ ಸೇರಿದ ಜಾಗವನ್ನ ಶ್ರೀನಿವಾಸ್ ನಾಯ್ಡು ಡೆವಲಪ್ ಮಾಡುತ್ತಿದ್ದರಂತೆ. ಇದಕ್ಕಾಗಿ 1.50 ಕೋಟಿ ರೂಪಾಯಿ ಹಣ ಕೇಳಿದ್ದರಂತೆ.‌ ಈ ಹಿನ್ನೆಲೆ ಇಬ್ಬರ ನಡುವೆ ಕಿರಿಕ್ ನಡೆದಿತ್ತೆಂದು ಹೇಳಲಾಗಿದೆ.

ಇದೇ ವಿಚಾರಕ್ಕಾಗಿ ಅ.19ರಂದು ಮನೆಬಳಿ ಪಾರ್ಕ್ ಮಾಡಿದ್ದ ಆತನ ಸಹಚರರು ಬೆಂಕಿ ಇಟ್ಟು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಬೇರೆ ಬೇರೆ ಅಪರಿಚಿತ ವ್ಯಕ್ತಿಗಳಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗುತ್ತಿದೆ ಎನ್ನಲಾಗಿದೆ.

ಓದಿ: ಕೇವಲ ವಾಟ್ಸ್‌ಆ್ಯಪ್ ಚಾಟ್‌ಗಳ ಆಧಾರದ ಮೇಲೆ ಡ್ರಗ್ಸ್ ಸರಬರಾಜು ಮಾಡಿದ್ದಾರೆ ಎನ್ನಲು ಆಗುವುದಿಲ್ಲ : ನ್ಯಾಯಾಲಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.