ETV Bharat / city

ಬೆಂಗಳೂರಲ್ಲಿ ಅತ್ಯಾಚಾರ ಆರೋಪಿ ಅರೆಸ್ಟ್​.. ವಿಚಾರಣೆ ವೇಳೆ ಕ್ಯಾಬ್​ ಡ್ರೈವರ್​ ಹೇಳಿದ್ದೇನು? - rape case accused arrested in bengaluru,

ಯುವತಿ ಮೇಲೆ‌ ಅತ್ಯಾಚಾರವೆಸಗಿದ ಆರೋಪದಡಿ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತಾನು ಅತ್ಯಾಚಾರ ಎಸಗಿಲ್ಲ, ಮಲಗಿದ್ದ ಯುವತಿಯನ್ನು ಎಬ್ಬಿಸಲು ಮುಂದಾಗಿದ್ದೆ ಅಷ್ಟೇ ಎಂದು ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.

Bangalore
ಬೆಂಗಳೂರು
author img

By

Published : Sep 22, 2021, 6:46 PM IST

Updated : Sep 22, 2021, 7:01 PM IST

ಬೆಂಗಳೂರು: ಸ್ನೇಹಿತೆಯ ‌ಮನೆಯಲ್ಲಿ ತಡರಾತ್ರಿ ಪಾರ್ಟಿ ಮುಗಿಸಿಕೊಂಡು ಕ್ಯಾಬ್​​ನಲ್ಲಿ ಬರುವಾಗ ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ಜೀವನ್​ ಭೀಮಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ಯಾಬ್​​ ಚಾಲಕನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೂರು ಮೂಲದ ದೇವರಾಜಲು (25) ಬಂಧಿತ ಆರೋಪಿ. ಘಟನೆ ಬಳಿಕ ನಗರದ ಹೊರವಲಯದಲ್ಲಿ ಅಡಗಿಕೊಂಡಿರುವ ಮಾಹಿತಿ ಆಧರಿಸಿ ಪ್ರಕರಣ ಸಂಬಂಧ ರಚಿಸಲಾಗಿದ್ದ ಮೂರು ವಿಶೇಷ ತಂಡ ರಚಿಸಲಾಗಿತ್ತು. ಈ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅವಿವಾಹಿತನಾಗಿರುವ ದೇವರಾಜಲು ನಗರದ ಆವಲಹಳ್ಳಿಯಲ್ಲಿ ವಾಸವಾಗಿದ್ದಾನೆ. ಕಳೆದ ಎರಡು ವರ್ಷಗಳಿಂದ ಉಬರ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಎಂದಿನಂತೆ ಮಂಗಳವಾರ ಮಧ್ಯರಾತ್ರಿ ಕೆಲಸದಲ್ಲಿ ನಿರತನಾಗಿದ್ದ. ಇದೇ ವೇಳೆ‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹೆಚ್​​ಎಸ್​​ಆರ್​​ ಲೇಔಟ್ ನಲ್ಲಿರುವ ಗೆಳತಿ ಮನೆಯಲ್ಲಿ ಪಾರ್ಟಿ ಮುಗಿಸಿ ತಡರಾತ್ರಿ 2 ಗಂಟೆ ವೇಳೆಗೆ ಮುರುಗೇಶ್ ಪಾಳ್ಯಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು.

ಇದರಂತೆ ಚಾಲಕ ದೇವರಾಜ್ ಯುವತಿಯನ್ನು ಕ್ಯಾಬ್ ಹತ್ತಿಸಿಕೊಂಡಿದ್ದಾನೆ. ಮನೆ ಬಳಿ ಬರುವಾಗ ತನ್ನ ಮೇಲೆ ಚಾಲಕ ದೌರ್ಜನ್ಯ ನಡೆಸಿ ಆತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರು ನೀಡಿದ್ದಳು.

ಯುವತಿ ನಿದ್ರೆಯಲ್ಲಿದ್ದಾಗ ದೌರ್ಜನ್ಯ, ಆತ್ಯಾಚಾರ ಆರೋಪ:

ತಡರಾತ್ರಿ ಕ್ಯಾಬ್​​ನಲ್ಲಿ ಬರುವಾಗ ನಿದ್ರಿಸಿದ್ದಾಗ ಮಾರ್ಗ ಮಧ್ಯೆ ಚಾಲಕ ಬಲವಂತವಾಗಿ ದೈಹಿಕ ದೌರ್ಜನ್ಯ ನಡೆಸಿದ್ದಾನೆ. ಬಳಿಕ‌ ಆತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಈ ಬಗ್ಗೆ ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಆತ್ಯಾಚಾರ ಬಗ್ಗೆ ಯುವತಿ ದೂರು ನೀಡಿದ್ದಳು.‌ ದೂರು ದಾಖಲಿಸಿಕೊಂಡ ಜೀವನ್​ ಭೀಮಾ ನಗರ ಪೊಲೀಸರು ಮೂರು ವಿಶೇಷ ತಂಡ ರಚಿಸಿ ಕ್ಯಾಬ್ ಚಾಲಕನ ಕಾರಿನ ಸಂಖ್ಯೆ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 376 ರಡಿ ಆತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಅರೋಪಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ‌.

ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಯು ಅತ್ಯಾಚಾರ ಆರೋಪವನ್ನು ತಳ್ಳಿಹಾಕಿದ್ದಾನೆ. ಕ್ಯಾಬ್​​ನಲ್ಲಿ ಮಲಗಿದ್ದ ಯುವತಿಯನ್ನು ಎಬ್ಬಿಸಲು ಮುಂದಾಗಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕ್ಯಾಬ್ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ

Last Updated : Sep 22, 2021, 7:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.