ಬೆಂಗಳೂರು: ಮಾಜಿ ಸಂಸದೆ ರಮ್ಯಾ ಸರಣಿ ಟ್ವೀಟ್ ಮುಂದುವರೆಸಿದ್ದು, ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸಮರ ಸಾರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಟ್ಯಾಗ್ ಮಾಡಿ ಸರಣಿ ಟ್ವೀಟ್ ಮಾಡಿರುವ 'ಪದ್ಮಾವತಿ', ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಲು ಮುಂದಾಗಿದ್ದಾರೆ.
ಡಿಕೆಶಿ ವಿರುದ್ಧ ಬಹಿರಂಗವಾಗಿಯೇ ಟ್ವಿಟ್ಟರ್ನಲ್ಲಿ ಹಲವು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿರುವ ರಮ್ಯಾ, ನನ್ನನ್ನು ಟ್ರೋಲ್ ಮಾಡುವಂತೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ‘ಕಚೇರಿ’ ಈ ಸಂದೇಶಗಳನ್ನು ರವಾನಿಸಿದೆ. ಆದರೆ, ಅವರು ತೊಂದರೆ ತೆಗೆದುಕೊಳ್ಳುವುದು ಬೇಡ, ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿರುವ ಮಾಜಿ ಸಂಸದೆ, ಈ ಮೂಲಕ ಡಿಕೆಶಿ ವಿರುದ್ಧ ಸಮರ ಸಾರಿದ್ದಾರಾ? ಎಂಬ ಅನುಮಾನ ಮೂಡಿದೆ. ನಿನ್ನೆಯಷ್ಟೇ ಟ್ವೀಟ್ ಮಾಡಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಪರ ಬ್ಯಾಟಿಂಗ್ ಮಾಡುವ ಮೂಲಕ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಕಾಲೆಳೆದಿದ್ದರು. ಇದೀಗ ನೇರವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದಂತೆ ಗೋಚರಿಸುತ್ತಿದೆ.
ಮರು ಪ್ರವೇಶಕ್ಕೆ ಅಡ್ಡಿ: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಮ್ಯಾ, ವರ್ಷದ ಹಿಂದೆಯೇ ಈ ಹುದ್ದೆಯನ್ನು ತ್ಯಜಿಸಿ ರಾಜಕೀಯ ರಂಗದಿಂದ ದೂರ ಉಳಿದಿದ್ದರು. ಸಂಸದೆ ಸುಮಲತಾ ವಿರುದ್ಧ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಆಶಯ ಹೊಂದಿ, ಸಿದ್ಧತಾ ಕಾರ್ಯ ಆರಂಭಿಸಿಕೊಂಡಿದ್ದರು. ಆದರೆ, ಕೆಲ ತಿಂಗಳ ಹಿಂದೆ ಜೆಡಿಎಸ್ನಿಂದ ಉಚ್ಛಾಟಿತರಾಗಿರುವ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹಲವು ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿಯಾಗಿ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಕಾಂಗ್ರೆಸ್ ಟಿಕೆಟ್ ನೀಡುವ ಆಶಯವನ್ನು ಡಿಕೆಶಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರ್ವಕವಾಗಿಯೇ ಡಿಕೆಶಿ ಟಿಕೆಟ್ ನೀಡುವ ಭರವಸೆಯನ್ನು ಶಿವರಾಮೇಗೌಡರಿಗೆ ನೀಡಿದ್ದಾರೆ ಎಂಬ ಮಾಹಿತಿ ಇದೆ.
ಪಕ್ಷದಿಂದ 8 ಕೋಟಿ ರೂ. ಪಡೆದು ವಂಚಿಸಿಲ್ಲ.. ನಾನು ಕಾಂಗ್ರೆಸ್ನಿಂದ 8 ಕೋಟಿ ರೂಪಾಯಿ ಪಡೆದು ಬಳಿಕ ರಾಜೀನಾಮೆ ನೀಡುವ ಮೂಲಕ ವಂಚಿಸಿದ್ದೇನೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಆದ್ರೆ ಇದು ಸತ್ಯಕ್ಕೆ ದೂರವಾದ ಸುದ್ದಿ. ನಾನು ಪಕ್ಷಕ್ಕೆ ವಂಚನೆ ಮಾಡಿಲ್ಲ, ನನ್ನ ವೈಯಕ್ತಿ ಕಾರಣಗಳಿಂದ ರಾಜೀನಾಮೆ ನೀಡಿದ್ದೇನೆ. ಈಗ ನಾನು ಮೌನವಾಗಿರುವುದೇ ತಪ್ಪು ಎಂಬಂತಾಗಿದೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
-
After I quit, ‘she duped the congress of 8 crores & ran away’ was planted in the news esp Kannada channels in an attempt to destroy my credibility. I didn’t run away. I resigned for personal reasons. I certainly did not dupe the party of 8 crores. My mistake was staying silent-
— Divya Spandana/Ramya (@divyaspandana) May 12, 2022 " class="align-text-top noRightClick twitterSection" data="
">After I quit, ‘she duped the congress of 8 crores & ran away’ was planted in the news esp Kannada channels in an attempt to destroy my credibility. I didn’t run away. I resigned for personal reasons. I certainly did not dupe the party of 8 crores. My mistake was staying silent-
— Divya Spandana/Ramya (@divyaspandana) May 12, 2022After I quit, ‘she duped the congress of 8 crores & ran away’ was planted in the news esp Kannada channels in an attempt to destroy my credibility. I didn’t run away. I resigned for personal reasons. I certainly did not dupe the party of 8 crores. My mistake was staying silent-
— Divya Spandana/Ramya (@divyaspandana) May 12, 2022
ಈ ಮೂಲಕ ಕಾಂಗ್ರೆಸ್ನಲ್ಲಿ ಭಿನ್ನಮತದ ಹೊಗೆಯಾಡುತ್ತಿದೆಯಾ ಎಂಬ ಅನುಮಾನ ಕಾಡತೊಡಗಿದೆ.
ಇದನ್ನೂ ಓದಿ: ಡಿಕೆಶಿ ಹೇಳಿಕೆಗೆ ರಮ್ಯಾ ಭಿನ್ನರಾಗ; ಬಂಡೆಗೆ ಸೆಡ್ಡು ಹೊಡೆದ್ರಾ ಪದ್ಮಾವತಿ!?