ETV Bharat / city

ರಮೇಶ್ ಆತ್ಮಹತ್ಯೆ ಪ್ರಕರಣ... ವಿಚಾರಣೆಗೆ ಸಹಕರಿಸಲು ಕಾಲಾವಕಾಶ ಕೇಳಿದ ಐಟಿ - IT Raid to Parameshwar homes

ಮಾಜಿ ಡಿಸಿಎಂ‌‌ ಡಾ. ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರು ಹೊರಡಿಸಿದ್ದ ನೋಟಿಸ್​ಗೆ ಐಟಿ ಅಧಿಕಾರಿಗಳು ಉತ್ತರಿಸಿದ್ದು, ಅದಕ್ಕೆ ಸಮಯಾವಕಾಶ ನೀಡುವಂತೆ ಹೇಳಿದ್ದಾರೆ.

Ramesh suicide case
author img

By

Published : Nov 4, 2019, 11:51 PM IST

ಬೆಂಗಳೂರು: ಮಾಜಿ ಡಿಸಿಎಂ‌‌ ಡಾ. ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರು ಹೊರಡಿಸಿದ್ದ ನೋಟಿಸ್​ಗೆ ಐಟಿ ಅಧಿಕಾರಿಗಳು ಉತ್ತರಿಸಿದ್ದು, ಅದಕ್ಕೆ ಸಮಯಾವಕಾಶ ನೀಡುವಂತೆ ಕೇಳಿದ್ದಾರೆ.

ರಮೇಶ್ ಬರೆದಿಟ್ಟ ಡೆತ್​​ನೋಟ್ ಹಾಗೂ ಕುಟುಂಬಸ್ಥರ ಆರೋಪಕ್ಕೆ ಉತ್ತರಿಸುವಂತೆ ಐಟಿ ಅಧಿಕಾರಿಗಳಿಗೆ ಜ್ಞಾನಭಾರತಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದ್ರೆ, ಐಟಿ ಅಧಿಕಾರಿಗಳು ನಾವು ನಿಮಗೆ ಯಾವುದೇ ಮಾಹಿತಿ ಕೊಡಲು ಆಗುವುದಿಲ್ಲ. ತನಿಖೆಗೆ ಸಹಕರಿಸುತ್ತೇವೆ. ಅದಕ್ಕೆ ಕಾಲಾವಕಾಶ ಕೊಡಿ ಎಂದು ಕೇಳಿದ್ದಾರೆ. ಈ‌ ಮಾಹಿತಿ ಪೊಲೀಸ್ ಮೂಲಗಳಿಂದ 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ.

ಪರಮೇಶ್ವರ್ ಜೊತೆ ಎಷ್ಟು ದಿವಸದಿಂದ ಕೆಲಸ ನಿರ್ವಹಿಸುತ್ತಿದ್ದರು. ಅವರ ಸಂಬಂಧ ಹೇಗಿತ್ತು ಎಂದು ರಮೇಶ್ ಕುಟುಂಬಸ್ಥರ ಹೇಳಿಕೆಯನ್ನ ಕೂಡ ಪೊಲೀಸರು ಪಡೆದಿದ್ದಾರೆ. ಪರಮೇಶ್ವರ್ ಅವರಿಂದಲೂ ಕೆಲ ಮಾಹಿತಿ ಕಲೆ ಹಾಕಿದ್ದಾರೆ. ಪೊಲೀಸರ ಬಳಿ‌ ರಮೇಶ್ ಆತ್ಮಹತ್ಯೆಗೂ ತನ್ನ ವ್ಯವಹಾರಕ್ಕೂ ಸಂಬಂಧವಿಲ್ಲ ಎಂದು ಪರಮೇಶ್ವರ್​ ತಿಳಿಸಿದ್ದಾರೆ ಎನ್ನಲಾಗ್ತಿದೆ.

ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ನಡೆದ ಸಂದರ್ಭದಲ್ಲಿಯೇ ರಮೇಶ್ ಅವರ ಮೇಲೆ ಕೂಡ ದಾಳಿ ನಡೆದಿತ್ತು. ದಾಳಿಗೆ ಹೆದರಿದ್ದ ರಮೇಶ್​ ಡೆತ್​​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.

Intro:ರಮೇಶ್ ಆತ್ಮಹತ್ಯೆ ;-
ಹೇಳಿಕೆ ದಾಖಲಿಸಲು ಟೈಮ್ ಪಡೆದ ಐಟಿ.

ಮಾಜಿ ಡಿಸಿಎಂ‌‌ ಪರಂಮೇಶ್ವರ್ ಮನೆ ಮೇಲೆ ಐಟಿ ಅಧಿಕಾರಿಗಳು ನಡೆಸಿದಾಗ ಪಿಎ ರಮೇಶ್ ಅವರ ಮೇಲೆ ಕೂಡ ದಾಳಿ ನಡೆದಿತ್ತು. ದಾಳಿಗೆ ಹೆದರಿ ಆತ್ಮಹತ್ಯೆ ‌ಮಾಡಿಕೊಳ್ಳುವುದಾಗಿ ರಮೇಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.‌

ಇನ್ನು ಈ ಸಂಬಂಧ ಜ್ನಾನಭಾರತಿ ಪೊಲೀಸರು ತನೀಕೆ ಚುರುಕುಗೊಳಿಸಿದ್ದು ರಮೇಶ್ ಬರೆದಿಟ್ಟ ಡೆತ್ ನೋಟ್ ಹಾಗೂ ಕುಟುಂಬಸ್ಥರ ಆರೊಪಕ್ಕೆ ಉತ್ತರ ನೀಡುವಂತೆ ಐಟಿ ಅಧಿಕಾರಿಗಳಿಗೆ ಜ್ನಾನಭಾರತಿ ಪೊಲೀಸರು ನೋಟಿಸ್ ಜಾರಿ ಮಾಡಿದ್ರು. ಆದರೆ ಐಟಿ ಅಧಿಕಾರಿಗಳು ಜ್ನಾನಭಾರತಿ ಪೊಲೀಸರಿಗೆ ಸದ್ಯ ನಾವು ನಿಮಗೆ ಯಾವುದೇ ಮಾಹಿತಿ ಕೊಡೋದಕ್ಕೆ ಆಗಲ್ಲ. ತನಿಖೆಗೆ ನಾವು ಸಹಕಾರ ಕೊಡ್ತೀ ವಿ ಸಮಾಯವಾಕಾಶ ಕೊಡಿ ಎಂದು ಐಟಿಯವರು ತಿಳಿಸಿದ್ದಾರೆ. ಈ‌ಮಾಹಿತಿಪೊಲೀಸ್ ಮೂಲಗಳಿಂದ ಈ ಟಿವಿ ಭಾರತ್ ಗೆ ಮಾಹಿತಿ ಲಭ್ಯವಾಗಿದೆ

ಹಾಗೆ ಆತ್ಮಹತ್ಯೆಗೆ ಶರಣಾದ ರಮೇಶ್ ಪರಮೇಶ್ವರ್ ಅವರಿಗೆ ಆಪ್ತ
ಆಗಿರುವ ಕಾರಣ ಪಿಎ ರಮೇಶ್ ಜೊತೆ ಪರಮೇಶ್ವರ್ ವ್ಯವಹಾರ ಎಂತದ್ದು.ಪರಮೇಶ್ವರ್ ಜೊತೆ ಎಷ್ಟು ದಿವಸದಿಂದ ಕೆಲಸ ನಿರ್ವಹಿಸ್ತಿದ್ರು ಎಂದು ರಮೇಶ್ ಕುಟುಂಬಸ್ಥರ ಹೇಳಿಕೆಯನ್ನ ಕೂಡ ಪೊಲೀಸರುಪಡೆದಿದ್ದಾರೆ.

ಹಾಗೆ ಮಾಜಿ ಡಿಸಿಎಂ ಪರಮೇಶ್ವರ್ ಅವರ‌ಮನೆಗೆ ಕೂಡ ಜ್ನಾನಭಾರತಿ ಪೊಲೀಸರು ಎಂಟ್ರಿ ಕೊಟ್ಟು ಕೆಲ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಈ ವೇಳೆ ಪರಮೇಶ್ವರ್ ಅವರು ಪೊಲೀಸರ ಬಳಿ‌ ರಮೇಶ್ ಆತ್ಮಹತ್ಯೆಗೂ ತನ್ನ ವ್ಯವಹಾರಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆಂದು ಮೂಲಗಳಿಂದ ಮಾಹಿತಿ‌ ಲಭ್ಯವಾಗಿದೆ.
Body:KN_BNG_08_IT_7204498Conclusion:KN_BNG_08_IT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.