ETV Bharat / city

ಮೆಗಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ರೈನ್ ಬೋ ಆಸ್ಪತ್ರೆ - ಲಸಿಕೆ ಅಭಿಯಾನ ಸುದ್ದಿ

ರೈನ್ ಬೋ ಮಕ್ಕಳ ಆಸ್ಪತ್ರೆಯಿಂದ ಕಲ್ಯಾಣಿ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಬೃಹತ್ ಲಸಿಕಾ ಅಭಿಯಾನಕ್ಕೆ ಚಿತ್ರ ನಟಿ ಶುಭಾ ಪೂಂಜಾ ಹಾಗೂ ಸಂಯುಕ್ತಾ ಹೊರನಾಡು ಚಾಲನೆ ನೀಡಿದರು.

ಮೆಗಾ ಲಸಿಕಾ ಅಭಿಯಾನಕ್ಕೆ ಚಾಲನೆ
ಮೆಗಾ ಲಸಿಕಾ ಅಭಿಯಾನಕ್ಕೆ ಚಾಲನೆ
author img

By

Published : Jun 12, 2021, 9:24 PM IST

ಬೆಂಗಳೂರು: ಕೋವಿಡ್​ನಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಲಸಿಕೆ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿರುವ ರೈನ್ ಬೋ ಮಕ್ಕಳ ಆಸ್ಪತ್ರೆಯ ವತಿಯಿಂದ ಕಲ್ಯಾಣಿ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಬೃಹತ್ ಲಸಿಕಾ ಅಭಿಯಾನಕ್ಕೆ ಚಿತ್ರ ನಟಿ ಶುಭಾ ಪೂಂಜಾ ಹಾಗೂ ಸಂಯುಕ್ತಾ ಹೊರನಾಡು ಚಾಲನೆ ನೀಡಿದರು.

ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ನಟಿ ಶುಭಾ ಪೂಂಜಾ, "ಸಾವಿರಾರು ಜನ ಲಸಿಕೆ ಪಡೆಯಲು ಉತ್ಸಾಹ ತೋರಿಸುತ್ತಿರುವುದು ನಿಜಕ್ಕೂ ಸಂತಸದ ಬೆಳವಣಿಗೆ. ನಾನು ಇಲ್ಲೇ ಲಸಿಕೆ ಪಡೆದಿದ್ದೇನೆ. ಇಷ್ಟೊಂದು ಜನ ಲಸಿಕೆಗಾಗಿ ಬಂದಿದ್ದರು ಕೋವಿಡ್ ನಿಯಾಮಾವಳಿಯಂತೆ ಎಲ್ಲ ಮುನ್ನೆಚ್ಚರಿಕೆಗಳನ್ನ ತೆಗೆದುಕೊಂಡು ಸುರಕ್ಷತೆಯಲ್ಲಿ ರಾಜಿಯಾಗದಂತೆ ಇಷ್ಟೊಂದು ಜನರಿಗೆ ಲಸಿಕೆ ನೀಡುತ್ತಿರುವ ರೈನ್ ಬೋ ಆಸ್ಪತ್ರೆಯ ಈ ಕಾರ್ಯಕ್ಕೆ ಪ್ರಶಂಸೆ ಸಲ್ಲಲೇಬೇಕು", ಎಂದು ಹೇಳಿದರು.

ಮತ್ತೊಬ್ಬ ಅತಿಥಿ ನಟಿ ಸಂಯುಕ್ತಾ ಹೊರನಾಡು ಮಾತನಾಡಿ, "ರೈನ್ ಬೋ ಆಸ್ಪತ್ರೆ 1500ಕ್ಕಿಂತ ಅಧಿಕ ಜನರಿಗೆ ಇಂದು ಲಸಿಕೆ ಹಾಕುತ್ತಿದೆ. ಅವರ ಈ ಬೃಹತ್ ಯೋಜನೆಗೆ ಅಭಿನಂದನೆ ಸಲ್ಲಿಸುತ್ತೇನೆ. ಕೋವಿಡ್​ನಿಂದ ರಕ್ಷಣೆ ಪಡೆಯಬೇಕು ಎಂದರೆ ಲಸಿಕೆ ಹಾಕಿಸಿಕೊಳ್ಳಲೇಬೇಕು. ಹೀಗಾಗಿ ಆದಷ್ಟು ಬೇಗ ಲಸಿಕೆ ಪಡೆದು ಕೊರೊನಾ ಮುಕ್ತ ಸಮಾಜ ನಿರ್ಮಾಣ ಮಾಡೋಣ" ಎಂದರು.

ಈ ಬೃಹತ್ ಕಾರ್ಯಕ್ರಮ ಕುರಿತಂತೆ ವಿವರ ನೀಡಿದ ಬನ್ನೇರುಘಟ್ಟ ರೈನ್ ಬೋ ಮಕ್ಕಳ ಆಸ್ಪತ್ರೆಯ ಯುನಿಟ್ ಹೆಡ್ ನಿತ್ಯಾನಂದ, "ಸಾಧ್ಯವಾದಷ್ಟು ಅತೀ ಹೆಚ್ಚು ಜನರಿಗೆ ಲಸಿಕೆ ಹಾಕುವ ಮೂಲಕ ಸಮಾಜವನ್ನ ಮಹಾಮಾರಿ ಕೋವಿಡ್​ನಿಂದ ರಕ್ಷಿಸಬೇಕೆಂಬ ಸದುದ್ದೇಶದಿಂದ ಈ ಅಭಿಯಾನವನ್ನ ನಡೆಸುತ್ತಿದ್ದೇವೆ. ಜನ ಸಾಕಷ್ಟು ಸಂಖ್ಯೆಯಲ್ಲಿ ಲಸಿಕೆ ಪಡೆಯಲು ಉತ್ಸಾಹ ತೋರಿಸುತ್ತಿರುವುದು ಆಶಾದಾಯಕ ಬೆಳವಣಿಗೆ.

ನಾವು ಸುರಕ್ಷಿತವಾಗಿರಬೇಕೆಂದರೆ ನಮ್ಮ ಸಮಾಜ ಸುರಕ್ಷಿತವಾಗಿರಬೇಕು. ಈ ಕಾರಣಕ್ಕೆ ರೈನ್ ಬೋ ಈ ಕಾರ್ಯಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಒಂದೇ ದಿನದಲ್ಲಿ 10 ಸಾವಿರ ಜನರಿಗೆ ಲಸಿಕೆ ನೀಡುವ ಉದ್ದೇಶ ಹೊಂದಿದ್ದೇವೆ. ಎಲ್ಲರೂ ಲಸಿಕೆ ಸುಲಭವಾಗಿ ಲಭ್ಯವಾಗಬೇಕು ಎಂಬುದೇ ನಮ್ಮ ಆಶಯ" ಎಂದರು.

ರೈನ್ ಬೋ ಮಕ್ಕಳ ಆಸ್ಪತ್ರೆ ಹಮ್ಮಿಕೊಂಡ ಬೃಹತ್ ಲಸಿಕಾ ಕಾರ್ಯಕ್ರಮಕ್ಕೆ ಎರಡು ಸಾವಿರಕ್ಕೂ ಅಧಿಕ ಜನ ನೋಂದಣಿ ಮಾಡಿಸಿಕೊಂಡು ಸರತಿಯಲ್ಲಿ ನಿಂತು ಲಸಿಕೆ ಪಡೆದುಕೊಂಡರು. ಒಂದು ತಿಂಗಳುಗಳ ಕಾಲ ಆಸ್ಪತ್ರೆಯು ಬನ್ನೇರುಘಟ್ಟ ರಸ್ತೆಯ ಕಲ್ಯಾಣಿ ಕಲಾ ಮಂದಿರದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಿದೆ. ನೋಂದಣಿ ಮಾಡಿಸಿಕೊಳ್ಳುವ ಮೂಲಕ ತ್ವರಿತವಾಗಿ ಲಸಿಕೆ ಪಡೆದುಕೊಳ್ಳಬಹುದಾಗಿದೆ.

ಮುಂದಿನ ಒಂದು ತಿಂಗಳು ರೈನ್ ಬೋ ಮಕ್ಕಳ ಆಸ್ಪತ್ರೆ ಇಲ್ಲಿ ಲಸಿಕಾ ಕಾರ್ಯಕ್ರಮ ನಡೆಸಲಿದೆ. ನೋಂದಣಿ ಮಾಡಿಸಿಕೊಳ್ಳುವ ಮೂಲಕ ಲಸಿಕೆ ಪಡೆದು ಕೋವಿಡ್​ನಿಂದ ಸಾಧ್ಯವಾದಷ್ಟು ರಕ್ಷಣೆ ಪಡೆಯಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.