ಬೆಂಗಳೂರು: ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿ ಧ್ವಂಸಗೊಳಿಸಿರುವ ಎಸ್ಎಫ್ಐ ಕಾರ್ಯಕರ್ತರ ಕ್ರಮವನ್ನು ರಾಜ್ಯ ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕೇರಳದ ವಯನಾಡಿನಲ್ಲಿರುವ ಕಚೇರಿಯನ್ನು ಎಸ್ಎಫ್ಐ ಕಾರ್ಯಕರ್ತರು ನಿನ್ನೆ ಧ್ವಂಸಗೊಳಿಸಿದ್ದರು. ಗುಡ್ಡಗಾಡು ಪ್ರದೇಶಗಳಲ್ಲಿ ಅರಣ್ಯದ ಸುತ್ತ ಬಫರ್ ವಲಯಗಳನ್ನು ರಚಿಸುವುದನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸುತ್ತಿತ್ತು. ಈ ಹೋರಾಟದ ಭಾಗವಾಗಿ ಎಸ್ಎಫ್ಐ ಕಾರ್ಯಕರ್ತರು ರಾಹುಲ್ ಗಾಂಧಿ ಕಚೇರಿಯನ್ನು ಧ್ವಂಸಗೊಳಿಸಿದ್ದರು.
-
ಕೇರಳದ ವಯನಾಡಿನಲ್ಲಿ ಶ್ರೀ @RahulGandhi ಅವರ ಕಚೇರಿಯನ್ನು ಎಸ್ಎಫ್ಐ ಕಾರ್ಯಕರ್ತರು ಧ್ವಂಸ ಮಾಡಿರುವುದು ಪ್ರಜಾಪ್ರಭುತ್ವದ ಆಶಯಗಳ ಮೇಲೆ ನಡೆದಿರುವ ದಾಳಿ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಹಾಗೆಯೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ. pic.twitter.com/DUKS3FqID1
— DK Shivakumar (@DKShivakumar) June 24, 2022 " class="align-text-top noRightClick twitterSection" data="
">ಕೇರಳದ ವಯನಾಡಿನಲ್ಲಿ ಶ್ರೀ @RahulGandhi ಅವರ ಕಚೇರಿಯನ್ನು ಎಸ್ಎಫ್ಐ ಕಾರ್ಯಕರ್ತರು ಧ್ವಂಸ ಮಾಡಿರುವುದು ಪ್ರಜಾಪ್ರಭುತ್ವದ ಆಶಯಗಳ ಮೇಲೆ ನಡೆದಿರುವ ದಾಳಿ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಹಾಗೆಯೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ. pic.twitter.com/DUKS3FqID1
— DK Shivakumar (@DKShivakumar) June 24, 2022ಕೇರಳದ ವಯನಾಡಿನಲ್ಲಿ ಶ್ರೀ @RahulGandhi ಅವರ ಕಚೇರಿಯನ್ನು ಎಸ್ಎಫ್ಐ ಕಾರ್ಯಕರ್ತರು ಧ್ವಂಸ ಮಾಡಿರುವುದು ಪ್ರಜಾಪ್ರಭುತ್ವದ ಆಶಯಗಳ ಮೇಲೆ ನಡೆದಿರುವ ದಾಳಿ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಹಾಗೆಯೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ. pic.twitter.com/DUKS3FqID1
— DK Shivakumar (@DKShivakumar) June 24, 2022
ಕಠಿಣ ಕ್ರಮಕ್ಕೆ ಆಗ್ರಹ: ಈ ಬಗ್ಗೆ ಟ್ವೀಟ್ ಮಾಡಿರುವ ಡಿ.ಕೆ. ಶಿವಕುಮಾರ್, ಎಸ್ಎಫ್ಐ ಕಾರ್ಯಕರ್ತರಿಂದ ನಡೆದ ಧ್ವಂಸ, ಪ್ರಜಾಪ್ರಭುತ್ವದ ಆಶಯಗಳ ಮೇಲಿನ ದಾಳಿ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
-
ಕೇರಳದ ವಯನಾಡಿನಲ್ಲಿ ಇಂದು ನಮ್ಮ ನಾಯಕರಾದ ಶ್ರೀ @RahulGandhi ಅವರ ಸಂಸದ ಕಚೇರಿಯನ್ನು ಧ್ವಂಸಗೊಳಿಸಿರುವ ಸುದ್ದಿ ಆಘಾತಕಾರಿ. #SFI ಪ್ರೇರಿತ ಈ ದಾಳಿಯನ್ನು ಉಗ್ರವಾಗಿ ಖಂಡಿಸುತ್ತೇನೆ. ಕೇರಳದ ಮುಖ್ಯಮಂತ್ರಿ ಶ್ರೀ @pinarayivijayan ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದಾಳಿಕೋರರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು. pic.twitter.com/rYtBJ9Jsr1
— M B Patil (@MBPatil) June 24, 2022 " class="align-text-top noRightClick twitterSection" data="
">ಕೇರಳದ ವಯನಾಡಿನಲ್ಲಿ ಇಂದು ನಮ್ಮ ನಾಯಕರಾದ ಶ್ರೀ @RahulGandhi ಅವರ ಸಂಸದ ಕಚೇರಿಯನ್ನು ಧ್ವಂಸಗೊಳಿಸಿರುವ ಸುದ್ದಿ ಆಘಾತಕಾರಿ. #SFI ಪ್ರೇರಿತ ಈ ದಾಳಿಯನ್ನು ಉಗ್ರವಾಗಿ ಖಂಡಿಸುತ್ತೇನೆ. ಕೇರಳದ ಮುಖ್ಯಮಂತ್ರಿ ಶ್ರೀ @pinarayivijayan ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದಾಳಿಕೋರರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು. pic.twitter.com/rYtBJ9Jsr1
— M B Patil (@MBPatil) June 24, 2022ಕೇರಳದ ವಯನಾಡಿನಲ್ಲಿ ಇಂದು ನಮ್ಮ ನಾಯಕರಾದ ಶ್ರೀ @RahulGandhi ಅವರ ಸಂಸದ ಕಚೇರಿಯನ್ನು ಧ್ವಂಸಗೊಳಿಸಿರುವ ಸುದ್ದಿ ಆಘಾತಕಾರಿ. #SFI ಪ್ರೇರಿತ ಈ ದಾಳಿಯನ್ನು ಉಗ್ರವಾಗಿ ಖಂಡಿಸುತ್ತೇನೆ. ಕೇರಳದ ಮುಖ್ಯಮಂತ್ರಿ ಶ್ರೀ @pinarayivijayan ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದಾಳಿಕೋರರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು. pic.twitter.com/rYtBJ9Jsr1
— M B Patil (@MBPatil) June 24, 2022
ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಸಂಸದರ ಕಚೇರಿ ಧ್ವಂಸದ ಸುದ್ದಿ ಆಘಾತಕಾರಿ. ಎಸ್ಎಫ್ಐ ಪ್ರೇರಿತ ದಾಳಿಯನ್ನು ಖಂಡಿಸುವೆ. ಈ ವಿಚಾರವನ್ನು ಕೇರಳದ ಸಿಎಂ ಪಿಣರಾಯಿ ಗಂಭೀರವಾಗಿ ಪರಿಗಣಿಸಬೇಕು. ದಾಳಿಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಟ್ವೀಟ್ನಲ್ಲಿ, ಇದೊಂದು ಕ್ರಿಮಿನಲ್ ಅಪರಾಧವಾಗಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇದನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ಕೋರಿದ್ದಾರೆ.
ಓದಿ: ಬಂಡಾಯ ಶಾಸಕರು ಅಪೇಕ್ಷಿಸಿದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ: ಸದಾನಂದ ಗೌಡ