ETV Bharat / city

ನಟಿಗಾಗಿ ಗೆಳೆಯರ ಕಿತ್ತಾಟ ಪ್ರಕರಣ: ಗಲಾಟೆ ನಂತರದ ಸಿಸಿಟಿವಿ ದೃಶ್ಯಾವಳಿ ಲಭ್ಯ - ನಟಿ ರಾಗಿಣಿ

ಬೆಂಗಳೂರಿನ ರಿಟ್ಜ್ ಕಾರ್ಲ್ಟನ್ ಹೋಟೆಲ್​​​ನಲ್ಲಿ ರಾಗಿಣಿ ಸ್ನೇಹಿತರಿಬ್ಬರು ಹೊಡೆದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ನಂತರದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.

ಸಿಸಿಟಿವಿ ದೃಶ್ಯ
author img

By

Published : Mar 19, 2019, 2:54 PM IST

ಬೆಂಗಳೂರು: ಸ್ಯಾಂಡಲ್​​​​​​ವುಡ್ ನಟಿ ರಾಗಿಣಿಗಾಗಿ ಅವರ ಇಬ್ಬರು ಗೆಳೆಯರು ಹೊಡೆದಾಡಿಕೊಂಡ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಘಟನೆ ನಂತರ ಬೌನ್ಸರ್​​​​​​ಗಳು ಶಿವಪ್ರಕಾಶ್​​​ನನ್ನು ಕರೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.

ಸಿಸಿಟಿವಿ ದೃಶ್ಯ

ಮೊದಲು ಶಿವಪ್ರಕಾಶ್​​​ರೊಂದಿಗೆ ಆತ್ಮೀಯವಾಗಿದ್ದ ರಾಗಿಣಿ ನಂತರ ರವಿ ಎಂಬಾತನೊಂದಿಗೆ ಹೆಚ್ಚು ಓಡಾಡುತ್ತಿದ್ದು, ಈ ಸಂಬಂಧ ಮೊನ್ನೆ ಶಿವಪ್ರಕಾಶ್ ಹಾಗೂ ಆರ್​​​​ಟಿಒ ಅಧಿಕಾರಿ ರವಿ ಇಬ್ಬರೂ ರೆಸಿಡೆನ್ಸಿ ರಸ್ತೆಯಲ್ಲಿರುವ ರಿಟ್ಜ್ ಕಾರ್ಲ್ಟನ್ ಹೋಟೆಲ್​​​​​​​​​​​​​​​​​​​​​​​ನಲ್ಲಿ ನಟಿ ಎದುರೇ ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ.

ಗಲಾಟೆ ನಂತರ ಶಿವಪ್ರಕಾಶ್​​​ನನ್ನು ಬೌನ್ಸರ್​​​​​​​ಗಳು ಕರೆದೊಯ್ಯತ್ತಿರುವ ದೃಶ್ಯ ರಿಟ್ಜ್ ಕಾರ್ಲ್ಟನ್ ಹೋಟೆಲ್​​ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಮೂವರಿಗೂ ನೋಟಿಸ್ ಜಾರಿ ‌ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

Intro:Body:

 Ragini

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.