ಬೆಂಗಳೂರು: ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಸದಸ್ಯರಾಗಿ ನಿವೃತ್ತ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಘವೇಂದ್ರ ಔರಾದ್ಕರ್ ಅವರ ಅವಧಿ ನಾಲ್ಕು ವರ್ಷದ್ದಾಗಿರುತ್ತದೆ. ಹಿರಿಯ ಐಪಿಎಸ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದ ಇವರು ಪೊಲೀಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿ ಎನ್ನುವ ಪ್ರಶಂಸೆಗೆ ಪಾತ್ರರಾಗಿದ್ದರು. ಬೆಂಗಳೂರು ಪೊಲೀಸ್ ಕಮೀಶನರ್ ಹುದ್ದೆ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಪೊಲೀಸ್ ಇಲಾಖೆಯಲ್ಲಿ ನಿಭಾಯಿಸಿದ್ದರು.
ರಾಜ್ಯ ಪೊಲಿಸರ ವೇತನ ಮತ್ತು ಬಡ್ತಿಗೆ ಸಂಬಂಧಿಸಿದಂತೆ ಔರಾದ್ಕರ್ ಅವರು ರಾಜ್ಯ ಸರ್ಕಾರಕ್ಕೆ ವರದಿ ನೀಡಿ ಪೋಲಿಸ್ ಇಲಾಖೆಯಲ್ಲಿದ್ದ ವೇತನ ತಾರತಮ್ಯ ನಿವಾರಣೆಗೆ ಪ್ರಯತ್ನಿಸಿದ್ದರು. ಪೊಲೀಸ್ ಇಲಾಖೆಯಲ್ಲಿ "ಔರಾದ್ಕರ್" ವರದಿ ಅಂತಾನೇ ಇದು ಹೆಸರುವಾಸಿಯಾಗಿದೆ. ರಾಜ್ಯ ಸರ್ಕಾರ ಸಹ ಔರಾದ್ಕರ್ ವರದಿಯನ್ನ ಜಾರಿ ಮಾಡಿದೆ.
(ಇದನ್ನೂ ಓದಿ: ದಿನಕ್ಕೆ 3 ಕೆಜಿ ಅನ್ನ, 3.5 ಕೆಜಿ ಮಾಂಸ, 5 ಕೆಜಿ ರೊಟ್ಟಿ.. 2 ಮದುವೆಯಾದ 200 ಕೆಜಿ ವ್ಯಕ್ತಿಯ ಆಹಾರ ಪದ್ಧತಿ ಇದು!)