ETV Bharat / city

ಗಂಡ ದೂರವಾಗಿದ್ದಕ್ಕೆ ಆಕ್ರೋಶ.. ಪಕ್ಕದ್ಮನೆಯ ಮಹಿಳೆಯ ಸೀರೆ ಬಿಚ್ಚಿ ಮರಕ್ಕೆ ಕಟ್ಟಿ ಹಾಕಿದ ನಾರಿ! - ದೊಡ್ಡಬಳ್ಳಾಪುರ ಸುದ್ದಿ

ಗಂಡ ದೂರವಾಗಿದ್ದಕ್ಕೆ ಅಕ್ರೋಶಗೊಂಡ ಪತ್ನಿ ಪಕ್ಕದ್ಮನೆಯ ಮಹಿಳೆಯ ಸೀರೆ ಬಿಚ್ಚಿ, ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಾಕಿದ ಪ್ರಸಂಗ ಬೆಂಗಳೂರಿನ ಹೊರವಲಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

Quarrel between two women in Doddaballapur  Doddaballapur news  Bengaluru crime news  ಪಕ್ಕದ್ಮನೆಯ ಮಹಿಳೆಯ ಸೀರೆ ಬಿಚ್ಚಿ ಮರಕ್ಕೆ ಕಟ್ಟಿ ಹಾಕಿದ ನಾರಿ  ದೊಡ್ಡಬಳ್ಳಾಪುರ ಸುದ್ದಿ  ಬೆಂಗಳೂರು ಅಪರಾಧ ಸುದ್ದಿ
ಪಕ್ಕದ್ಮನೆಯ ಮಹಿಳೆಯ ಸೀರೆ ಬಿಚ್ಚಿ ಮರಕ್ಕೆ ಕಟ್ಟಿ ಹಾಕಿದ ನಾರಿ
author img

By

Published : Mar 8, 2022, 12:54 PM IST

ದೊಡ್ಡಬಳ್ಳಾಪುರ: ಆಸ್ತಿ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ನನ್ನಿಂದ ಗಂಡ ದೂರವಾಗಲು ಪಕ್ಕದ್ಮನೆಯವರೇ ಕಾರಣವೆಂದು ಪತ್ನಿ ಅಕ್ರೋಶಗೊಂಡಿದ್ದಾರೆ. ಹೀಗಾಗಿ ಪಕ್ಕದ್ಮನೆ ಮಹಿಳೆಯ ಸೀರೆ ಬಿಚ್ಚಿ ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಮಲ್ಲೋಹಳ್ಳಿಯಲ್ಲಿ ಫೆಬ್ರವರಿ 28 ರ ಬೆಳಗ್ಗೆ ಈ ಘಟನೆ ನಡೆದಿದೆ. ಮೇಲ್ಜಾತಿ ಸಮುದಾಯಕ್ಕೆ ಸೇರಿದ ಮಹಿಳೆ ಕೆಳ ಸಮುದಾಯಕ್ಕೆ ಸೇರಿದ ಮಹಿಳೆಯ ಸೀರೆ ಬಿಚ್ಚಿ ಅದೇ ಸೀರೆಯಿಂದ ಹುಣಸೆ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ಸೀರೆ ಬಿಚ್ಚಿ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ವಾರವಾಗಿದೆ. ಆದರೆ ದೂರು ನೀಡಿ ವಾರ ಕಳೆದ್ರೂ ಪ್ರಕರಣ ದಾಖಲು ಮಾಡಿಲ್ಲ ಮತ್ತು ತನಿಖೆ ಕೈಗೊಂಡಿಲ್ಲ ಎಂದು ಹಲ್ಲೆಗೊಳಗಾದ ಕುಟುಂಬಸ್ಥರು ಆರೋಪಿಸಿದ್ದಾರೆ.

ಓದಿ: ಉಕ್ರೇನಿಂದ ಮರಳಿದ ಚಿತ್ರದುರ್ಗದ ಇಬ್ಬರು ವಿದ್ಯಾರ್ಥಿಗಳು

ಮಲ್ಲೋಹಳ್ಳಿಯ ನಿವಾಸಿ ಮುನಿರಾಜುವಿಗೆ ಇಬ್ಬರು ಪತ್ನಿಯರು. ಎರಡನೇ ಹೆಂಡತಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮುನಿರಾಜು ಮನೆಯಲ್ಲಿ ಜಗಳವಾಗಿದೆ. ಈ ವೇಳೆ, ಮುನಿರಾಜು ತನ್ನ ಮೊದಲ ಹೆಂಡ್ತಿಯನ್ನು ಬಿಟ್ಟು ದೂರವಾಗಿದ್ದಾರೆ.

ನನ್ನಿಂದ ಗಂಡ ದೂರವಾಗಲು ಪಕ್ಕದ್ಮನೆಯ ದಂಪತಿ ಕಾರಣರೆಂದು ಮುನಿರಾಜು ಮೊದಲ ಪತ್ನಿ ತಿಳಿದಿದ್ದಾರೆ. ಹೀಗಾಗಿ ಪಕ್ಕದ ಮನೆಯ ಮಹಿಳೆಯ ಸೀರೆ ಬಿಚ್ಚಿ ಅದೇ ಸೀರೆಯಿಂದ ಗ್ರಾಮದ ಮಧ್ಯಭಾಗದಲ್ಲಿ ಹುಣಸೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಘಟನೆ ಬಗ್ಗೆ ಪೊಲೀಸ್​ ತನಿಖೆ ಮೂಲಕವೇ ನಿಜಾಂಶ ಹೊರ ಬೀಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.