ETV Bharat / city

ಸಾವಿನಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್: ಇಬ್ಬರ ಬಾಳಿಗೆ ಬೆಳಕಾದ ದೊಡ್ಮನೆ ಹುಡ್ಗ - ಬೆಂಗಳೂರು

ಪವರ್​​ ಸ್ಟಾರ್​​ ಪುನೀತ್ ರಾಜ್‍ಕುಮಾರ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ನಾರಾಯಣ ನೇತ್ರಾಲಯದ ವೈದ್ಯರು ಪುನೀತ್ ಅವರ ಕಣ್ಣುಗಳನ್ನ ಇಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ‌.

ಪುನೀತ್ ರಾಜ್‍ಕುಮಾರ್
ಪುನೀತ್ ರಾಜ್‍ಕುಮಾರ್
author img

By

Published : Oct 31, 2021, 1:45 PM IST

ಬೆಂಗಳೂರು: ಜೀವನದುದ್ದಕ್ಕೂ ಸಮಾಜ ಸೇವೆ ಜತೆಗೆ ಅದ್ಭುತ ನಟನೆಯ ಮೂಲಕ ಎಲ್ಲರ ಮನ ಗೆದ್ದಿದ್ದ ಕರುನಾಡಿನ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​ ಮಣ್ಣಾಗುವ ಮೊದಲೇ ಇಬ್ಬರ ಬಾಳಿಗೆ ಬೆಳಕಿಗಾಗಿದ್ದಾರೆ.

ಹೃದಯಘಾತದಿಂದ ಶುಕ್ರವಾರ ವಿಕ್ರಂ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಕೂಡಲೇ ಆ ನೋವಿನಲ್ಲಿಯೂ ಕುಟುಂಬ ಸದಸ್ಯರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಂದೆಗೆ ತಕ್ಕ ಮಗನಾಗಿರುವ ಅಪ್ಪು, ತಂದೆ ತೋರಿದ ದಾರಿಯಲ್ಲೇ ತಮ್ಮ ಎರಡು ಕಣ್ಣುಗಳನ್ನ ದಾನ ಮಾಡಿದ್ದಾರೆ.

ನಾರಾಯಣ ನೇತ್ರಾಲಯದಲ್ಲಿ ಪುನೀತ್ ರಾಜ್​​ಕುಮಾರ್​​ ಅವರ ಕಣ್ಣುಗಳನ್ನು ನಿನ್ನೆ (ಶನಿವಾರ) ಒಬ್ಬರಿಗೆ ಹಾಗು ಇಂದು ಇನ್ನೊಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ‌. ಈ ಮೂಲಕ ಕತ್ತಲೆಯಲ್ಲಿದ್ದ ಇಬ್ಬರ ಬಾಳಲ್ಲಿ ಬೆಳಕಾಗಿದ್ದಾರೆ.‌ ನಾರಾಯಣ ನೇತ್ರಾಲಯದ ವೈದ್ಯರು ಶಸ್ತ್ರಚಿಕಿತ್ಸೆ ಸಂಬಂಧ ಮಾಧ್ಯಮಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸ್ಟಾರ್​... ಅಪ್ಪನ ಹಾದಿ ಹಿಡಿದ ಅಪ್ಪು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.