ETV Bharat / city

ಪುನೀತ್ 11ನೇ ದಿನದ ಪುಣ್ಯಸ್ಮರಣೆ: ಸಿನಿತಾರೆಯರು, ರಾಜಕಾರಣಿಗಳು ಭಾಗಿ - ಅನ್ನ ಸಂತರ್ಪಣೆ

ಇಂದು ನಟ ಪುನೀತ್ ರಾಜಕುಮಾರ್ ಅವರ ಹನ್ನೊಂದನೇ ದಿನದ ಕಾರ್ಯವನ್ನು ಮಾಡಲಾಯಿತು. ಈ ವೇಳೆ ನಟರು, ರಾಜಕಾರಣಿಗಳು ಭಾಗಿಯಾಗಿದ್ದರು.

puneeth-rajkumar-11th-day-punya-smarane
ಪುನೀತ್ 11ನೇ ದಿನದ ಪುಣ್ಯಸ್ಮರಣೆ
author img

By

Published : Nov 8, 2021, 6:24 PM IST

ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿ ಇಂದಿಗೆ ಹನ್ನೊಂದು ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಅಪ್ಪು ಪುಣ್ಯಸ್ಮರಣೆ ಕಾರ್ಯವನ್ನು ಅವರ ಸಮಾಧಿ ಬಳಿ ಹಾಗು ಸದಾಶಿವನಗರದ ಪುನೀತ್ ನಿವಾಸದಲ್ಲಿ ಮಾಡಲಾಯಿತು.

ಇಂದು ಬೆಳಗ್ಗೆ 9ಗಂಟೆಗೆ ಸರಿಯಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಆಗಮಿಸಿದ, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಕುಟುಂಬ ಹಾಗೂ ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ, ವಂದಿತಾ ಮತ್ತು ಇಡೀ ರಾಜ್ ಕುಟುಂಬದ ಸಂಬಂಧಿಕರು, ಸದಸ್ಯರು ಸಮಾಧಿಗೆ ಪೂಜೆ ಸಲ್ಲಿಸಿದರು.

ಈ ಕಾರ್ಯ ಮುಗಿದ ನಂತರ ಸದಾಶಿವನಗರದ ಪುನೀತ್ ರಾಜಕುಮಾರ್ ಮನೆಯಲ್ಲಿ 11 ದಿನ ಕಾರ್ಯ ನೆರವೇರಿತು. ಮನೆಯಲ್ಲಿ ಹಲವಾರು ಹೂವುಗಳಿಂದ ಅಪ್ಪು ಫೋಟೋವನ್ನು ಸಿಂಗರಿಸಲಾಗಿತ್ತು. ಪುನೀತ್​ಗೆ ಇಷ್ಟವಾದ ತಿಂಡಿ, ತಿನಿಸುಗಳು, ವಿಭಿನ್ನ ಬಗೆಯ ಹಣ್ಣುಗಳನ್ನಿಟ್ಟು ಪೂಜೆ ಮಾಡಲಾಯಿತು. ಈ ಕಾರ್ಯಕ್ಕೆ ಕುಟುಂಬದವರ ಜೊತೆ ಕೆಲವೇ ಕೆಲವು ಆಪ್ತರಿಗೆ ಮಾತ್ರ ಪ್ರವೇಶ ಇತ್ತು.

ಹಿರಿಯ ನಟಿ ಬಿ.ಸರೋಜಾದೇವಿ, ವಿ.ರವಿಚಂದ್ರನ್, ಉಪೇಂದ್ರ, ಧ್ರುವ ಸರ್ಜಾ, ಸುಮಲತಾ ಅಂಬರೀಷ್, ದರ್ಶನ್, ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ಧನಂಜಯ್, ನಟಿಯರಾದ ಶ್ರುತಿ, ಸುಂದರಾಜ್ ಮಗಳು ಮೇಘನಾ ರಾಜ್, ಅಜಯ್ ರಾವ್, ಗಣೇಶ್, ಹಿರಿಯ ನಟ ದತ್ತಣ್ಣ, ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್, ಚಿತ್ರಾ ಶಣ್ಯೆ, ಹಿರಿಯ ನಿರ್ದೇಶಕ ಭಗವಾನ್, ಹಿರಿಯ ನಟ ದೊಡ್ಡಣ್ಣ, ನಟ ರಂಗಾಯಣ ರಘು, ರವಿಶಂಕರ್ ಗೌಡ, ನಟ ಅವಿನಾಶ್, ಮಾಳವಿಕ ಅವಿನಾಶ್, ರವಿಶಂಕರ್, ಹಾಸ್ಯನಟ ಚಿಕ್ಕಣ್ಣ ಸೇರಿದಂತೆ ಇಡೀ ಚಿತ್ರರಂಗದ ಸ್ನೇಹಿತರು ಭಾಗಿಯಾದರು.

ರಾಜಕೀಯ ಕ್ಷೇತ್ರದ ಗಣ್ಯರಾದ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರಾದ ಆರ್. ಅಶೋಕ್, ಬಿ.ಸಿ. ಪಾಟೀಲ್, ಸಚಿವರಾದ ನಾಗೇಶ್, ಎಂ.ಬಿ.ಪಾಟೀಲ್, ರೋಷನ್ ಬೇಗ್ ಸೇರಿದಂತೆ ಸಾಕಷ್ಟು ರಾಜಕಾರಣಿಗಳು ಸದಾಶಿನಗರದ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿ ಪುನೀತ್ ನಟನೆ ಹಾಗು ಕೆಲಸದ ಬಗ್ಗೆ ಗುಣಗಾನ ಮಾಡಿದರು.

ಸಿಎಂ ಬೊಮ್ಮಾಯಿ ಮಾತನಾಡಿ, ಇಂದು ಬೆಳಗ್ಗೆ ಕಂಠೀರವದಲ್ಲಿರುವ ಅಪ್ಪು ಸಮಾಧಿಗೆ ಪೂಜೆ ಮಾಡಿ ನಂತರ ಇಲ್ಲಿ ಬಂದಿದ್ದೇನೆ. ಕುಟುಂಬದ ಆಹ್ವಾನದ ಮೇರೆಗೆ ನಾನು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದೇನೆ. ನಾಳೆ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಇದೆ. ಅದನ್ನು ಅಚ್ಚುಕಟ್ಟಾಗಿ ಮಾಡಬೇಕೆಂದು ಎಲ್ಲಾ ಸಿದ್ಧತೆ ಮಾಡಿದ್ದಾರೆ. ನಾವು ಕೂಡ ಬೇಕಾದ ಸಿದ್ಧತೆ ಮಾಡಿದ್ದೇವೆ. 16ನೇ ತಾರೀಖಿನಂದು ಫಿಲ್ಮ್ ಚೇಂಬರ್‌ನವರದ್ದು ಕಾರ್ಯಕ್ರಮ ಇದೆ. ಈ ಕಾರ್ಯಕ್ರಮ ಮುಗಿದ ನಂತರ 16ನೇ ತಾರೀಖಿನ ನಂತರ ಕುಟುಂಬದವರ ಜೊತೆ ಮಾತನಾಡಿ, ಏನೇನು ಕಾರ್ಯಕ್ರಮ ಮಾಡ್ಬೇಕು ಎಂದು ನೋಡ್ತೀವಿ ಎಂದು ಹೇಳಿದರು.

ಪುನೀತ್​ ಆಸೆಯಂತೆ ಅಭಿಮಾನಿಗಳಿಗೆ ಅನ್ನದಾನ:

ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿ ಬಳಿ, ಪ್ರತಿದಿನ ಅಪಾರ ಸಂಖ್ಯೆಯ ಅಭಿಮಾನಿಗಳು ಬರುತ್ತಿದ್ದಾರೆ. ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಂತು ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಆಸೆಯಂತೆ ನಾಳೆ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನದಾನ ಮಾಡಲಾಗುತ್ತಿದೆ. ಪುನೀತ್​ ಆಪ್ತರು ಹೇಳುವ ಹಾಗೆ, ಅಭಿಮಾನಿಗಳಿಗೆ ಒಂದು ದಿನ ಊಟ ಹಾಕಿಸಬೇಕು ಅಂತ ಪತ್ನಿ ಅಶ್ವಿನಿ ಹತ್ತಿರ ಹಾಗು ಸ್ನೇಹಿತರ ಹತ್ತಿರ ಅಪ್ಪು ಹೇಳಿಕೊಂಡಿದ್ರಂತೆ. ಅದರಂತೆ ಅಶ್ವಿನಿ ಅವರು, ನಾಳೆ ನಡೆಯಲಿರುವ ಅಭಿಮಾನಿಗಳ ಅನ್ನದಾನದ ಸಂಪೂರ್ಣ ಹೊಣೆ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.

ನಾಳೆ ಬೆಳಗ್ಗೆ 11 ಗಂಟೆಯಿಂದ ಅರಮನೆ ಮೈದಾನದಲ್ಲಿ 25 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.