ETV Bharat / city

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ.. ಶುಲ್ಕ ಪಾವತಿಸಲು ದಿನಾಂಕ ವಿಸ್ತರಣೆ ಮಾಡಿದ ಪಿಯು ಬೋರ್ಡ್..‌

ಅಭ್ಯರ್ಥಿಗಳು ಜನವರಿ 21 ರಿಂದ 31ರವರೆಗೆ ಕಾಲೇಜಿಗೆ ಶುಲ್ಕ ಪಾವತಿಸಬಹುದು. ಕಾಲೇಜಿನವರು ಶುಲ್ಕವನ್ನು ಖಜಾನೆಗೆ ಸಂದಾಯ ಮಾಡಲು ಹಾಗೂ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ಫೆಬ್ರವರಿ 2ರಂದು ಕಡೇ ದಿನವಾಗಿದೆ..

PU Board has expanded the exam fee submission date
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ- ಶುಲ್ಕ ಪಾವತಿಸಲು ದಿನಾಂಕ ವಿಸ್ತರಣೆ ಮಾಡಿದ ಪಿಯು ಬೋರ್ಡ್
author img

By

Published : Jan 21, 2022, 6:47 PM IST

Updated : Jan 21, 2022, 6:57 PM IST

ಬೆಂಗಳೂರು : 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಪರೀಕ್ಷೆಗೆ ಶುಲ್ಕ ಪಾವತಿಸಲು ಇರುವ ದಿನಾಂಕವನ್ನು ವಿಸ್ತರಣೆ ಮಾಡಿ ಪಿಯು ಬೋರ್ಡ್ ಆದೇಶಿಸಿದೆ‌.

ಈ ಹಿಂದೆ ಜನವರಿ 17ರವರೆಗೆ 700 ರೂಪಾಯಿ ದಂಡದೊಂದಿಗೆ ಶುಲ್ಕ ಕಟ್ಟಲು ಅವಕಾಶವಿತ್ತು. ಆದರೆ, ಪೋಷಕರು ಹಾಗೂ ವಿದ್ಯಾರ್ಥಿಗಳ ಮನವಿ ಮೇರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಈ ತಿಂಗಳ ಅಂತ್ಯದವರೆಗೆ ಶುಲ್ಕ ಪಾವತಿಸಬಹುದಾಗಿದೆ.‌

ಇದನ್ನೂ ಓದಿ: ಬೆಂಗಳೂರು ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ

ಅಭ್ಯರ್ಥಿಗಳು ಜನವರಿ 21 ರಿಂದ 31ರವರೆಗೆ ಕಾಲೇಜಿಗೆ ಶುಲ್ಕ ಪಾವತಿಸಬಹುದು. ಕಾಲೇಜಿನವರು ಶುಲ್ಕವನ್ನು ಖಜಾನೆಗೆ ಸಂದಾಯ ಮಾಡಲು ಹಾಗೂ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ಫೆಬ್ರವರಿ 2ರಂದು ಕಡೇ ದಿನವಾಗಿದೆ. ಇನ್ನು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಕಚೇರಿಗೆ ಅರ್ಜಿಗಳನ್ನು ಫೆಬ್ರವರಿ 4ರಂದು ಸಲ್ಲಿಸಬೇಕು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 21, 2022, 6:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.