ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ(ಪಿಎ) ರಾಜಣ್ಣನನ್ನು ಬಂಧಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ನಗರದ ಅಪರಾಧ ಪತ್ತೆ ವಿಭಾಗ(ಎಸಿಬಿ)ದ ಕಚೇರಿಗೆ ಮುತ್ತಿಗೆ ಯತ್ನ ನಡೆಯಿತು.
ಶ್ರೀರಾಮುಲು ಪಿಎ ರಾಜಣ್ಣನನ್ನು ಬಂಧಿಸಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಚಾಮರಾಜಪೇಟೆಯ ಸಿಸಿಬಿ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದರು.
ಆಪ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಕೆಎಸ್ಆರ್ ಬಸ್ನಲ್ಲಿ ಸ್ಥಳದಿಂದ ಕರೆದೊಯ್ದರು.
ಇದನ್ನೂ ಓದಿ: ಶ್ರೀರಾಮಲು ಪಿಎ ವಂಚನೆ ಆರೋಪ ಪ್ರಕರಣ : ಒಂದೇ ದಿನಕ್ಕೆ ವಿಚಾರಣೆ ಮುಗಿಸಿ ಬಿಟ್ಟು ಕಳುಹಿಸಿದ ಸಿಸಿಬಿ