ಬೆಂಗಳೂರು: ಕೆ.ಆರ್.ಪುರದ ಕಾರ್ಮಿಕರ ಭವಿಷ್ಯ ನಿಧಿ ಅಧಿಕಾರಿಗಳು ಬುಧವಾರ ಪ್ರಾದೇಶಿಕ ಕಾರ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಾರ್ಮಿಕರ ಭವಿಷ್ಯ ನಿಧಿ ನೌಕರರ ಶ್ರೇಣಿ ಪುನಾರಚನೆಯಲ್ಲಿ ಅನುಸರಿಸುತ್ತಿರುವ ಪಕ್ಷಪಾತ ಧೋರಣೆಯನ್ನು ವಿರೋಧಿಸಿ ಹಾಗೂ ನ್ಯಾಯಯುತ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕೆ.ಆರ್.ಪುರದ ಕಾರ್ಮಿಕರ ಭವಿಷ್ಯ ನಿಧಿ ಅಧಿಕಾರಿಗಳು ಪ್ರತಿಭಟನೆ ನಡೆಸಿದರು.
ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯು ಶ್ರೇಣಿ ಪುನರ್ ರಚನೆ ಈಗಾಗಲೇ ಕೈಗೊಂಡಿದ್ದು, ಸದರಿ ಪುನರ್ ರಚನೆಯಲ್ಲಿ ಕೇವಲ ಗ್ರೂಪ್-ಎ ಅಧಿಕಾರಿಗಳ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿ ಮಾಡಿದೆ. ಗ್ರೂಪ್-ಎ ಅಧಿಕಾರಿಗಳ ಅಧಿಕ ವೇತನ ಹಣ ಹೆಚ್ಚಳದ ಫಲವಾಗಿ ಸಾರ್ವಜನಿಕ ಹಣ ಹೊರ ಹರಿವು ಜಾಸ್ತಿಯಾಗಿದೆ. ಗ್ರೂಪ್ -ಬಿ, ಸಿ ಮತ್ತು ಡಿ ಸಿಬ್ಬಂದಿಯ ಮಂಜೂರಾತಿ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ ಕೆಳಹಂತದ ಶ್ರೇಣಿಗಳ ಕೆಲಸದ ಹೊರೆಯು ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ಕೆಳಹಂತದ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಭವಿಷ್ಯ ನಿಧಿ ನೌಕರರು ತಿಳಿಸಿದರು.