ETV Bharat / city

ನಾನಲ್ಲ, ನೀವು ನಿಜವಾದ ಹೀರೋ: ಖಾಕಿಗೆ ಸೆಲ್ಯೂಟ್​ ಹೊಡೆದ 'ಪವರ್​ ಸ್ಟಾರ್​' - ಬೆಂಗಳೂರು ಪೊಲೀಸ್ ಪ್ರಾಪರ್ಟಿ ಪರೇಡ್​

ಈಶಾನ್ಯ ವಿಭಾಗದ ಪೊಲೀಸರಿಂದ ಆಯೋಜಿಸಲಾಗಿದ್ದ ಪ್ರಾಪರ್ಟಿ ಪೆರೇಡ್​ನಲ್ಲಿ ಭಾಗವಹಿಸಿದ್ದ ನಟ ಪುನೀತ್ ರಾಜ್ ಕುಮಾರ್, ನೀವು ನಿಜಾವಾದ ಹೀರೊ, ನಾವು ಬರೀ ಸಿನಿಮಾ ಹೀರೊ.ನಮ್ಮ ಸುರಕ್ಷತೆಗೆ ನೀವೇ ಕಾರಣ ಅಂತ ಪೊಲೀಸ್ ಇಲಾಖೆಯನ್ನು ಪ್ರಶಂಶಿಸಿದರು.

property-parade-by-northeast-division-police
ಈಶಾನ್ಯ ವಿಭಾಗದ ಪೊಲೀಸ್
author img

By

Published : Feb 20, 2020, 3:08 PM IST

ಬೆಂಗಳೂರು : ನೀವು ನಿಜಾವದ ಹೀರೊ, ನಾವು ಬರೀ ಸಿನಿಮಾ ಹೀರೊ. ನಮ್ಮ ಸುರಕ್ಷತೆಗೆ ನೀವೇ ಕಾರಣ ಅಂತ ಪೊಲೀಸ್ ಇಲಾಖೆಯನ್ನು ನಟ ಪುನೀತ್ ರಾಜ್​ಕುಮಾರ್ ಹೊಗಳಿದರು.

ನಗರದ ಮಾನ್ಯತಾ ಟೆಕ್​ ಪಾರ್ಕ್​ ಬಳಿಯ ಮ್ಯಾನ್ಪೋ ಕನ್ವೆನ್ಶನ್‌ ಹಾಲ್​ ಬಳಿ ಈಶಾನ್ಯ ವಿಭಾಗದ ಪೊಲೀಸರಿಂದ ಪ್ರಾಪರ್ಟಿ ಪೆರೇಡ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಟ ಪುನೀತ್ ರಾಜ್ ಕುಮಾರ್, ಡಿಸಿಪಿ ಭೀಮಾ ಶಂಕರ್ ಗುಳೇದ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಪೆರೇಡ್‌ನಲ್ಲಿ ‌ಪೊಲೀಸ್ ಇಲಾಖೆಯಿಂದ ಅತ್ಯುತ್ತಮ ಸಾಧನೆ ಮಾಡಿದ ಪೊಲೀಸರಿಗೆ 'ಕಾಪ್ ಆಫ್ ದಿ ಮಂತ್' ಪ್ರಶಸ್ತಿ ವಿತರಣೆ ಮಾಡಲಾಯ್ತು‌.

ಈಶಾನ್ಯ ವಿಭಾಗದ ಪೊಲೀಸ್ ಪ್ರಾಪರ್ಟಿ ಪೆರೇಡ್

ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಮಾತನಾಡಿ, ನೀವು ನಿಜವಾದ ಹೀರೋ, ನಾವು ಸಿನಿಮಾ ಹೀರೊ. ಪೊಲೀಸ್ ಅಧಿಕಾರಿಗಳು ದಿನನಿತ್ಯ ಒತ್ತಡದಲ್ಲಿ ಕೆಲಸ ಮಾಡ್ತಾರೆ, ನಮ್ಮ ಸುರಕ್ಷತೆಗೆ ನೀವೇ ಕಾರಣ, ನಾನು ಸಿನಿಮಾದಲ್ಲಿ ಆಕ್ಟ್ ಮಾಡಿದ್ದೇನೆ ಅಷ್ಟೇ ಎಂದು ಪೊಲೀಸ್​ ಇಲಾಖೆಯ ಕಾರ್ಯವನ್ನು ಪ್ರಶಂಸಿಸಿದರು.

ಯೋಗ ಮಾಡಿ ತಂಬಾ ಕಾಮ್ ಆಗಿರಿ. ಹಾಗೆಯೇ ನಮ್ಮದು ಮತ್ತು ಪೊಲೀಸ್ ಅಧಿಕಾರಿಗಳದ್ದು ಹಳೇ ಸಂಬಂಧ. ತಂದೆಯವ್ರು ಹೇಳ್ತಿದ್ರು ಕಾರ್ಯಕ್ರಮ ಮುಗಿದ ಮೇಲೆ ಎಲ್ಲರಿಗೂ ವಂದನೆ ಹೇಳುತ್ತೇವೆ. ಆದ್ರೆ ಪೊಲೀಸರನ್ನ ಮರೆಯುತ್ತೇವೆ ಅಂತ. ಆದ್ರೆ ಈಗ ಎಲ್ಲರಿಗೂ ಧನ್ಯವಾದ ಹೇಳ್ತಿದ್ದೇನೆ. ವಾರಸುದಾರರಿಗೆ ವಸ್ತುಗಳನ್ನು ಹಿಂತಿರುಗಿಸಲು ನನ್ನನ್ನು ಅಧಿಕಾರಿಗಳು ಕರೆದಿದ್ರು, ಅದ್ಕೆ ಬಂದಿದ್ದೇನೆ ಧನ್ಯವಾದ ಪೊಲಿಸ್ ಇಲಾಖೆ ಎಂದು ಖುಷಿ ಹಂಚಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.