ETV Bharat / city

ಕೊರೊನಾ‌ ಸಂಕಷ್ಟದ ನಡುವೆಯೂ ಶಾಲಾ ಶುಲ್ಕ ಕಟ್ಟುವಂತೆ ಒತ್ತಡ ಆರೋಪ: ಪೋಷಕರಲ್ಲಿ ಆತಂಕ

ಕೊರೊನಾ‌ ಸಂಕಷ್ಟದ ನಡುವೆಯೂ ಶಾಲಾ ಶುಲ್ಕ ಕಟ್ಟುವಂತೆ ಶಾಲಾ ಆಡಳಿತ ಮಂಡಳಿ ಪೋಷಕರಲ್ಲಿ ಒತ್ತಡ ಹೇರುತ್ತಿದೆ ಆರೋಪ ಕೇಳಿಬಂದಿದೆ. ಈಗಾಗಲೇ ಕೋವಿಡ್​​​-19 ಭೀತಿಯಿಂದ ಆತಂಕಗೊಂಡಿರುವ ಜನರು ಸದ್ಯ ಶಾಲೆಯ ಶುಲ್ಕವನ್ನು ಕಟ್ಟುವಂತೆ ಕಳುಹಿಸುತ್ತಿರುವ ಸಂದೇಶದಿಂದ ಆತಂಕಗೊಂಡಿದ್ದಾರೆ.

author img

By

Published : Mar 27, 2020, 9:33 PM IST

pressure-to-pay-school-fees-in-spite-of-corona-hardship
ಶಾಲಾ ಶುಲ್ಕ ಕಟ್ಟುವಂತೆ ಒತ್ತಡ

ಬೆಂಗಳೂರು: ಕೊರೊನಾ ಭೀತಿ ಇನ್ನು ಕಡಿಮೆ ಆಗುತ್ತಿಲ್ಲ. ‌ಈಗಾಗಲೇ ಭಾರತ ಲಾಕ್ ಡೌನ್ ಆಗಿದೆ. ‌ಎಲ್ಲರೂ ಮನೆಯಲ್ಲೇ ಇದ್ದು, ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಆದ್ರೆ ಈ ಚಿಂತೆಯ ನಡುವೆಯೂ ಸ್ಕೂಲ್​ ಫೀಸ್​ ಕಟ್ಟುವಂತೆ ಪೋಷಕರಿಗೆ ಸ್ಕೂಲ್​​ನಿಂದ ಮೆಸ್ಸೇಜ್​​ಗಳು ಬರುತ್ತಿವೆ ಎನ್ನುವ ಆರೋಪಗಳು ಕೇಳಿಬಂದಿವೆ.

Pressure to pay school fees in spite of corona hardship
ಕೊರೋನಾ‌ ಸಂಕಷ್ಟದ ನಡುವೆಯೂ ಶಾಲಾ ಶುಲ್ಕ ಕಟ್ಟುವಂತೆ ಒತ್ತಡ

ಕೆಲಸವಿಲ್ಲ, ಜೊತೆಗೆ ಆರ್ಥಿಕ‌ ಹೊಡೆತದ ನಡುವೆ ಹೀಗೆ ಶುಲ್ಕ ಕಟ್ಟಲು ಕೊನೆ ದಿನಾಂಕವೆಂದು ಸಂದೇಶ ರವಾನಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಚಿಂತೆ ಪೋಷಕರನ್ನು‌ ಕಾಡುತ್ತಿದೆ. ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಏಪ್ರಿಲ್ 20 ರವರೆಗೆ ದಾಖಲಾತಿ ಪ್ರಕ್ರಿಯೆ ಮುಂದೂಡುವಂತೆ ಸೂಚಿಸಿದೆ. ಇದರ ನಡುವೆಯೂ, ಖಾಸಗಿ ಶಾಲೆಗಳು ಸರಣಿ ಸಂದೇಶ ಹಾಕುವ ಮೂಲಕ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

‌ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಸುರೇಶ್ ಕುಮಾರ್, ಕೊರೊನಾ ಬಿಕ್ಕಟ್ಟು ಮುಗಿಯುವವರೆಗೂ ಯಾವುದೇ ಶಾಲೆ ಪ್ರವೇಶ ಪ್ರಕ್ರಿಯೆ ನಡೆಸಬಾರದು ಎಂದು ಸೂಚನೆ ಹೊರಡಿಸಿದ್ದೇವೆ. ಈ ಕುರಿತು ವಿಚಾರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಸಾಮಾಜಿಕ ಬಿಕ್ಕಟ್ಟಿನ ನಡುವೆ ಪೋಷಕರಿಗೆ ಅನಗತ್ಯವಾಗಿ ಕಿರುಕುಳ ನೀಡದಂತೆ ಕ್ರಮವಹಿಸುತ್ತೇನೆ. ಅಲ್ಲದೆ ಶಾಲಾ ಆಡಳಿತ ಮಂಡಳಿಯು ಸರ್ಕಾರದ ಕಾಳಜಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಆಶಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊರೋನಾ‌ ಸಂಕಷ್ಟದ ನಡುವೆಯೂ ಶಾಲಾ ಶುಲ್ಕ ಕಟ್ಟುವಂತೆ ಒತ್ತಡ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.