ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಬ್ಯಾಲೆಟ್ ಬಾಕ್ಸ್ ಅನ್ನು ಬೆಂಗಳೂರಿಂದ ವಿಮಾನದ ಮೂಲಕ ದಿಲ್ಲಿಗೆ ರವಾನಿಸಲಾಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 9:20 ರ ವಿಮಾನದಲ್ಲಿ ದೆಹಲಿಗೆ ಬ್ಯಾಲೆಟ್ ಬಾಕ್ಸ್ ಕಳುಹಿಸಲಾಗಿದೆ. ಜುಲೈ 21 ರಂದು ದಿಲ್ಲಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
ಭದ್ರತೆಯೊಂದಿಗೆ ಬ್ಯಾಲೆಟ್ ಬಾಕ್ಸ್ಅನ್ನು ವಿಧಾನಸೌಧದಿಂದ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಯಿತು. ಈ ವೇಳೆ, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಉಪಸ್ಥಿತರಿದ್ದರು. ಬ್ಯಾಲೆಟ್ ಬಾಕ್ಸ್ ಅನ್ನು ವಿಮಾನದ ಪ್ರಯಾಣಿಕ ಆಸನದಲ್ಲಿ ಇರಿಸಲಾಗಿದೆ. ಅದರ ಜೊತೆಗೆ ಹಿರಿಯ ಚುನಾವಣಾಧಿಕಾರಿ ತೆರಳಿದ್ದಾರೆ.
(ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಮತದಾನ ಮುಕ್ತಾಯ: ವೀಲ್ ಚೇರ್ನಲ್ಲಿ ಆಗಮಿಸಿದ ಮಾಜಿ ಪ್ರಧಾನಿ ಹೆಚ್ಡಿಡಿ)