ETV Bharat / city

ನಾಳೆ ಪುನೀತ್ ರಾಜ್‍ಕುಮಾರ್ 11ನೇ ದಿನದ ಪುಣ್ಯತಿಥಿ: ಕುಟುಂಬಸ್ಥರಿಂದ ಸಕಲ ಸಿದ್ಧತೆ - ಪುನೀತ್ ರಾಜ್‍ಕುಮಾರ್ 11ನೇ ದಿನ

ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 10 ದಿನವಾಗಿದ್ದು, ನಾಳೆ 11 ನೇ ದಿನದ ಪುಣ್ಯತಿಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪುನೀತ್ ರಾಜ್‍ಕುಮಾರ್
ಪುನೀತ್ ರಾಜ್‍ಕುಮಾರ್
author img

By

Published : Nov 7, 2021, 1:31 PM IST

ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ನಾಳೆಗೆ 11 ನೇ ದಿನ ಆಗಲಿದ್ದು, ಪುಣ್ಯ ತಿಥಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಕುಟುಂಬಸ್ಥರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸದಾಶಿವನಗರದಲ್ಲಿರುವ ಮನೆಯಲ್ಲೇ ತಿಥಿ ಕಾರ್ಯ ನಡೆಯಲಿದೆ. ಚಿಕ್ಕಪ್ಪನ ಪುಣ್ಯ ತಿಥಿ ಕಾರ್ಯ ನೆರವೇರಿಸುವ ಮೂಲಕ ವಿನಯ್ ರಾಜ್ ಕುಮಾರ್ ಕೇಶಮುಂಡನ ಮಾಡಿಸಿಕೊಂಡು ಅಗಲಿದ ಅಪ್ಪುಗೆ ಪಿಂಡ ಪ್ರದಾನ ಮಾಡಲಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆ ನಂತರ ಪುಣ್ಯತಿಥಿ ಕಾರ್ಯ ಜರುಗಲಿದ್ದು ಕುಟುಂಬಸ್ಥರು, ಹತ್ತಿರದ ಸಂಬಂಧಿಗಳು, ಚಿತ್ರರಂಗದ ಪ್ರಮುಖರು, ರಾಜಕೀಯ ಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ. ನಂತರ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.

11 ನೇ ದಿನದ ಪುಣ್ಯತಿಥಿಗೆ ಇಂದು ಬೆಳಗ್ಗೆಯಿಂದಲೇ ಸಿದ್ಧತಾ ಕಾರ್ಯ ನಡೆಯುತ್ತಿದ್ದು, ಪುನೀತ್ ಮನೆಗೆ ಇಂದು ಬೆಳಗ್ಗೆ ಶಿವಣ್ಣ ಹಾಗೂ ಪತ್ನಿ ಗೀತಾ ಬಂದಿದ್ದಾರೆ. ಮನೆ ಮುಂದೆ ಶಾಮಿಯಾನ ಹಾಕಲಾಗಿದೆ. ಜೊತೆಗೆ ಮಂಗಳವಾರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಸಲು ಏರ್ಪಾಡು ಮಾಡಲಾಗಿದೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.