ಬೆಂಗಳೂರು: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಇಂದು ನಗರದ ಖಾಸಗಿ ಹೋಟೆಲ್‌ಗೆ ಬಂದಿದ್ದು, ಕರ್ನಾಟಕದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಕಟ್ಟುವುದಕ್ಕಾಗಿ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
Prashant Kishor: ಟಿಎಂಸಿ ವರಿಷ್ಠರು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೂಚನೆ ಮೇರೆಗೆ ಪಿಕೆ ನಗರದ ಖಾಸಗಿ ಹೋಟೆಲ್‌ಗೆ ಆಗಮಿಸಿದ್ದು, ರಾಜ್ಯದಲ್ಲಿ ಮೂರು ಪಕ್ಷಗಳ ಪೈಕಿ ತಟಸ್ಥ ನಾಯಕರು ಯಾರಿದ್ದಾರೆ? ಜನಪ್ರಿಯ ನಾಯಕರು ಯಾರಿದ್ದಾರೆ? ಎಂದು ಚರ್ಚೆ ನಡೆಸುತ್ತಿದ್ದಾರೆ.
ಜಾತಿವಾರು ನಾಯಕರ ಪ್ರಾಬಲ್ಯ ಯಾರಲ್ಲಿದೆ ಹಾಗೂ ಜನಪ್ರಿಯತೆ ಯಾರಲ್ಲಿದೆ? ರಾಜಕೀಯವಾಗಿ, ಅನೇಕ ಕಾರಣಗಳಿಂದ ತಟಸ್ಥ ನಾಯಕರು ಯಾರು? ವಿವಿಧ ಧಾರ್ಮಿಕ ಮುಖಂಡರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರುಗಳನ್ನು ಭೇಟಿಯಾಗಿ ಮಾತುಕತೆ ನಡೆಸುವ ಬಗ್ಗೆ ಹಾಗೂ ಟಿಎಂಸಿ ಯತ್ತ ಸೆಳೆಯುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮೇಘಾಲಯ: ಮಾಜಿ ಸಿಎಂ ಸೇರಿದಂತೆ ರಾತ್ರೋರಾತ್ರಿ ತೃಣಮೂಲ ಪಕ್ಷಕ್ಕೆ ಸೇರಿದ 12 ಕಾಂಗ್ರೆಸ್ ಶಾಸಕರು