ಬೆಂಗಳೂರು : ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಆರೋಪಿ ನಾಗೇಶ್ ಬಂಧನದ ಬಳಿಕ ಪೊಲೀಸರಿಗೆ ಹೊಸ ಸವಾಲು ಎದುರಾಗಿದೆ. ಪ್ರಕರಣದ ಕುರಿತು ಸಾಕ್ಷ್ಯ ಕಲೆ ಹಾಕಲು ಕಾಮಾಕ್ಷಿಪಾಳ್ಯ ಪೊಲೀಸರು ಆರಂಭಿಸಿದ್ದು, ಆ್ಯಸಿಡ್ ದಾಳಿ ವೇಳೆ ಆರೋಪಿ ಬಳಸಿದ ವಸ್ತುಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ.
ದಾಳಿಗೆ ಬಳಸಲಾಗಿದ್ದ ಆ್ಯಸಿಡ್ ಬಾಟಲ್ ಮೇಲಿದ್ದ ಬೆರಳಚ್ಚು ಸಿಗದಂತೆ ಆರೋಪಿ ಗ್ಲೌಸ್ ಹಾಕಿಕೊಂಡಿದ್ದನು. ಘಟನಾ ಸ್ಥಳದಲ್ಲಿ ಸಿಕ್ಕ ಬಾಟಲ್, ಗ್ಲೌಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಗ್ಲೌಸ್ನ ಒಳ ಭಾಗದಲ್ಲಿರುವ ಆರೋಪಿಯ ಬೆರಳಚ್ಚು ಕಲೆ ಹಾಕಲು ಮುಂದಾಗಿದ್ದಾರೆ.
ಇದಲ್ಲದೇ ಆರೋಪಿ ಕೃತ್ಯದ ಸಂದರ್ಭದಲ್ಲಿ ಮೊಬೈಲ್ ಫೋನ್ ಜೊತೆಯಲ್ಲಿ ಇಟ್ಟುಕೊಂಡಿದ್ದರಿಂದ ಟವರ್ ಲೊಕೇಷನ್ ಮತ್ತು ಸಿಸಿಟಿವಿ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಆರೋಪಿ ಆ್ಯಸಿಡ್ ಅನ್ನು ಇ-ಮೇಲ್ ಮುಖಾಂತರ ದಾಖಲಾತಿ ಕೊಟ್ಟು ಖರೀದಿ ಮಾಡಿರುವ ಹಿನ್ನೆಲೆ ಟೆಕ್ನಿಕಲ್ ಎವಿಡೆನ್ಸ್ ಕಲೆಕ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬಸ್ ಸ್ಟಾಪ್ನಲ್ಲಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು