ಬೆಂಗಳೂರು: ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಲಿದ್ದರೂ ನಿಯಮ ಉಲ್ಲಂಘಿಸಿದವರಿಗೆ ಯಲಹಂಕ ಪೊಲೀಸರು ವಿಭಿನ್ನವಾಗಿ ಎಚ್ಚರಿಕೆ ನೀಡಿದ್ದಾರೆ.
ನಿಯಮ ಉಲ್ಲಂಘಿಸಿದವರನ್ನು ನಡುರಸ್ತೆಯಲ್ಲೇ ಸಾಮಾಜಿಕ ಅಂತರದಲ್ಲಿ ಕೂರಿಸಿ ಪೊಲೀಸರು ತಿಳಿ ಹೇಳಿದ್ದಾರೆ. ಇನ್ನು ಸುಖಾ ಸುಮ್ಮನೆ ಓಡಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸಿ, 100ಕ್ಕೂ ಹೆಚ್ಚು ವಾಹನಗಳನ್ನ ಸೀಜ್ ಮಾಡಿದ್ದಾರೆ.
ನಡುರಸ್ತೆಯಲ್ಲೇ ಜನರನ್ನು ಕೂರಿಸಿ ಎಚ್ಚರಿಕೆ ನೀಡುವ ಜೊತೆಗೆ ಅವರಿಗೆ ಗೈಡ್ ಲೈನ್ಸ್ನ ಒಂದು ಕಾಪಿ ನೀಡಿ, ನೀವೂ ಓದಿ, ಮನೆಯವರಿಗೂ ತಿಳಿಸಿ ಎನ್ನುವ ಸಲಹೆಯನ್ನು ಕೂಡ ನೀಡಿದ್ದಾರೆ.