ETV Bharat / city

ಯುವತಿ ಮೇಲೆ ಆ್ಯಸಿಡ್ ದಾಳಿ: ಆರೋಪಿಯ ಕುಟುಂಬಸ್ಥರ ವಿಚಾರಣೆ

author img

By

Published : Apr 30, 2022, 5:09 PM IST

ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವತಿಯ ಮೇಲೆ ಆ್ಯಸಿಡ್​ ದಾಳಿ ಮಾಡಿ ತಲೆಮರೆಸಿಕೊಂಡಿರುವ ಆರೋಪಿ ನಾಗೇಶ್​ನ ಕುಟುಂಬಸ್ಥರನ್ನು ಪತ್ತೆ ಮಾಡಿರುವ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

police-investigation
ಯುವತಿ ಮೇಲೆ ಆ್ಯಸಿಡ್ ದಾಳಿ

ಬೆಂಗಳೂರು: ಖಾಸಗಿ ಫೈನಾನ್ಸ್ ಕಂಪನಿ ಉದ್ಯೋಗಿಯಾದ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಯುವಕನ ಶೋಧ ನಡೆಸುತ್ತಿರುವ ಪೊಲೀಸರು ಇಂದು ಆತನ ಪಾಲಕರನ್ನು ಪತ್ತೆ ಮಾಡಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇಲ್ಲಿನ ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ 23 ವರ್ಷದ ಯುವತಿಯ ಮೇಲೆ 2 ದಿನಗಳ ಹಿಂದೆ ನಾಗೇಶ್ ಆ್ಯಸಿಡ್ ದಾಳಿ ನಡೆಸಿದ್ದ. ಘಟನೆ ನಂತರ ತಲೆಮರೆಸಿಕೊಂಡಿರುವ ಆತನ ಪತ್ತೆಗೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಈ ಮಧ್ಯೆಯೇ ಪಾಲಕರಿಗೆ ಕರೆ ಮಾಡಿದ್ದ ನಾಗೇಶ್ ಮನೆಯಿಂದ ಹೊರಟು ಹೋಗುವಂತೆ ತಿಳಿಸಿದ್ದ ಎನ್ನಲಾಗ್ತಿದೆ.

ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿ ನಾಗೇಶ್​ನ ಸಹೋದರ ರಮೇಶ್ ಬಾಬು ಹಾಗೂ ತಂದೆ- ತಾಯಿಯನ್ನು ಬೆಂಗಳೂರಿನ ಮಾಗಡಿಯಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ನಾಗೇಶ್ ನಡವಳಿಕೆ ಹಾಗೂ ಈ ಕೃತ್ಯದ ಹಿಂದಿನ ವಿವರವನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಕುಟುಂಬಸ್ಥರನ್ನು ಅಜ್ಞಾತ ಸ್ಥಳದಲ್ಲಿರಿಸಿರುವ ಪೊಲೀಸರು, ಇವರ ಮೂಲಕ ನಾಗೇಶ್ ಪತ್ತೆಗೆ ಬಲೆ ಬೀಸಿದ್ದಾರೆ.

ಕೃತ್ಯಕ್ಕೂ ನಮಗೂ ಸಂಬಂಧವಿಲ್ಲ: ನಾಗೇಶನ ಕೃತ್ಯದಿಂದ ಭಯಭೀತರಾಗಿ ನಾವೆಲ್ಲಾ ಮನೆ ಬಿಟ್ಟು ಹೋಗಿದ್ದೇವೆಯೇ ಹೊರತು, ಅವನು ಮಾಡಿದ ಕೃತ್ಯಕ್ಕೂ ನಮಗೂ ಯಾವ ಸಂಬಂಧವಿಲ್ಲ. ಆ ಯುವತಿಯ ಹಿಂದೆ ನಾಗೇಶ್ ಬಿದ್ದಿರುವ ವಿಚಾರ ಕೂಡ ನಮಗೆ ತಿಳಿದಿಲ್ಲ. ಈ ಪ್ರಕರಣದಲ್ಲಿ ನಾವೆಲ್ಲಾ ಅಮಾಯಕರು ಎಂದು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಓದಿ: ಜಮೀರ್​ ಅಹ್ಮದ್​ ಹಿಂದು ವಿರೋಧಿ, ಮೊದಲು ಜೈಲಿಗೆ ಹಾಕಿ: ಯತ್ನಾಳ್​ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.