ಬೆಂಗಳೂರು: ಶಾಸಕ ಅರವಿಂದ್ ಬೆಲ್ಲದ್ ಫೋನ್ ಟ್ಯಾಪಿಂಗ್ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಕಬ್ಬನ್ ಪಾರ್ಕ್ ಎಸಿಪಿ ಯತಿರಾಜ್ ನೇತೃತ್ವದ ತಂಡ ಜೈಲಿನಲ್ಲಿರುವ ಯುವರಾಜ್ ಸ್ವಾಮಿಯನ್ನು ವಿಚಾರಣೆಗೊಳಪಡಿಸಿದೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಯುವರಾಜ್ನನ್ನು ಒಂದೂವರೆ ಗಂಟೆಗಳ ಕಾಲ ಈ ತಂಡ ವಿಚಾರಣೆ ನಡೆಸಿದೆ. ಈತ ಬೆಲ್ಲದ್ ಅವರಿಂದ ಸಹಾಯ ಕೇಳಲು ಫೋನ್ ಮಾಡಿರುವ ಸಾಧ್ಯತೆಯಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾಗಲೂ ಹಲವು ಬಾರಿ ಯುವರಾಜ್ ಕರೆ ಮಾಡಿರುವುದು ಗೊತ್ತಾಗಿದೆ.
ಬೆಲ್ಲದ್ ಅಲ್ಲದೆ ಇನ್ನೂ ಹಲವು ರಾಜಕಾರಣಿಗಳಿಗೆ ಯುವರಾಜ್ ಕರೆ ಮಾಡಿರುವ ಎನ್ನಲಾಗುತ್ತಿದೆ. ಎಲ್ಲಾ ಆಯಾಮದಲ್ಲೂ ಎಸಿಪಿ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಫೋನ್ ಕದ್ದಾಲಿಕೆ ಮಾಡಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿರುವ ಅನುಮಾನ ವ್ಯಕ್ತಪಡಿಸಿ ಗೃಹ ಸಚಿವರಿಗೆ ಬೆಲ್ಲದ್ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಪೊಲೀಸ್ ಕಮೀಷನರ್ಗೆ ಸಚಿವರು ಆದೇಶಿಸಿದ್ದರು.
ಇದನ್ನೂ ಓದಿ: ಅರವಿಂದ್ ಬೆಲ್ಲದ್ಗೆ ಜೈಲಿನಿಂದ ಕರೆ ಆರೋಪ: ತನಿಖೆ ಚುರುಕು!