ಬೆಂಗಳೂರು: ರಾಜ್ಯದ ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ಪೊಲೀಸ್ ಇಲಾಖೆ ಧಾವಿಸಿದ್ದು, ಇನ್ಸ್ಪೆಕ್ಟರ್ ಹಂತದ ಎಲ್ಲಾ ಪೊಲೀಸ್ ಅಧಿಕಾರಿಗಳ ಆಗಸ್ಟ್ ತಿಂಗಳ ವೇತನದಲ್ಲಿ ಒಂದು ದಿನದ ಸಂಬಳ ಕಡಿತಗೊಳಿಸುವಂತೆ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಸರ್ಕಾರಕ್ಕೆ ಮನವಿ ಪತ್ರ ಕಳುಹಿಸಿದ್ದಾರೆ.
ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಪ್ರವಾಹದ ವೇಳೆಯೂ ನೆರೆ ಸಂತ್ರಸ್ತರಿಗೆ ಪೊಲೀಸ್ ಇಲಾಖೆ ಸ್ಪಂದಿಸಿ ತಮ್ಮ ಒಂದು ದಿನದ ವೇತನವನ್ನು ದೇಣಿಗೆ ನೀಡಿದ್ದರು.
ಈ ಬಾರಿಯೂ ಮಾನವೀಯತೆ ಮೆರೆದಿರುವ ಪೊಲೀಸರು ಇನ್ಸ್ಪೆಕ್ಟರ್ ಹಂತದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮತಿ ನೀಡಿದ್ದಾರೆ ಎಂದು ಭಾವಿಸಿ ನೀಲಮಣಿ ರಾಜು ಅವರು ಸರ್ಕಾರಕ್ಕೆ ತಮ್ಮ ಒಂದು ದಿನದ ವೇತನ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ.