ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಆರೋಪ ಪ್ರಕರಣದಲ್ಲಿ ಚಿತ್ರನಟಿ ರಾಗಿಣಿ ದ್ವಿವೇದಿ ಹೆಸರು ತಳುಕು ಹಾಕಿಕೊಂಡಿದೆ. ಹೀಗಾಗಿ ತುಪ್ಪದ ಬೆಡಗಿಯ ಬಂಧನವಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಅಲ್ಲದೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮಾಧ್ಯಮಗೋಷ್ಟಿ ನಡೆಸಲಿರುವ ಅವರು ಏನು ಹೇಳುತ್ತಾರೆ ಅನ್ನೋದರ ಮೇಲೆ ರಾಗಿಣಿ ಭವಿಷ್ಯ ನಿಂತಿದೆ.
ನಿನ್ನೆಯಷ್ಟೇ ಸಿಸಿಬಿ ಕಚೇರಿಗೆ ಭೇಟಿ ನೀಡಿದ್ದ ಪೊಲೀಸ್ ಆಯುಕ್ತ ಕಮಲ್ ಪಂತ್ ಸೋಮವಾರ ಬರುತ್ತೇನೆಂದು ಹೇಳಿದ್ದ ರಾಗಿಣಿ ಮೇಲೆ ಕಣ್ಣಿಟ್ಟು ಇಂದು ಸಿಸಿಬಿ ನೇತೃತ್ವದಲ್ಲಿ ಮನೆ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ರಾಗಿಣಿ ಕಿರುಚಾಡಿ ಕೂಡ ನಡೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ರಾಗಿಣಿ ತಮ್ಮ ಮೊಬೈಲ್ನಲ್ಲಿ ಇದ್ದ ಮಾಹಿತಿ ಡಿಲಿಟ್ ಮಾಡಿದ್ದಾರೆ. ಸಿಸಿಬಿ ಕರೆದಾಗ ವಿಚಾರಣೆಗೆ ಹಾಜರಾಗಿಲ್ಲ. ಅವರ ಆಪ್ತ ರವಿಶಂಕರ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಹೀಗಾಗಿ ರಾಗಿಣಿ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಕಾಲ್ ಸಿಡಿಆರ್, ಟೆಕ್ನಿಕಲ್ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗ್ತಿದೆ.
ಈಗಾಗಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಗೃಹ ಸಚಿವರನ್ನ ಭೇಟಿಯಾಗಿದ್ದಾರೆ. ಸದ್ಯದಲ್ಲೇ ರಾಗಿಣಿ ಭವಿಷ್ಯದ ಕುರಿತು ಮಾಹಿತಿ ಹೊರಬೀಳಲಿದೆ.