ETV Bharat / city

ಮೇಲ್ಮನೆಯಲ್ಲಿ ಪೊಲೀಸ್ ತಿದ್ದುಪಡಿ ವಿಧೇಯಕ ಸೇರಿದಂತೆ ಹಲವು ಬಿಲ್ ಪಾಸ್

ಪರಿಷತ್​ನಲ್ಲಿ ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳು ಅಂಗೀಕಾರಗೊಂಡಿವೆ.

police-amendment-bill-passed-in-council
ಮೇಲ್ಮನೆಯಲ್ಲಿ ಪೊಲೀಸ್ ತಿದ್ದುಪಡಿ ವಿಧೇಯಕ ಸೇರಿದಂತೆ ಹಲವು ಬಿಲ್ ಪಾಸ್
author img

By

Published : Sep 24, 2021, 3:02 AM IST

Updated : Sep 24, 2021, 3:35 AM IST

ಬೆಂಗಳೂರು: ತಡರಾತ್ರಿಯವರೆಗೂ ಮುಂದುವರಿದ ವಿಧಾನ ಪರಿಷತ್ ಕಲಾಪದಲ್ಲಿ ವಿವಿಧ ಪ್ರಮುಖ ವಿದೇಯಕಗಳು ಅನುಮೋದನೆಗೊಂಡವು.
ಕರ್ನಾಟಕ ಪಟ್ಟಣ ಹಾಗೂ ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ಸಿವಿಲ್ ಸೇವೆ ತಿದ್ದುಪಡಿ ವಿಧೇಯಕ, ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ ವಿಧೇಯಕ ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ ವಿಧಾನ ಪರಿಷತ್​ನಲ್ಲಿ ಅಂಗೀಕಾರವಾದವು.

ಪೊಲೀಸ್ ತಿದ್ದುಪಡಿ ವಿಧೇಯಕ ಕೂಡ ಅಂಗೀಕಾರವಾಗಿದ್ದು, ಸುದೀರ್ಘ ಚರ್ಚೆಗೆ ಪಾತ್ರವಾಯಿತು. ಪರಿಷತ್ ಬಿಜೆಪಿ ಸದಸ್ಯ ಪುಟ್ಟಣ್ಣ ಮಾತನಾಡಿ, ಆನ್​ಲೈನ್ ಜೂಜು ನಿಯಂತ್ರಣ ವಿಧೇಯಕದಲ್ಲಿ ಕುದುರೆ ರೇಸ್ ಸೇರಿಸಲಿ. ಆದ್ರೆ ಬಾಜಿ ಕಟ್ಟೋದು ಬೇಡ. ಇದ್ರಿಂದ ಸಾಕಷ್ಟು ಕೂಲಿ ಕಾರ್ಮಿಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಇದ್ರ ಜೊತೆಗೆ ಐಪಿಎಲ್ ಸಹ ಬ್ಯಾನ್ ಮಾಡಿ. ಐಪಿಎಲ್​ನಿಂದ ಬಹಳಷ್ಟು ಯುವಕರು ಹಾಳಾಗುತ್ತಿದ್ದಾರೆ. ಒಂದೊಂದು ರನ್​ಗೆ ಹಣ ಕಟ್ಟುತ್ತಿದ್ದಾರೆ. ಇದ್ರಿಂದ ವಿಧೇಯಕದಲ್ಲಿ ಐಪಿಎಲ್ ತಂದು ಬ್ಯಾನ್ ಮಾಡಿ ಎಂದರು.

ನಾನು ಈ ವಿಧೇಯಕಕ್ಕೆ ಬೆಂಬಲ ಸೂಚಿಸುತ್ತೇನೆ ಎಂದ ಲಕ್ಷ್ಮಣ್ ಸವದಿ, ಆದ್ರೆ ನಮ್ಮ ಪೊಲೀಸರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಟ್ಟಿದ್ದೀರಾ? ಪ್ರತಿಯೊಂದು ಗ್ರಾಮದಲ್ಲಿ ಆಡುವ ಜೂಜಾಟದ ಹಿಂದೆ ರಾಜಕಾರಣಿಗಳಿದ್ದಾರೆ. ಜೂಜಾಟದ ಮಾಹಿತಿ ತಿಳಿದು ಪೊಲೀಸರು ಹೋಗ್ತಾರೆ. ಆದ್ರೆ ಅವರನ್ನು ಅರೆಸ್ಟ್ ಮಾಡುವುಷ್ಟರಲ್ಲಿ ರಾಜಕಾರಣಿಗಳು ಕರೆ ಮಾಡ್ತಾರೆ. ನಾನು ಯಾರು ಗೊತ್ತಾ ಅಂತ ಕೇಳ್ತಾರೆ. ಅವ್ರನ್ನ ಬಿಡಲಿಲ್ಲ ಅಂದ್ರೆ ನೀನು ಏನ್ ಆಗ್ತೀಯಾ ಗೊತ್ತಾ ಅಂತ ಕೇಳ್ತಾರೆ. ಪೋಲೀಸರಿಗೆ ಪೂರ್ಣವಾಗಿ ಸ್ವತಂತ್ರ ಕೊಟ್ಟಾಗ ಮಾತ್ರ ಈ ವಿಧೇಯಕಕ್ಕೆ ಸಾರ್ಥಕ ಎಂದರು.

ಪೊಲೀಸ್ ತಿದ್ದುಪಡಿ ವಿದೇಯಕ ವಿಚಾರ ಮಾತನಾಡಿದ ಶ್ರೀನಿವಾಸ್ ಮಾನೆ, ಹಳ್ಳಿಗಳಲ್ಲಿ ಎರಡು, ಮೂರು ಸಾವಿರ ಜೂಜು ಆಡ್ತಾರೆ. ಪೊಲೀಸರು ಅವ್ರನ್ನ ಅರೆಸ್ಟ್ ಮಾಡ್ತಾರೆ. ಯಾರೇ ಹೇಳಿದ್ರು ಫೈನ್ ಹಾಕ್ತಾರೆ. ಹತ್ತು ಸಾವಿರ, ಹದಿನೈದು ಸಾವಿರ ಫೈನ್ ಹಾಕ್ತಾರೆ. ಲೋಕಲ್​​ನಲ್ಲೇ ಬಹಳ ರಾಜಕಾರಣ ಇದೆ. ಅರೆಸ್ಟ್ ಆದ ಮೇಲೆ ಕೇಸ್ ಹಾಕದೇ, ರಾಜಕಾರಣಿಗಳ ಒತ್ತಡಕ್ಕೆ ಅವರನ್ನ ಬಿಟ್ಟರೆ, ಆ ಅಧಿಕಾರಿಗಳ ಮೇಲೆ ಕ್ರಮವಹಿಸಬೇಕು ಎಂದರು.

ಜೆಡಿಎಸ್ ಸದಸ್ಯ ಭೋಜೇಗೌಡ ಮಾತನಾಡಿ, ಇಸ್ಪೀಟ್ ಆಟ ಆಡೋಕೇ ಪೊಲೀಸರು ಅನುಮತಿ ಕೊಡ್ತಾರೆ. ನಂಬರ್ಸ್ ಮೇಲೆ ಬೆಟ್ಟಿಂಗ್ ಕಟ್ತಾರೆ ಎಂದರು. ಈ ಮಧ್ಯೆ ಮಧ್ಯಪ್ರವೇಶಿಸಿದ ಭಾರತಿ ಶೆಟ್ಟಿ, ನಾವೇನು ಇಲ್ಲಿ ಇಸ್ಪೀಟ್ ಕಲಿಯೋಕೇ ಬಂದಿದ್ದೀವಾ? ಸಾಕು ನಿಲ್ಲಿಸಿ ಮನೆಗೆ ಹೋಗ್ಬೇಕು ಎಂದರು.

ಭಾರತಿ ಶೆಟ್ಟಿ ಮಾತಿನ ಮಧ್ಯೆ ತೇಜಸ್ವಿನಿ ಗೌಡ ಮಾತಿಗಿಳಿದು, ಈ ವಿಧೇಯಕ ತಂದಿರೋದ್ ಬಹಳ ಉತ್ತಮ. ನಾನು ಇದಕ್ಕೆ ಬೆಂಬಲ ಸೂಚಿಸುತ್ತೇನೆ. ಕಠಿಣವಾದ ಶಿಕ್ಷೆಗಳು ಈ ವಿಧೇಯಕದಲ್ಲಿದೆ. ಯಾವುದೇ ಸ್ಫೋರ್ಟ್ಸ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ರೆ ಅಪರಾಧ. ಕುದುರೆ ರೇಸ್​​ನಲ್ಲಿ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಇದರಿಂದಾಗಿ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಪೊಲೀಸರ ಬಲವರ್ಧನೆ ಹೆಚ್ಚು ಮಾಡಬೇಕಾಗಿದೆ ಎಂದರು.

ಮರಿತಿಬ್ಬೇಗೌಡ ಮಾತನಾಡಿ, ಕುದುರೆ ರೇಸ್​​ನಲ್ಲಿ ಕುದುರೆಗಳಿಗೆ ಬಹಳ ಹಿಂಸೆ ಕೊಡ್ತಾರೆ, ಅದು ಯಾರಿಗೂ ಗೊತ್ತಿಲ್ಲ. ಕೆಲವರು ಕುದುರೆಗಳ ತೊಡೆ ನೋಡಿ ಬೆಟ್ಟಿಂಗ್ ಕಟ್ತಾರೆ. ಅದರಿಂದ ಅವರು ಮೋಸ ಹೋಗ್ತಾರೆ. ಕುದುರೆ ರೇಸ್ ಇರಲಿ, ಬೆಟ್ಟಿಂಗ್ ಬೇಡ ಅಂತ ಕೆಲವರು ಹೇಳಿದ್ರು. ಆದ್ರೆ ಬೆಟ್ಟಿಂಗ್ ಕಟ್ಟಿಲ್ಲ ಅಂದ್ರೆ ಕುದುರೆ ಓಡೋದೇ ಇಲ್ಲ. ನಿಷ್ಠಾವಂತ ಪೊಲೀಸರಿಗೆ ಇಲ್ಲಿ ಕಾಲ ಇಲ್ಲ. ಕೆಲವರು ಪೊಲೀಸರು ಕೆಟ್ಟವರಿದ್ದಾರೆ. ಬಾರ್​​ನಲ್ಲಿ ಏನ್ ಬೇಕಾದ್ರೂ ಮಾಡಿಕೋ ನಮಗೆ ಮಾಮೂಲಿ ಕೊಡಿ ಅಂತ ಕೇಳ್ತಾರೆ.

ಕೆಲ ಪೊಲೀಸರು ಕೆಲವೊಂದು ಕ್ಲಬ್​ಗಳಲ್ಲಿ ಫಿಕ್ಸ್ ಮಾಡಿಕೊಳ್ತಾರೆ. ಯಾರೋ ಒಬ್ಬನ ಜೊತೆ ಆ ಪೊಲೀಸ್ ನಂಟು ಬೆಳೆಸಿಕೊಂಡಿರ್ತಾನೆ. ಅವನು ಫೋನ್ ಮಾಡಿ ಸರ್ ಒಳ್ಳೆ ಅಮೌಂಟ್ ಇದೆ ಬನ್ನಿ ಅಂತಾರೆ. ಪೊಲೀಸರು ರೈಡ್ ಮಾಡ್ತಾರೆ, ಅಲ್ಲಿ ಲಕ್ಷಾಂತರ ರೂ. ಜಫ್ತಿ ಮಾಡ್ತಾರೆ. ಸರ್ಕಾರಕ್ಕೆ ಹತ್ತು ಸಾವಿರ ಲೆಕ್ಕ ಕೊಡ್ತಾರೆ. ಪೊಲೀಸರಿಗೆ ಸರಿಯಾದ ಕ್ರಮ ತೆಗೆದುಕೊಳ್ಳುವಂತೆ ವಿಧೇಯಕ ತನ್ನಿ ಎಂದು ಸಲಹೆ ಇತ್ತರು.

ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿ, ಕುದುರೆ ರೇಸ್ ಒಳಾಂಗಣದಲ್ಲಿ ಬೆಟ್ಟಿಂಗ್ ಕಟ್ಟೋರನ್ನು ತಡೆಯೋದ್ ಕಷ್ಟ ಇದೆ. ಆದರೆ ಹೊರಾಂಗಣದಲ್ಲಿದ್ದು ಆನ್​ಲೈನ್​ನಲ್ಲಿ ಬೆಟ್ ಕಟ್ಟೋರನ್ನು ತಡೆಯುತ್ತೇವೆ. ಎಲ್ಲಿ ಈಜಿ ಮನಿ ಇದೆ, ಅಲ್ಲಿ ರೌಡಿಸಂ ಶುರುವಾಗುತ್ತದೆ. ಇಂಥದ್ದನ್ನ ನಿಲ್ಲಿಸಬೇಕು. ಈ ಕ್ಷಣದಲ್ಲಿ ಈ ತಿದ್ದುಪಡಿ ವಿದೇಯಕ ಅವಶ್ಯಕತೆ ಇದೆ. ತಾವು ದಯವಿಟ್ಟು ಅಂಗೀಕಾರಕ್ಕೆ ಒಪ್ಪಿಕೊಳ್ಳಬೇಕು ಎಂದರು. ಇದಾದ ಬಳಿಕ ವಿಧಾನಸಭೆಯಲ್ಲಿ ಅನುಮೋದನೆಗೊಂಡ ರೂಪದಲ್ಲಿದ್ದ ಪೊಲೀಸ್ ತಿದ್ದುಪಡಿ ವಿದೇಯಕ ವಿಧಾನ ಪರಿಷತ್​​ನಲ್ಲಿ ಅಂಗೀಕಾರವಾಯಿತು.

ಇದನ್ನೂ ಓದಿ: ಕೋವಿಡ್ ಪರಿಹಾರ ಕುರಿತು ತಪ್ಪು ಮಾಹಿತಿ: ಶ್ರೀರಾಮುಲು ವಿರುದ್ಧ ಸದನದಲ್ಲಿ ಕೋಲಾಹಲ

Last Updated : Sep 24, 2021, 3:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.