ಹೊಸಕೋಟೆ(ಬೆಂಗಳೂರು ಗ್ರಾ.): ಯುಗಾದಿ ಹೊಸತೊಡಕು ಆಚರಣೆಯ ಹಿನ್ನೆಲೆಯಲ್ಲಿ ಬಿರಿಯಾನಿ ಪ್ರಿಯರು ಹೊಸಕೋಟೆಯ ಸ್ಟೇಡಿಯಂ ಬಳಿ ಇರುವ ಆನಂದ್ ದಮ್ ಬಿರಿಯಾನಿ ಸೆಂಟರ್ ಎದುರು ಮುಗಿಬಿದ್ದಿದ್ದಾರೆ. ನೂರಾರು ಜನರು ಬೆಳಗ್ಗೆ 5 ಗಂಟೆಯಿಂದಲೇ ಸಾಲುಗಟ್ಟಿ ನಿಂತು ಮಾಂಸ ಖಾದ್ಯ ಸವಿದರು. ಬೆಂಗಳೂರು ನಗರ, ತುಮಕೂರು, ಕನಕಪುರ, ಕೆಂಗೇರಿ, ಬಿಡದಿಯಿಂದ ನೂರಾರು ಮಂದಿ ಬೈಕ್, ಕಾರುಗಳಲ್ಲಿ ಆಗಮಿಸಿದ್ದರು.
ಹೊಸ ತೊಡಕು ಹಿನ್ನೆಲೆಯಲ್ಲಿ ಮುಂಜಾನೆ ನಾಲ್ಕೂವರೆ ಗಂಟೆಯಿಂದಲೇ ಬಿರಿಯಾನಿ ಮಾರಾಟ ಮಾಡಲು ಆರಂಭಿಸಲಾಗಿತ್ತು. ಬಿಸಿ ಬಿಸಿ ಬಿರಿಯಾನಿ ಜತೆಗೆ ಕಾಲು ಸೂಪ್, ಚಿಕನ್ ಕಬಾಬ್, ಚಿಕನ್ ಫ್ರೈ, ಮಟನ್ ಫ್ರೈ ಸವಿಯಲು ಜನ ಸಾಲುಗಟ್ಟಿ ನಿಂತಿದ್ದರು.
ಇದನ್ನೂ ಓದಿ: ಯುಗಾದಿಯ ಹೊಸ ತೊಡಕು: 'ಪಾಪಣ್ಣ ಮಟನ್ ಸ್ಟಾಲ್' ಮುಂದೆ ಗ್ರಾಹಕರ ಸಾಲು